ಮೋದಿ 3.0 ಸರ್ಕಾರದಲ್ಲಿ ಸಚಿವರು ಯಾರ್ಯಾರು..? : ರಾಜನಾಥ ಸಿಂಗ್‌, ಗಡ್ಕರಿ…ಪ್ರಮಾಣವಚನಕ್ಕೂ ಮುನ್ನ ಫೋನ್‌ ಕರೆ ಸ್ವೀಕರಿಸಿದವರ ಪಟ್ಟಿ

ನವದೆಹಲಿ: ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ಇಂದು ಭಾನುವಾರ ಸಂಜೆ 7:15 ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮೊದಲು ತಮ್ಮ ಸಂಭಾವ್ಯ ಕ್ಯಾಬಿನೆಟ್ ಸಚಿವರು ಮತ್ತು ಸಂಸದರನ್ನು ಭೇಟಿಯಾಗಲಿದ್ದಾರೆ. ರಾಜನಾಥ ಸಿಂಗ್ ಮತ್ತು ನಿತಿನ್ ಗಡ್ಕರಿ ಸೇರಿದಂತೆ ಮೋದಿ 3.0 ಕ್ಯಾಬಿನೆಟ್‌ನಲ್ಲಿ ಸಚಿವರಾಗುವವರು ಈಗಾಗಲೇ ಕರೆಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ.
ನರೇಂದ್ರ ಮೋದಿಯವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿರುವ ಎಲ್ಲಾ ಸಂಸದರನ್ನು ಮೋದಿ ಅವರ ನಿವಾಸಕ್ಕೆ ಬೆಳಿಗ್ಗೆ 11:30 ಕ್ಕೆ ಚಹಾ ಕುಡಿಯಲು ಆಹ್ವಾನಿಸಲಾಗಿದೆ.ಮೂಲಗಳ ಪ್ರಕಾರ, ಕಳೆದ ಸರ್ಕಾರದ ಸಚಿವ ಸಂಪುಟದ 10 ಸಚಿವರು ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮಿತ್ ಶಾ ರಾಜನಾಥ ಸಿಂಗ್, ನಿತಿನ್ ಗಡ್ಕರಿ, ಎಸ್ ಜೈಶಂಕರ, ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ, ಪಿಯೂಷ್ ಗೋಯಲ್, ಹರ್ದೀಪ್ ಸಿಂಗ್ ಪುರಿ ಮತ್ತು ಅಶ್ವಿನಿ ವೈಷ್ಣವ ಅವರು ಕೇಂದ್ರ ಸಚಿವರಾಗಿ ಮುಂದುವರಿಯಲಿದ್ದು, ಅನುರಾಗ್ ಠಾಕೂರ್ ಅವರನ್ನು ಕೈಬಿಡಲಾಗಿದೆ. ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಅವರು ಕೇಂದ್ರ ರಕ್ಷಣಾ ಸಚಿವರಾಗಿ ಮುಂದುವರಿಯುವ ಸಾಧ್ಯತೆಯಿದೆ.
ಬಿಜೆಪಿಯು ಎನ್‌ಡಿಎ ಸರ್ಕಾರದ ಕ್ಯಾಬಿನೆಟ್‌ಗೆ ಹೊಸ ಮುಖಗಳನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಏಕೆಂದರೆ ಹಿಂದಿನ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದ ಸುಮಾರು 20 ಅಭ್ಯರ್ಥಿಗಳು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾರೆ.
ಈವರೆಗೆ ಮೋದಿ ಭೇಟಿಗೆ ಕರೆಗಳನ್ನು ಸ್ವೀಕರಿಸಿದ ಸಂಸದರ ಪಟ್ಟಿ ಇಲ್ಲಿದೆ.
ರಾಜನಾಥ ಸಿಂಗ್-ಬಿಜೆಪಿ
ಅಮಿತ್ ಶಾ-ಬಿಜೆಪಿ
ನಿತಿನ್ ಗಡ್ಕರಿ-ಬಿಜೆಪಿ
ಶಿವರಾಜ ಸಿಂಗ್ ಚೌಹಾಣ ಬಿಜೆಪಿ
ಅರ್ಜುನರಾಮ ಮೇಘವಾಲ್-ಬಿಜೆಪಿ
ಚಿರಾಗ್ ಪಾಸ್ವಾನ್-ಎಲ್‌ಜೆಪಿ
ಎಚ್ ಡಿ ಕುಮಾರಸ್ವಾಮಿ-ಜೆಡಿಎಸ್‌
ಸರ್ಬಾನಂದ ಸೋನೋವಾಲ್-ಬಿಜೆಪಿ
ಪ್ರಹ್ಲಾದ ಜೋಶಿ-ಬಿಜೆಪಿ
ಶಿವರಾಜ ಸಿಂಗ್ ಚೌಹಾಣ-ಬಿಜೆಪಿ
ಡಾ.ಚಂದ್ರಶೇಖರ್ ಪೆಮ್ಮಸಾನಿ-ತೆಲುಗು ದೇಶಂ ಪಾರ್ಟಿ
ರಾಮಮೋಹನ ನಾಯ್ಡು ಕಿಂಜರಾಪು–ತೆಲುಗು ದೇಶಂ ಪಾರ್ಟಿ
ರಾಮನಾಥ ಠಾಕೂರ್-ಜೆಡಿಯು
ಲಲ್ಲನ್ ಸಿಂಗ್-ಜೆಡಿಯು
ಪ್ರತಾಪರಾವ್ ಜಾಧವ್-ಶಿವಸೇನೆ (ಏಕನಾಥ ಶಿಂಧೆ)
ಕೆ ಅಣ್ಣಾಮಲೈ-ಬಿಜೆಪಿ
ಜ್ಯೋತಿರಾದಿತ್ಯ ಸಿಂಧಿಯಾ-ಬಿಜೆಪಿ
ಎಂ.ಎಲ್. ಖಟ್ಟರ್-ಬಿಜೆಪಿ
ಚಂದ್ರಶೇಖರ ಚೌಧರಿ-ಎಜೆಎಸ್‌ಯು
ಜಯಂತ ಚೌಧರಿ-ರಾಷ್ಟ್ರೀಯ ಲೋಕದಳ
ಮನ್ಸುಖ್ ಮಾಂಡವಿಯಾ-ಬಿಜೆಪಿ
ಅಶ್ವಿನಿ ವೈಷ್ಣವ್-ಬಿಜೆಪಿ
ಪಿಯೂಷ್ ಗೋಯಲ್-ಬಿಜೆಪಿ
ಎಸ್. ಜೈಶಂಕರ -ಬಿಜೆಪಿ
ಕಿರಣ್ ರಿಜಿಜು-ಬಿಜೆಪಿ
ರಕ್ಷಾ ಖಡ್ಸೆ-ಬಿಜೆಪಿ
ಕಮಲಜೀತ್ ಸೆಹ್ರಾವತ್-ಬಿಜೆಪಿ
ರಾವ್ ಇಂದ್ರಜಿತ್ ಸಿಂಗ್-ಬಿಜೆಪಿ
ರಾಮದಾಸ ಅಠವಲೆ-ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ
ಜಿತನ್ ರಾಮ ಮಾಂಝಿ-ಹಿಂದೂಸ್ತಾನಿ ಆವಾಮ್ ಮೋರ್ಚಾ
ಗಿರಿರಾಜ್ ಸಿಂಗ್-ಬಿಜೆಪಿ
ಬಂಡಿ ಸಂಜಯ್-ಬಿಜೆಪಿ
ಸುರೇಶ ಗೋಪಿ -ಬಿಜೆಪಿ
ಜಿ ಕಿಶನ್ ರೆಡ್ಡಿ -ಬಿಜೆಪಿ
ಶೋಭಾ ಕರಂದ್ಲಾಜೆ -ಬಿಜೆಪಿ
ಹರ್ಷ ಮಲ್ಹೋತ್ರಾ -ಬಿಜೆಪಿ
ಅನ್ನಪೂರ್ಣ ದೇವಿ -ಬಿಜೆಪಿ
ಅಜಯ ತಮ್ತಾ -ಬಿಜೆಪಿ
ಅನುಪ್ರಿಯಾ ಪಟೇಲ್-ಅಪ್ನಾ ದಲ್ (ಸೋನಿಲಾಲ್)
ಭಗೀರಥ ಚೌಧರಿ-ಬಿಜೆಪಿ
ರವನೀತ್ ಸಿಂಗ್ ಬಿಟ್ಟು-ಬಿಜೆಪಿ
ಬಿಎಲ್ ವರ್ಮಾ-ಬಿಜೆಪಿ
ಜಿತಿನ್ ಪ್ರಸಾದ-ಬಿಜೆಪಿ
ಪಂಕಜ ಚೌಧರಿ-ಬಿಜೆಪಿ
ಸಿ.ಆರ್. ಪಾಟೀಲ-ಬಿಜೆಪಿ

ಪ್ರಮುಖ ಸುದ್ದಿ :-   ತಮಿಳುನಾಡು ಸಾರಾಯಿ ದುರಂತ: ಅಕ್ರಮ ಮದ್ಯ ಸೇವಿಸಿ 33 ಮಂದಿ ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement