ಉಳ್ಳಾಲ : ಸಮುದ್ರಪಾಲಾಗುತ್ತಿದ್ದ ಮೂವರು ಮಹಿಳೆಯರ ರಕ್ಷಣೆ ; ರಕ್ಷಿಸಿದರೂ ಬಚಾವಾಗದ ಓರ್ವ ಮಹಿಳೆ

ಮಂಗಳೂರು : ಉಳ್ಳಾಲ ಸಮುದ್ರತೀರಕ್ಕೆ ವಿಹಾರಕ್ಕೆ ಬಂದಿದ್ದ ಆಂಧ್ರಪ್ರದೇಶದ ನಾಲ್ವರು ಮಹಿಳೆಯರು ತೆರೆಯ ಅಬ್ಬರಕ್ಕೆ ಸಿಲುಕಿದ್ದು, ಅವರಲ್ಲಿ ಮೂವರನ್ನು ರಕ್ಷಿಸಲಾಗಿದ್ದು ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶದ ಕೊಂಡಾಪುರದ ಸಿರಿಲಿಂಗಪಲ್ಲಿ ನಿವಾಸಿಯಾಗಿರುವ ಪರಿಮಿ ರತ್ನಕುಮಾರಿ (57) ಎಂಬವರು ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಉಳ್ಳಾಲ ಕಡಲತೀರದಲ್ಲಿ ಇವರು ವಿಹರಿಸುತ್ತಿದ್ದ ಸಂದರ್ಭದಲ್ಲಿ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿದೆ. ಅಲೆಯ ರಭಸಕ್ಕೆ ಸಿಲುಕಿದ ನಾಲ್ವರು ಮಹಿಳೆಯರನ್ನು ಅದು ನೀರಿಗೆ ಎಳೆದೊಯ್ದಿದೆ. ಸ್ಥಳೀಯರು ತಕ್ಷಣ ನಾಲ್ವರನ್ನು ಸಮುದ್ರದಿಂದ ಹೊರಗೆಳೆದು ರಕ್ಷಿಸಿದ್ದಾರೆ. ಆದರೆ ಇವರಲ್ಲಿ ಪರಿಮಿ ರತ್ನ ಕುಮಾರಿ ಎಂಬವರು ಪ್ರಜ್ಞೆ ತಪ್ಪಿದ್ದರು. ತಕ್ಷಣವೇ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ಯಲಾಗಿಯಿತು. ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಹೈದರಾಬಾದ್‌ನಿಂದ ಐವರು ಮಹಿಳೆಯರು ಮೈಸೂರಿಗೆ ಬಂದಿದ್ದರು. ಅಲ್ಲಿ ಪ್ರವಾಸ ಮುಗಿಸಿದ ಅವರು ಕಾರಿನಲ್ಲಿ ಕೊಡಗು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ, ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿ, ಉಳ್ಳಾಲ ಸಮುದ್ರ ತೀರ ವಿಹಾರಕ್ಕೆ ಬಂದಿದ್ದರು ಎಂದು ಹೇಳಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement