ಮೋದಿ 3.0 ಸರ್ಕಾರ : ಹಲವು ಸಚಿವರ ಖಾತೆ ಬದಲು | ಬದಲಾಗಿದ್ದು ಯಾರ್ಯಾರ ಖಾತೆಗಳು? ಇಲ್ಲಿದೆ ಮಾಹಿತಿ

ನವದೆಹಲಿ: ಪ್ರಧಾನಿ ಮೋದಿ 3.0 ಸರ್ಕಾರ ಕಾರ್ಯಾರಂಭ ಮಾಡಿದ್ದು, ಸೋಮವಾರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಜೂನ್ 9 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ 71 ಸಚಿವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಹೊಸ ಸಚಿವ ಸಂಪುಟವು ವಿವಿಧ ಹೊಸ ಮುಖಗಳನ್ನು ಒಳಗೊಂಡಿದ್ದು, ಅವರಿಗೆ ಖಾತೆಗಳನ್ನು ಹಂಚಲಾಗಿದೆ. ಆದಾಗ್ಯೂ, ಖಾತೆಗಳನ್ನು ಬದಲಾಯಿಸಿದ ಅನೇಕ ಹಳೆಯ ಮುಖಗಳೂ ಇವೆ. ಪ್ರಮುಖ ಸಚಿವರಿಗೆ ಈ ಹಿಂದೆ ನೀಡಿದ್ದ ಖಾತೆಗಳನ್ನು ಬದಲಾವಣೆ ಮಾಡಿದ್ದರ ಪಟ್ಟಿ ಇಲ್ಲಿದೆ.
ಪ್ರಹ್ಲಾದ ಜೋಶಿ : 2019 ರಲ್ಲಿ ಸಂಸದೀಯ ವ್ಯವಹಾರಗಳ ಸಚಿವಾಲಯ, ಕಲ್ಲಿದ್ದಲು ಸಚಿವಾಲಯ ಹಾಗೂ ಗಣಿ ಸಚಿವಾಲಯದ ಹೊಣೆಗಾರಿಕೆ ನೀಡಲಾಗಿತ್ತು. 2024 ರ ನೂತನ ಸರ್ಕಾರದಲ್ಲಿ ಅವರ ಖಾತೆಗಳು ಬದಲಾಗಿದ್ದು, ಈಗ ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಹೊಣೆಗಾರಿಕೆ ನೀಡಲಾಗಿದೆ.
ಅಶ್ವಿನಿ ವೈಷ್ಣವ : 2019ರಲ್ಲಿ ರೈಲ್ವೆ ಖಾತೆ ಜೊತೆಗೆ ಸಂವಹನ ಸಚಿವಾಲಯದ ಹೊಣೆಗಾರಿಕೆ ನೀಡಲಾಗಿತ್ತು. 2024 ರ ನೂತನ ಸರ್ಕಾರದಲ್ಲಿ ಅವರಿಗೆ ರೈಲ್ವೆ ಖಾತೆ ಹೊಣೆಗಾರಿಕೆ ಮುಂದುವರಿದಿದ್ದರೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಖಾತೆಯನ್ನೂ ನೀಡಲಾಗಿದೆ.
ಜ್ಯೋತಿರಾದಿತ್ಯ ಸಿಂಧಿಯಾ: ಹಿಂದಿನ ಮೋದಿ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಉಕ್ಕು ಸಚಿವಾಲಯದ ಹೊಣೆಗಾರಿಕೆ ನೀಡಲಾಗಿತ್ತು. ಆದರೆ ಈಗ ಮೋದಿ ನೇತೃತ್ವದ ನೂತನ ಸರ್ಕಾರದಲ್ಲಿ ಸಂವಹನ ಸಚಿವಾಲಯ ಹಾಗೂ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಹೊಣೆಗಾರಿಕೆ ನೀಡಲಾಗಿದೆ.

ಗಜೇಂದ್ರ ಸಿಂಗ್ ಶೇಖಾವತ್ : ಹಿಂದಿನ ಸರ್ಕಾರದಲ್ಲಿ ಜಲ ಶಕ್ತಿ ಸಚಿವಾಲಯದ ಹೊಣೆಗಾರಿಕೆ ನೀಡಲಾಗಿತ್ತು. ಈಗ ನೂತನ ಸರ್ಕಾರದಲ್ಲಿ ಸಂಸ್ಕೃತಿ ಸಚಿವಾಲಯ ಹಾಗೂ ಪ್ರವಾಸೋದ್ಯಮ ಸಚಿವಾಲಯದ ಹೊಣೆಗಾರಿಕೆ ನೀಡಲಾಗಿತ್ತು.
ಅನ್ನಪೂರ್ಣಾ ದೇವಿ : ಹಿಂದಿನ ಸರ್ಕಾರದಲ್ಲಿ ರಾಜ್ಯ ಖಾತೆಯಲ್ಲಿ ಸ್ವತಂತ್ರ ಹೊಣೆಗಾರಿಕೆ ಇದ್ದಾಗ ಶಿಕ್ಷಣ ಸಚಿವಾಲಯದ ಹೊಣೆಗಾರಿಕೆ ನೀಡಲಾಗಿತ್ತು. ಈಗ ಈ ಸರ್ಕಾರದಲ್ಲಿ ಕ್ಯಾಬಿನೆಟ್‌ ದರ್ಜೆ ಸಚಿವ ಸ್ಥಾನ ನೀಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಹೊಣೆಗಾರಿಕೆ ನೀಡಲಾಗಿದೆ.
ಕಿರಣ ರಿಜಿಜು : ಹಿಂದಿನ ಭೂ ವಿಜ್ಞಾನ ಸಚಿವಾಲಯ ಹಾಗೂ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಹೊಣೆಗಾರಿಕೆ ನೀಡಲಾಗಿತ್ತು. ಆದರೆ ಈ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಸಚಿವಾಲಯ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಹೊಣೆಗಾರಿಕೆ ನೀಡಲಾಗಿದೆ.
ಹರ್ದೀಪ್ ಸಿಂಗ್ ಪುರಿ : ಹಿಂದಿನ ಸರ್ಕಾರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿ ನೀಡಲಾಗಿತ್ತು. ಆದರೆ ಈ ಸರ್ಕಾರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೊಣೆಗಾರಿಕೆ ಮಾತ್ರ ನೀಡಲಾಗಿದೆ.
ಮನ್ಸುಖ್ ಮಾಂಡವಿಯಾ ; ಹಿಂದಿನ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಹೊಣೆಗಾರಿಕೆ ಇತ್ತು. ಈ ಸರ್ಕಾರದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಹೊಣೆಗಾರಿಕೆ ನೀಡಲಾಗಿದೆ.
ಜಿ.ಕಿಶನ್ ರೆಡ್ಡಿ : ಪ್ರವಾಸೋದ್ಯಮ ಸಚಿವಾಲಯ, ಸಂಸ್ಕೃತಿ ಸಚಿವಾಲಯ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಹೊಣೆಗಾರಿಕೆ ಇತ್ತು. ಈ ಸರ್ಕಾರದಲ್ಲಿ ಕಲ್ಲಿದ್ದಲು ಸಚಿವಾಲಯ ಹಾಗೂ ಗಣಿ ಸಚಿವಾಲಯದ ಹೊಣೆಗಾರಿಕೆ ನೀಡಲಾಗಿದೆ.

ಪ್ರಮುಖ ಸುದ್ದಿ :-   ರಾಷ್ಟ್ರಪತಿ ಮುರ್ಮು ಜನ್ಮದಿನ | ಅವರ ಮುಂದೆಯೇ ಹಾಡು ಹಾಡಿದ ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳು ; ರಾಷ್ಟ್ರಪತಿಗಳ ಕಣ್ಣಲ್ಲಿ ನೀರು-ವೀಕ್ಷಿಸಿ

ರಾವ್ ಇಂದರಜಿತ್ ಸಿಂಗ್: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ರಾಜ್ಯ ದರ್ಜೆ ಸಚಿವ)ದ ಹೊಣೆಗಾರಿಕೆ ಇತ್ತು. ಈಗ ಸಂಸ್ಕೃತಿ ಸಚಿವಾಲಯದ (ರಾಜ್ಯ ದರ್ಜೆ ಸಚಿವ-ಸ್ವತಂತ್ರ) ಹೊಣೆಗಾರಿಕೆ ನೀಡಲಾಗಿದೆ.
ಅನುಪ್ರಿಯಾ ಪಟೇಲ್ : ಹಿಂದಿನ ಸರ್ಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ(ರಾಜ್ಯ ದರ್ಜೆ ಸಚಿವ)ದ ಹೊಣೆಗಾರಿಕೆ ಇತ್ತು. ಈ ಸರ್ಕಾರದಲ್ಲಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ(ರಾಜ್ಯ ದರ್ಜೆ ಸಚಿವ)ದ ಹೊಣೆಗಾರಿಕೆ ನೀಡಲಾಗಿದೆ.
ಎಸ್ ಪಿ ಸಿಂಗ್ ಬಾಘೆಲ್ : ಹಿಂದಿನ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ರಾಜ್ಯ ದರ್ಜೆ ಸಚಿವ)ದ ಹೊಣೆಗಾರಿಕೆ ಇತ್ತು. ಈ ಸರ್ಕಾರದಲ್ಲಿ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಹಾಗೂ ಪಂಚಾಯತ್ ರಾಜ್ ಸಚಿವಾಲಯ(ರಾಜ್ಯ ದರ್ಜೆ ಸಚಿವ)ದ ಹೊಣೆಗಾರಿಕೆ ನೀಡಲಾಗಿದೆ.
ಕ್ರಿಶನ್ ಪಾಲ : ಈ ಹಿಂದಿನ ಸರ್ಕಾರದಲ್ಲಿ ವಿದ್ಯುತ್ ಸಚಿವಾಲಯ ಹಾಗೂ ಭಾರೀ ಕೈಗಾರಿಕೆಗಳ ಸಚಿವಾಲಯ(ರಾಜ್ಯ ದರ್ಜೆ ಸಚಿವ)ದ ಹೊಣೆಗಾರಿಕೆ ಇತ್ತು. ಈ ಸರ್ಕಾರದಲ್ಲಿ ಸಹಕಾರ ಸಚಿವಾಲಯ(ರಾಜ್ಯ ದರ್ಜೆ ಸಚಿವ)ದ ಜವಾಬ್ದಾರಿ ನೀಡಲಾಗಿದೆ.

ಪ್ರಮುಖ ಸುದ್ದಿ :-   ರಣಥಂಬೋರ್‌ 'ಮೊಸಳೆ ಬೇಟೆಗಾರ' ಹೆಣ್ಣು ಹುಲಿ ಸಾವು ; ಅನಾರೋಗ್ಯದಲ್ಲೂ ಸಾಯುವ 3 ದಿನಗಳ ಹಿಂದೆ ಅದು ಮೊಸಳೆ ಬೇಟೆಯಾಡಿದ್ದ ವೀಡಿಯೊ ವೀಕ್ಷಿಸಿ

ಶೋಭಾ ಕರಂದ್ಲಾಜೆ : ಹಿಂದಿನ ಸರ್ಕಾರದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಹಾಗೂ (ರಾಜ್ಯ ದರ್ಜೆ ಸಚಿವ)ದ ಹೊಣೆಗಾರಿಕೆ ಇತ್ತು. ಈಗ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ(ರಾಜ್ಯ ದರ್ಜೆ ಸಚಿವ)ದ ಹೊಣೆಗಾರಿಕೆ ನೀಡಲಾಗಿದೆ.
ಬಿಎಲ್ ವರ್ಮಾ : ಹಿಂದಿನ ಸರ್ಕಾರದಲ್ಲಿ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ ಹಾಗೂ ಸಹಕಾರ ಸಚಿವಾಲಯ (ರಾಜ್ಯ ದರ್ಜೆ ಸಚಿವ) ಹೊಣೆಗಾರಿಕೆ ನೀಡಲಾಗಿತ್ತು. ಈಗ ಅವರಿಗೆ ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ(ರಾಜ್ಯ ದರ್ಜೆ ಸಚಿವ)ದ ಹೊಣೆಗಾರಿಕೆ ವಹಿಸಲಾಗಿದೆ.
ಎಲ್ ಮುರುಗನ್ : ಹಿಂದಿನ ಸರ್ಕಾರದಲ್ಲಿ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ (ರಾಜ್ಯ ದರ್ಜೆ ಸಚಿವ)ದ ಹೊಣೆಗಾರಿಕೆ ಇತ್ತು. ಈಗಸಂಸದೀಯ ವ್ಯವಹಾರಗಳ ಸಚಿವಾಲಯ (ರಾಜ್ಯ ದರ್ಜೆ ಸಚಿವ)ದ ಹೊಣೆಗಾರಿಕೆ ವಹಿಸಲಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement