ಯುರೋಪ್‌ನಲ್ಲಿ ಸಂಘರ್ಷ, ಮಂಗಳನ ಮೇಲೆ ಯುದ್ಧ, ‘ಏಲಿಯನ್ಸ್’ ಜೊತೆ ಸಂಪರ್ಕ, ಪ್ರಪಂಚದ ಆಯುಷ್ಯ…: ಮುಂಬರುವ ವರ್ಷಗಳ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ…!

ನಿಖರ ಭವಿಷ್ಯಕ್ಕೆ ಹೆಸರುವಾಸಿಯಾಗಿರುವ ಬಾಬಾ ವಂಗಾ ಎಂದೇ ಖ್ಯಾತಿ ಪಡೆದಿರುವ ವಾಂಗೆಲಿಯಾ ಪಾಂಡೆವಾ ಗುಸ್ಚೆರೋವಾ ಮತ್ತೊಂದು ಭವಿಷ್ಯ ಇದೀಗ ಭಾರೀ ಚರ್ಚೆಗೆ ಕಾರಣ ಆಗಿದೆ. ಬಲ್ಗೇರಿಯಾ ಮೂಲದ ಬಾಬಾ ವಂಗಾ 1996ರಲ್ಲಿ 85ನೇ ವಯಸ್ಸಿಗೆ ನಿಧನರಾಗಿದ್ದಾರೆ. ಅವರು ತಮ್ಮ ಜೀವತಾವಧಿಯಲ್ಲಿ ನುಡಿದ ಹಲವಾರು ಭವಿಷ್ಯಗಳು ನಿಜವಾಗಿದ್ದು, ಹೀಗಾಗಿ ಅವರು ‘ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್’ ಎಂದೇ ಖ್ಯಾತರಾಗಿದ್ದಾರೆ.
ಅವರು 12ನೇ ವಯಸ್ಸಿಗೆ ದೃಷ್ಟಿ ಕಳೆದುಕೊಂಡಿದ್ದರು. ಅಂದಿನಿಂದ ನನಗೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಉಡುಗೊರೆ ಸಿಕ್ಕಿತು ಎಂದು ಅವರು ಹೇಳಿಕೊಂಡಿದ್ದರು.
Marca.com ಪ್ರಕಾರ ಅಮೆರಿಕದ ಮೇಲೆ 2001 ಸೆಪ್ಟೆಂಬರ್ 11ರಂದು ವಿಮಾನದ ಮೂಲಕ ದಾಳಿ ನಡೆಯಲಿದೆ ಎಂದು ನುಡಿದಿದ್ದ ಭವಿಷ್ಯ ಅವರ ಭಿಷ್ಯವಾಣಿಗಳಲ್ಲಿ ಒಂದಾಗಿದೆ. ನಿಜವಾದ ನಂತರ ಬಾಬಾ ವೆಂಗಾ ಅವರ ಭವಿಷ್ಯಕ್ಕೆ ಅಪಾರ ಅಭಿಮಾನಿಗಳು ಇದ್ದಾರೆ.
ಎರಡು ಲೋಹದ ಹಕ್ಕಿಗಳು ನಮ್ಮ ಅಮೆರಿಕನ್‌ ಸಹೋದರರ ಮೇಲೆ ಅಪ್ಪಳಿಸುತ್ತವೆ, ತೋಳಗಳು ಪೊದೆಗಳಿಂದ ಕೂಗುತ್ತವೆ, ಮತ್ತು ಮುಗ್ಧರ ರಕ್ತವು ನದಿಗಳಲ್ಲಿ ಹರಿಯುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದರು. ಇದು, ಇದು ಅಮೆರಿಕದ ಅವಳಿ ಗೋಪುರದ ಮೇಲೆ 2001 ಸೆಪ್ಟೆಂಬರ್ 11ರಂದು ನಡೆದ ದಾಳಿಯನ್ನು ಹೋಲುತ್ತದೆ.

ಪ್ರಮುಖ ಸುದ್ದಿ :-   ಹಾರುವ ಕಾರಿನ ಅದ್ಭುತ ವಿಡಿಯೊಗಳು | ಗಾಳಿಯಲ್ಲಿ ಹಾರುವ, ತಲೆಕೆಳಗಾಗಿ ಚಲಿಸುವ, ಪಲ್ಟಿ ಹೊಡೆದು ಮತ್ತೆ ಓಡುವ ಟೆಸ್ಲಾ ಕಾರು

ಅವರು ಪ್ರಪಂಚದ ಅಂತ್ಯದ ದಿನಾಂಕದ ಬಗ್ಗೆ ಹೇಳಿರುವುದು ಈಗ ಚರ್ಚೆಯಾಗುತ್ತಿದೆ. ಬಾಬಾ ವಂಗಾ ಅವರ ಭವಿಷ್ಯದ ಪ್ರಕಾರ, “ಊಹಿಸಲಾಗದ” ಅನುಪಾತದ ಕಾಸ್ಮಿಕ್ ಘಟನೆಯಿಂದಾಗಿ ಪ್ರಪಂಚವು 5079ರಲ್ಲಿ ಅಂತ್ಯವಾಗುತ್ತದೆ.
“ಊಹಿಸಲಾಗದ” ಪ್ರಮಾಣದ ಕಾಸ್ಮಿಕ್ ಘಟನೆಯ ನಂತರ ಪ್ರಪಂಚವು 5079 ರಲ್ಲಿ ಕೊನೆಗೊಳ್ಳುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
2025 ರಲ್ಲಿ ಯುರೋಪ್‌ನಲ್ಲಿ ದೊಡ್ಡ ಸಂಘರ್ಷ ಉಂಟಾಗಲಿದೆ ಈ ಸಂಘರ್ಷವು ಖಂಡದಲ್ಲಿ ಜನಸಂಖ್ಯೆಯಲ್ಲಿ ದೊಡ್ಡ ಕುಸಿತವನ್ನು ಉಂಟುಮಾಡುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಅವರ ಭವಿಷ್ಯವು ಹವಾಮಾನ ಬಿಕ್ಕಟ್ಟನ್ನು ಒಳಗೊಂಡಿದೆ, ಇದು ಸಾಕಷ್ಟು ಸ್ಪಷ್ಟವಾಗಿದೆ. 2033 ರಲ್ಲಿ ಧ್ರುವಗಳಲ್ಲಿನ ಮಂಜುಗಡ್ಡೆಯ ಕರಗುವಿಕೆಯು ಸಮುದ್ರ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಅಲ್ಲದೆ, 2170ರಲ್ಲಿ ಜಾಗತಿಕವಾಗಿ ಭೀಕರ ಬರ ಬರಲಿದೆ ಎಂದೂ ಅವರು ಹೇಳಿದ್ದಾರೆ. ಪ್ರಪಂಚವು ಯಾವಾಗ ಕೊನೆಗೊಳ್ಳುತ್ತದೆ ಎಂದು ಅವರು ಭವಿಷ್ಯ ನುಡಿದ್ದು, ಪ್ರಪಂಚದ ಅಂತ್ಯವು 5079 ರಲ್ಲಿ ಸಂಭವಿಸುತ್ತದೆ ಎಂದು ಬಾಬಾ ವಂಗಾ ಹೇಳಿದ್ದಾರೆ.

ಮುಂಬರುವ ವರ್ಷಗಳ ಬಗ್ಗೆ ಬಾಬಾ ವಂಗಾ ಅವರ ಪ್ರಮುಖ ಭವಿಷ್ಯವಾಣಿಗಳು ಇಲ್ಲಿವೆ:
2025: ಯುರೋಪ್‌ನಲ್ಲಿನ ಪ್ರಮುಖ ಸಂಘರ್ಷದಿಂದಾಗಿ ಆ ಖಂಡದ ಜನಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಲಿದೆ.
2028: ಹೊಸ ಶಕ್ತಿಯ ಮೂಲಗಳನ್ನು ಹುಡುಕುವ ಪ್ರಯತ್ನದಲ್ಲಿ ಮಾನವರು ಶುಕ್ರ ಗ್ರಹವನ್ನು ತಲುಪುತ್ತಾರೆ.
2033: ಧ್ರುವೀಯ ಮಂಜುಗಡ್ಡೆಗಳ ಕರಗುವಿಕೆಯು ಸಮುದ್ರ ಮಟ್ಟದಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಲಿದೆ.
2076: ಕಮ್ಯುನಿಸಂ ಜಾಗತಿಕವಾಗಿ ಮರಳಲಿದೆ.
2130: ಭೂಮ್ಯತೀತ ನಾಗರಿಕತೆಗಳೊಂದಿಗೆ ಸಂಪರ್ಕ ಸಾಧ್ಯವಾಗಲಿದೆ
2170: ಜಾಗತಿಕವಾಗಿ ಬರ ಬರಲಿದೆ
3005: ಮಂಗಳದ ಮೇಲೆ ಯುದ್ಧ ನಡೆಯಲಿದೆ
3797: ಸೌರವ್ಯೂಹದೊಳಗೆ ಮತ್ತೊಂದು ಗ್ರಹಕ್ಕೆ ಚಲಿಸುವ ಸಾಮರ್ಥ್ಯವನ್ನು ಮಾನವ ಹೊಂದುತ್ತಾನೆ, ಭೂಮಿ ನಾಶವಾಗಲಿದೆ.
5079: ಪ್ರಪಂಚದ ಅಂತ್ಯ.

ಪ್ರಮುಖ ಸುದ್ದಿ :-   ಹಾರುವ ಕಾರಿನ ಅದ್ಭುತ ವಿಡಿಯೊಗಳು | ಗಾಳಿಯಲ್ಲಿ ಹಾರುವ, ತಲೆಕೆಳಗಾಗಿ ಚಲಿಸುವ, ಪಲ್ಟಿ ಹೊಡೆದು ಮತ್ತೆ ಓಡುವ ಟೆಸ್ಲಾ ಕಾರು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement