ರಾಹುಲ್ ದ್ರಾವಿಡ್ ಕುರಿತು ಭಾವನಾತ್ಮಕ ʼಬರಹʼ ಹಂಚಿಕೊಂಡ ಭಾರತದ ಕ್ರಿಕೆಟ್‌ ತಂಡದ ನಾಯಕ ರೋಹಿತ ಶರ್ಮಾ

ರೋಹಿತ್ ಶರ್ಮಾ ಅವರು ನಿರ್ಗಮಿತ ಭಾರತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಭಾವನಾತ್ಮಕ ಬೀಳ್ಕೊಡುಗೆ ಟಿಪ್ಪಣಿ ಬರೆದಿದ್ದಾರೆ. ಅವರ ನಮ್ರತೆ ಮತ್ತು ಆಟಗಾರರನ್ನು ಸಮಾಧಾನದಲ್ಲಿ ಇರಿಸುವ ಅವರ ಸಾಮರ್ಥ್ಯಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
“ಆತ್ಮೀಯ ರಾಹುಲ್ ಭಾಯ್, ಈ ಬಗ್ಗೆ ನನ್ನ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ನಾನು ಸರಿಯಾದ ಪದಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೇನೆ. ಆದರೆ ನನಗೆ ಆ ಪದ ಸಿಗುತ್ತದೆ ಎಂಬ ಬಗ್ಗೆ ಖಾತ್ರಿಯಿಲ್ಲ ಆದ್ದರಿಂದ ನನ್ನ ಈ ಪ್ರಯತ್ನ ಮಾಡಿದ್ದೇನೆ” ಎಂದು ರೋಹಿತ್ ಇಸ್ಟ್ಟಾಗ್ರಾಂ (Instagram)ನಲ್ಲಿ ಬರೆದಿದ್ದಾರೆ.
“ನನ್ನ ಬಾಲ್ಯದ ದಿನಗಳಿಂದಲೂ ನಾನು ಇತರ ಕೋಟ್ಯಂತರ ಜನರಂತೆ ನಿಮ್ಮನ್ನು ನೋಡುತ್ತಿದ್ದೇನೆ. ಆದರೆ ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ಸಿಕ್ಕಿದ್ದು ನನ್ನ ಅದೃಷ್ಟ. ನಮ್ಮ ಕೌಶಲ್ಯಗಳನ್ನು ವೃದ್ಧಿಸಿದ್ದಕ್ಕಾಗಿ ಮತ್ತು ಸ್ಟಾರ್‌ಡಮ್‌ ಅನ್ನು ಡ್ರೆಸ್ಸಿಂಗ್ ರೂಮ್‌ನ ಹೊರಗೇ ಬಿಡುವಂತೆ ಮಾಡಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸುತ್ತೇನೆ ಎಂದು ರೋಹಿತ್‌ ಹೇಳಿದ್ದಾರೆ.

ನೀವು ಈ ಆಟದ ಮೇರು ವ್ಯಕ್ತಿತ್ವ. ನಿಮ್ಮ ಎಲ್ಲಾ ಪುರಸ್ಕಾರಗಳು ಮತ್ತು ಸಾಧನೆಗಳನ್ನು ಬದಿಗಿಟ್ಟು ನೀವು ಕೋಚ್ ಆಗಿ ನಮ್ಮ ಮಟ್ಟಕ್ಕೆ ಇಳಿದು ನಮಗೆ ಮಾರ್ಗದರ್ಶನ ನೀಡಿದ್ದೀರಿ ಎಂದಷ್ಟೇ ನಾನು ಹೇಳಬಲ್ಲೆ. ನಾವೆಲ್ಲರೂ ನಿಮಗೆ ಏನನ್ನಾದರೂ ಹೇಳುವಷ್ಟು ಆರಾಮದಾಯಕ ವಾತಾರವರಣವಿತ್ತು, ಅದು ನಿಮ್ಮ ಉಡುಗೊರೆ, ನಿಮ್ಮ ನಮ್ರತೆ ಮತ್ತು ಈ ಆಟಕ್ಕೆ ನೀವು ನೀಡಿದ ಕೊಡುಗೆ, ಗೌರವ ಮತ್ತು ಪ್ರೀತಿಯಾಗಿದೆ. ನಾನು ತುಂಬಾ ಕಲಿತಿದ್ದೇನೆ. ನಿಮ್ಮೊಂದಿಗಿನ ಪ್ರತಿ ಕ್ಷಣವೂ ನೆನಪಿನಲ್ಲಿರುತ್ತದೆ’ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.
ದ್ರಾವಿಡ್ ನಾಯಕತ್ವದಲ್ಲಿ ಐರ್ಲೆಂಡ್ ವಿರುದ್ಧದ ಏಕದಿನದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಆಟಕ್ಕೆ ರೋಹಿತ್ ಪಾದಾರ್ಪಣೆ ಮಾಡಿದರು. ಈ ಜೋಡಿಯು ನಾಯಕ ಮತ್ತು ಮುಖ್ಯ ಕೋಚ್‌ ಆಗಿ 2024 ರಲ್ಲಿ T20 ವಿಶ್ವಕಪ್ ಗೆಲ್ಲುವ ಮೂಲಕ ಭಾರತದ ಐಸಿಸಿ (ICC) ಪ್ರಶಸ್ತಿ-ಬರವನ್ನು ಕೊನೆಗೊಳಿಸಿತು. ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ಪಂದ್ಯದ (ODI) ವಿಶ್ವಕಪ್‌ನಲ್ಲಿ ಅಜೇಯ ತಂಡವಾಗಿ ಫೈನಲ್‌ ಪ್ರವೇಶಿದ್ದ ಭಾರತವು ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು. ಆದರೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತವು ಚಾಂಪಿಯನ್‌ ಆಗುವ ಮೂಲಕ ಭಾರತದ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ಮೂರು ವರ್ಷಗಳ ಅವಧಿಯನ್ನೂ ಮುಕ್ತಾಯಗೊಳಿಸಿತು.

ಪ್ರಮುಖ ಸುದ್ದಿ :-   ಚಲನಚಿತ್ರ ನಿರ್ದೇಶಕ ರಾಮಗೋಪಾಲ ವರ್ಮಾಗೆ ಮೂರು ತಿಂಗಳು ಜೈಲು ಶಿಕ್ಷೆ

“ನನ್ನ ಹೆಂಡತಿ ನಿಮ್ಮನ್ನು ನನ್ನ ಕೆಲಸದ ಹೆಂಡತಿ ಎಂದು ಕರೆಯುತ್ತಾಳೆ ಮತ್ತು ನಿಮ್ಮನ್ನು ಹಾಗೆ ಕರೆಯಲು ನಾನು ಅದೃಷ್ಟಶಾಲಿಯಾಗಿದ್ದೇನೆ” ಎಂದು ರೋಹಿತ್ ಬರೆದಿದ್ದಾರೆ. “ನಿಮ್ಮ ಸಾಧನೆಯಲ್ಲಿ ಇಂದೊಂದು ಕೊರತೆಯಿತ್ತು ಮತ್ತು ನಾವು ಅದನ್ನು ಒಟ್ಟಿಗೆ ಸಾಧಿಸಿದ್ದು ನನಗೆ ತುಂಬಾ ಸಂತೋಷವಾಗಿದೆ. ರಾಹುಲ್ ಭಾಯ್ ನಿಮ್ಮನ್ನು ನನ್ನ ವಿಶ್ವಾಸಾರ್ಹ, ನನ್ನ ತರಬೇತುದಾರ ಮತ್ತು ನನ್ನ ಸ್ನೇಹಿತ ಎಂದು ಕರೆಯುವುದು ಸೌಭಾಗ್ಯವಾಗಿದೆ ಎಂದು ರೋಹಿತ್‌ ಶರ್ಮಾ ಬರೆದಿದ್ದಾರೆ.
2007ರಲ್ಲಿ ರಾಹುಲ್ ದ್ರಾವಿಡ್ ಅವರು ಭಾರತ ತಂಡದ ನಾಯಕರಾಗಿದ್ದಾಗ ರೋಹಿತ್, ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.ಕಳೆದ ವರ್ಷ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋಲಿನ ಬಳಿಕ ಭಾರತ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿಯದಂತೆ ರೋಹಿತ್ ತಡೆದಿದ್ದನ್ನು ರಾಹುಲ್ ಇತ್ತೀಚೆಗೆ ಹೇಳಿಕೊಂಡಿದ್ದರು.
ಕಳೆದ ವರ್ಷದ ಏಕದಿನ ವಿಶ್ವಕಪ್ ಫೈನಲ್‌ನ ನಂತರ ರೋಹಿತ್ ಅವರ ಫೋನ್ ಕರೆ ಮಾಡಿ T20 ವಿಶ್ವಕಪ್ 2024ರ ವರೆಗೆ ಮುಖ್ಯ ಕೋಚ್‌ ಹುದ್ದೆಯಲ್ಲಿ ಮುಂದುವರಿಯುವಂತೆ ಕೇಳಿಕೊಂಡಿದ್ದನ್ನು ರಾಹುಲ್‌ ದ್ರಾವಿಡ್‌ ಅವರು ಬ್ರಿಡ್ಜ್‌ಟೌನ್‌ನಲ್ಲಿ ಭಾರತದ T20 ವಿಶ್ವಕಪ್ ಗೆಲುವಿನ ನಂತರ ರಾಹುಲ್‌ ದ್ರಾವಿಡ್‌ ನೆನಪಿಸಿಕೊಂಡಿದ್ದರು.

ಪ್ರಮುಖ ಸುದ್ದಿ :-   ಕಪಿಲ್ ಶರ್ಮಾ, ರಾಜಪಾಲ ಯಾದವ್ ಸೇರಿ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement