ವೀಡಿಯೊ…| ಭಾರೀ ಮಳೆ : ವಾಹನದಟ್ಟಣೆ ರಸ್ತೆ ಮೇಲೆ ಓಡಾಡಿದ 8 ಅಡಿ ಉದ್ದದ ಮೊಸಳೆ…

ಮಹಾರಾಷ್ಟ್ರದ ರತ್ನಗಿರಿಯಲ್ಲಿ ಮೊಸಳೆಯೊಂದು ತನ್ನ ನೈಸರ್ಗಿಕ ಆವಾಸಸ್ಥಾನದಿಂದ ಹೊರಬಂದು ರಸ್ತೆ ದಾಟುತ್ತಿರುವುದು ಕಂಡುಬಂದಿದೆ. ಇದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ನಂತರ ಸಾಮಾಜಿಕ ಮಾಧ್ಯಮದಲ್ಲಿ ಅದು ವೈರಲ್‌ ಆಗಿದೆ.
ವರದಿಗಳ ಪ್ರಕಾರ, ಮಹಾರಾಷ್ಟ್ರದ ಕರಾವಳಿ ಜಿಲ್ಲೆಯಾದ ರತ್ನಗಿರಿಯಲ್ಲಿ ಸುರಿದ ಭಾರೀ ಮಳೆಯ ನಂತರ 8 ಅಡಿ ಉದ್ದದ ಮೊಸಳೆ ಹತ್ತಿರದ ಶಿವ ನದಿಯಿಂದ ಕೊಚ್ಚಿಹೋದ ನಂತರ ರಸ್ತೆಗೆ ದಾರಿ ತಪ್ಪಿ ಬಂದಿದೆ.
“ಭಾನುವಾರದ ಭಾರೀ ಮಳೆಯ ನಂತರ ದಾರಿ ತಪ್ಪಿ ಬಂದ ಮೊಸಳೆಯನ್ನು ರತ್ನಗಿರಿಯಲ್ಲಿ ವಾಹನ ಚಾಲಕರು ನೋಡಿದ್ದಾರೆ. ಮಳೆ ನೀರಿನಿಂದ ತುಂಬಿದ ರಸ್ತೆಯಲ್ಲಿ ವಾಹನದ ಹಿಂದಿನಿಂದ ಮೊಸಳೆ ಹೊರಬರುವುದನ್ನು ವೀಡಿಯೊ ತೋರಿಸುತ್ತದೆ. ಮೊಸಳೆ ರಸ್ತೆಯಲ್ಲಿ ಅಡ್ಡಾಡುತ್ತಿರುವುದನ್ನು ಕಾಣಬಹುದು.

ಮೊಸಳೆ ವಾಹನವನ್ನು ಸಮೀಪಿಸುತ್ತಿದ್ದಂತೆ, “ಖಿಡ್ಕಿ ಬಂದ್‌ ಹೈ, ಖಿಡ್ಕಿ ಬಂದ್‌ ಹೈ [ಕಿಟಕಿ ಮುಚ್ಚಲಾಗಿದೆ, ಕಿಟಕಿ ಮುಚ್ಚಲಾಗಿದೆ ]” ಎಂದು ಒಬ್ಬ ವ್ಯಕ್ತಿ ಹೇಳುವುದನ್ನು ಕೇಳಬಹುದು.
ರತ್ನಗಿರಿಯು ಮಗ್ಗರ್ ಜಾತಿ ಮೊಸಳೆಗಳಿಗೆ ಹೆಸರುವಾಸಿಯಾಗಿದೆ, ಇದು ಭಾರತದಲ್ಲಿನ ಮೂರು ಮೊಸಳೆ ಜಾತಿಗಳಲ್ಲಿ ಒಂದಾಗಿದೆ. ರತ್ನಗಿರಿ ಜಿಲ್ಲೆಯ ಚಿಪ್ಲುನ್ ಮತ್ತು ಇತರ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ನದಿಗಳ ನೀರಿನ ಮಟ್ಟವೂ ಹೆಚ್ಚಿದೆ. ಹವಾಮಾನ ಇಲಾಖೆ ಪ್ರಕಾರ ರತ್ನಗಿರಿ ಜಿಲ್ಲೆಯಲ್ಲಿ ಜುಲೈ 2ರವರೆಗೆ ಮಳೆ ಮುಂದುವರೆಯಲಿದೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ಈ ಹಿಂದೆ 2019ರಲ್ಲಿ ರತ್ನಗಿರಿಯ ಚರಂಡಿಯಲ್ಲಿ 8 ಅಡಿ ಉದ್ದದ ಮೊಸಳೆ ಕಾಣಿಸಿಕೊಂಡಿತ್ತು. ನಂತರ ಚಿಪ್ಲುನ್‌ನ ಪ್ರವಾಸಿ ತಾಣದಲ್ಲಿ ರಸ್ತೆಬದಿಯ ಚರಂಡಿಯಿಂದ ಅದನ್ನು ರಕ್ಷಿಸಲಾಗಿತ್ತು. ರತ್ನಗಿರಿಯಲ್ಲಿ ಭಾರೀ ಮಳೆಯಿಂದಾಗಿ ಕರಾವಳಿ ಜಿಲ್ಲೆಯ ವಶಿಷ್ಟಿ ನದಿಯಲ್ಲಿ ಪ್ರವಾಹ ಉಂಟಾಗಿ ಈ ಘಟನೆ ನಡೆದಿತ್ತು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದರು.
ಸಮೀಪದ ನದಿಯಿಂದ ನೀರು ಉಕ್ಕಿ ಹರಿದಿದ್ದರಿಂದ ಜಲಾವೃತಗೊಂಡಿರುವ ಪಟ್ಟಣದ ಒಳಚರಂಡಿ ವ್ಯವಸ್ಥೆಗೆ ಮೊಸಳೆ ನುಗ್ಗಿರುವ ಶಂಕೆ ವ್ಯಕ್ತವಾಗಿದೆ. ಬೃಹತ್ ಗಾತ್ರದ ಸರೀಸೃಪವು ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾಗ ಚರಂಡಿಯಿಂದ ವಿಚಿತ್ರ ಶಬ್ದಗಳು ಹೊರಡುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement