ಮಕಾಸ್ಸರ್ (ಇಂಡೋನೇಷ್ಯಾ): ಮಧ್ಯ ಇಂಡೋನೇಷ್ಯಾದಲ್ಲಿ ಹಾವೊಂದು ಮಹಿಳೆಯೊಬ್ಬಳನ್ನು ಜೀವಂತವಾಗಿ ಸಂಪೂರ್ಣ ನುಂಗಿದ್ದು, ಹುಡುಕಾಟದ ನಂತರ ನಂತರ ಮಹಿಳೆ ಹಾವಿನ ಹೊಟ್ಟೆಯೊಳಗೆ ಸತ್ತಿರುವುದು ಪತ್ತೆಯಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
45 ವರ್ಷದ ಫರೀದಾ ಎಂಬ ಮಹಿಳೆಯ ಪತಿ ಮತ್ತು ದಕ್ಷಿಣ ಸುಲವೆಸಿ ಪ್ರಾಂತ್ಯದ ಕಲೆಂಪಂಗ್ ಗ್ರಾಮದ ನಿವಾಸಿಗಳು ಶುಕ್ರವಾರ ಐದು ಮೀಟರ್ (16 ಅಡಿ) ಅಳತೆಯ ರೆಟಿಕ್ಯುಲೇಟೆಡ್ ಹೆಬ್ಬಾವಿನೊಳಗೆ ಮಹಿಳೆಯನ್ನು ಪತ್ತೆ ಮಾಡಿದ್ದಾರೆ.
ನಾಲ್ಕು ಮಕ್ಕಳ ತಾಯಿ ಫರೀದಾ ಗುರುವಾರ ರಾತ್ರಿ ನಾಪತ್ತೆಯಾಗಿದ್ದರು ಮತ್ತು ಮನೆಗೆ ಹಿಂದಿರುಗಿರಲಿಲ್ಲ. ಇದು ಹುಡುಕಾಟ ನಡೆಸಲು ಕಾರಣವಾಯಿತು ಎಂದು ಗ್ರಾಮದ ಮುಖ್ಯಸ್ಥ ಸುರ್ದಿ ರೋಸಿ ಎಎಫ್‌ಪಿಗೆ ತಿಳಿಸಿದ್ದಾರೆ.
ಆಕೆಯ ಪತಿಗೆ “ಅವಳ ವಸ್ತುಗಳು ಕಂಡುಬಂದಿವೆ … ಇದು ತನಗೆ ಅನುಮಾನವನ್ನುಂಟುಮಾಡಿತು. ನಂತರ ಗ್ರಾಮಸ್ಥರು ಆ ಪ್ರದೇಶವನ್ನು ಹುಡುಕಿದರು. ಅವರು ಶೀಘ್ರದಲ್ಲೇ ಹೊಟ್ಟೆ ಉಬ್ಬಿರುವ ದೊಡ್ಡ ಹೆಬ್ಬಾವನ್ನು ಕಂಡರು ಎಂದು ಸುರ್ದಿ ಹೇಳಿದರು.
“ನಾವು ಹೆಬ್ಬಾವಿನ ಹೊಟ್ಟೆಯನ್ನು ಕತ್ತರಿಸಲು ಮುಂದಾದೆವು. ಹಾಗೆ ಮಾಡಿದ ತಕ್ಷಣ ಫರೀದಾ ಅವರ ತಲೆ ತಕ್ಷಣವೇ ಗೋಚರಿಸಿತು. ಹಾವಿನೊಳಗೆ ಫರೀದಾ ಸಂಪೂರ್ಣ ಬಟ್ಟೆ ಧರಿಸಿರುವ ರೀತಿಯಲ್ಲಿಯೇ ಕಂಡುಬಂದಿದೆ. ಹಾವು ಮಹಿಳೆಯನ್ನು ಹಾಗೆಯೇ ನುಂಗಿದೆ ಎಂದು ಅವರು ಹೇಳಿದರು.
ಇಂತಹ ಘಟನೆಗಳನ್ನು ಅತ್ಯಂತ ಅಪರೂಪವೆಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಡೋನೇಷ್ಯಾದಲ್ಲಿ ಹೆಬ್ಬಾವುಗಳು ಮನುಷ್ಯರನ್ನು ಸಂಪೂರ್ಣವಾಗಿ ನುಂಗಿದ ನಂತರ ಹಲವಾರು ಜನರು ಸಾವಿಗೀಡಾಗಿದ್ದಾರೆ. ಕಳೆದ ವರ್ಷ, ಆಗ್ನೇಯ ಸುಲವೆಸಿಯ ಟಿನಾಂಗ್ಜಿಯಾ ಜಿಲ್ಲೆಯ ನಿವಾಸಿಗಳು ಎಂಟು ಮೀಟರ್ ಹೆಬ್ಬಾವನ್ನು ಕೊಂದರು, ಅದು ಹಳ್ಳಿಯೊಂದರಲ್ಲಿ ರೈತರೊಬ್ಬರನ್ನು ಪೂರ್ಣ ನುಂಗಿ ಹಾಕಿತ್ತು.
2018 ರಲ್ಲಿ, ಆಗ್ನೇಯ ಸುಲವೆಸಿಯ ಮುನಾ ಪಟ್ಟಣದಲ್ಲಿ 54 ವರ್ಷದ ಮಹಿಳೆ ಏಳು ಮೀಟರ್ ಹೆಬ್ಬಾವಿನ ಹೊಟ್ಟೆಯೊಳಗೆ ಶವವಾಗಿ ಪತ್ತೆಯಾಗಿದ್ದರು. ಹಿಂದಿನ ವರ್ಷ, ಪಶ್ಚಿಮ ಸುಲವೆಸಿಯ ರೈತರೊಬ್ಬರನ್ನು ತಾಳೆ ಎಣ್ಣೆ ತೋಟದಲ್ಲಿ ನಾಲ್ಕು ಮೀಟರ್ ಹೆಬ್ಬಾವು ಜೀವಂತವಾಗಿ ನುಂಗಿ ಹಾಕಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ