ವೀಡಿಯೊ..| ‘ಚಿರತೆಯೋ ಅಥವಾ ಬೆಕ್ಕೋ ?’: ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಿಗೂಢ ಪ್ರಾಣಿಯನ್ನು ತೋರಿಸಿದ ವೀಡಿಯೊ ವೈರಲ್‌

ನವದೆಹಲಿ: ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು, ವಿದೇಶಿ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಇತರ ಗಣ್ಯರು, ಕೈಗಾರಿಕೋದ್ಯಮಿಗಳು ಮತ್ತು ವಿವಿಧ ಗಣ್ಯರು ಸೇರಿದಂತೆ 8,000 ಅತಿಥಿಗಳು ಭಾಗವಹಿಸಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಆಹ್ವಾನಿತ ಅತಿಥಿಯೊಬ್ಬರು ಕ್ಯಾಮೆರಾದಲ್ಲಿ ಅಸಾಮಾನ್ಯ ವಿದ್ಯಮಾನವೊಂದು ಸೆರೆಯಾಗಿದೆ. ರಾಷ್ಟ್ರಪತಿಗಳಿಂದ ಪ್ರಮಾಣ ವಚನ ಸ್ವೀಕಾರದ ಮುಗಿದ ಬಳಿಕ ಬಿಜೆಪಿ ಸಂಸದ ದುರ್ಗಾ ದಾಸ ಉಯ್ಕೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶುಭಾಶಯ ಕೋರುತ್ತಿದ್ದಾಗ ಹಿನ್ನೆಲೆಯಲ್ಲಿ ಬೆಕ್ಕಿನಂತಹ ಪ್ರಾಣಿಯೊಂದು ಮೆಟ್ಟಿಲುಗಳನ್ನು ದಾಟುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.

ಅದು ಚಿರತೆಯೇ? ಸಾಮಾನ್ಯ ಬೆಕ್ಕೆ ? ಅಥವಾ ನಾಯಿಯೇ? ಎಂಬ ಗೊಂದಲ ದೂರವಾಗಿಲ್ಲ. ಈ ವೀಡಿಯೊ ಕ್ಲಿಪ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಅದನ್ನು ಇಲ್ಲಿ ಮೊದಲ 5 ಸೆಕೆಂಡುಗಳಲ್ಲಿ ಗಮನಿಸಬಹುದು, ಬಹುಶಃ ಸಾಕು ಬೆಕ್ಕು ಆಗಿರಬಹುದು” ಎಂದು ಕೆಲವರು ಊಹಿಸಿದ್ದಾರೆ. ರಾಷ್ಟ್ರಪತಿ ಭವನವು ಸುಮಾರು 320 ಎಕರೆ ವಿಸ್ತಾರವಾಗಿದೆ.
ದೆಹಲಿಯ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವೈರಲ್ ವೀಡಿಯೊ ಬಗ್ಗೆ TOI ಗೆ ಪ್ರತಿಕ್ರಿಯಿಸಿದ್ದು “ವೀಡಿಯೊದಲ್ಲಿರುವ ಪ್ರಾಣಿ ಚಿರತೆ ಅಲ್ಲ. ಪ್ರಾಣಿ ನಾಯಿ ಅಥವಾ ಬೆಕ್ಕಿನಂತೆ ಕಾಣುತ್ತದೆ ಎಂದು ಹೇಳಿದ್ದಾರೆ.

ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಪ್ರಮಾಣ ವಚನ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು 72 ಮಂತ್ರಿ ಮಂಡಳಿಗಳೊಂದಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಸಂಜೆ ಪ್ರದಾನಿ ಮೋದಿ ಸೇರಿದಂತೆ 30 ಕ್ಯಾಬಿನೆಟ್ ಮಂತ್ರಿಗಳು, 36 ರಾಜ್ಯ ಸಚಿವರು (MoS) ಮತ್ತು ಸ್ವತಂತ್ರ ಉಸ್ತುವಾರಿ ಹೊಂದಿರುವ ಐದು ರಾಜ್ಯ ಖಾತೆ ಸಚಿವರು ಸೇರಿದಂತೆ 72-ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಪ್ರಮುಖ ಸುದ್ದಿ :-   ತಮಿಳುನಾಡು ಸಾರಾಯಿ ದುರಂತ: ಅಕ್ರಮ ಮದ್ಯ ಸೇವಿಸಿ 33 ಮಂದಿ ಸಾವು

ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಎಸ್ ಜೈಶಂಕರ್ ಅವರಂತಹ ಪ್ರಮುಖರು ಸಂಪುಟ ಸಚಿವರಾಗಿ ಮುಂದುವರಿದಿದ್ದಾರೆ. ಹೊಸ ಮಂತ್ರಿ ಮಂಡಳಿಯು ಎನ್‌ಡಿಎ ಮೈತ್ರಿಕೂಟದ ಪಾಲುದಾರರಿಂದ 11 ಮಂತ್ರಿಗಳನ್ನು ಒಳಗೊಂಡಿದೆ.
140 ಕೋಟಿ ಭಾರತೀಯರಿಗೆ ಸೇವೆ ಸಲ್ಲಿಸಲು ಮತ್ತು ಭಾರತವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಮಂತ್ರಿ ಮಂಡಳಿಯೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೋಮವಾರ ಬೆಳಿಗ್ಗೆ ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡರು ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement