ವೀಡಿಯೊ…| ಭಾರಿ ಭೂಕುಸಿತ-ಕುಸಿದ ಬೃಹತ್ ಪರ್ವತದ ಒಂದು ಭಾಗ : ಆಗಸದೆತ್ತರಕ್ಕೆ ಧೂಳಿನ ಮೋಡ ; ಬದರಿನಾಥ ಹೆದ್ದಾರಿ ಬಂದ್

ಡೆಹ್ರಾಡೂನ್‌: ಈ ವರ್ಷ ಮುಂಗಾರು ಮಳೆ ಉತ್ತರ ಭಾರತಕ್ಕೆ ಕಾಲಿಡುತ್ತಿದ್ದಂತೆ ಹಿಮಾಲಯದ ಉತ್ತರಾಖಂಡ ರಾಜ್ಯ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಭಾರೀ ಮಳೆಯಿಂದಾಗಿ ರಾಜ್ಯದ ಚಮೋಲಿ ಜಿಲ್ಲೆಯ ಬದರಿನಾಥ ರಾಷ್ಟ್ರೀಯ ಹೆದ್ದಾರಿಯ ಪಾತಾಳಗಂಗಾ ಲಾಂಗ್ಸಿ ಸುರಂಗದ ಬಳಿ ಭಾರಿ ಭೂಕುಸಿತ ಉಂಟಾಗಿದ್ದು, ಬುಧವಾರ ರಸ್ತೆಯನ್ನು ನಿರ್ಬಂಧಿಸಲಾಗಿದೆ. ಭೂಕುಸಿತದಿಂದ ಭಾರಿ ಪ್ರಮಾಣದ ಧೂಳು ಆವರಿಸಿದ್ದರಿಂದ ಗೋಚರತೆಗೆ ಕೆಲಕಾಲ ಅಡ್ಡಿ ಉಂಟಾಯಿತು.
ಬುಧವಾರ ಬೆಳಿಗ್ಗೆ 11ರ ಸುಮಾರಿಗೆ ಮಳೆ ಇಲ್ಲದಿದ್ದರೂ ಪಾತಾಳಗಂಗೆ ಬಳಿ ಬೃಹತ್ ಪರ್ವತದ ಒಂದು ಭಾಗ ಕುಸಿದಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿ ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿಯ ಸುರಂಗದ ಬಳಿ ಕುಸಿತ ಸಂಭವಿಸಿದ್ದು, ಲಕ್ಷಾಂತರ ಟನ್ ಮಣ್ಣು, ಕಲ್ಲುಗಳು ಮತ್ತು ಬಂಡೆಗಳು ಉರುಳಿ ಬಿದ್ದಿದ್ದರಿಂದ ಸದ್ಯ ಸಂಚಾರ ಆರಂಭವಾಗುವುದು ಕಷ್ಟಸಾಧ್ಯವಾಗಿದೆ.
ಈ ಪ್ರದೇಶದಲ್ಲಿ ಭೂಕುಸಿತ ಪದೇ ಪದೇ ಸಂಭವಿಸುತ್ತಿದ್ದ ಕಾರಣದಿಂದ ಇತ್ತೀಚೆಗೆ ಸುರಂಗ ನಿರ್ಮಾಣ ಮಾಡಲಾಗಿತ್ತು. ಈಗ ಸುರಂಗದ ಪ್ರವೇಶ ದ್ವಾರದಲ್ಲೇ ಭೂಕುಸಿದಿಂದ ಮಣ್ಣು, ಕಲ್ಲುಗಳು ರಾಶಿಯಾಗಿ ಬಿದ್ದಿವೆ.

ಇದು ಅತ್ಯಂತ ಪ್ರಬಲವಾದ ಭೂಕುಸಿತವಾಗಿದ್ದು, ಅಲಕಾನಂದ ಮತ್ತು ಪಾತಾಳಗಂಗೆ ಕಣಿವೆಯು ಕೆಲ ಕಾಲ ಕಂಪಿಸುತ್ತಿತ್ತು ಎಂದು ಲಾಂಜಿ ಹಳ್ಳಿಯ ವಿಕ್ರಮ ಸಿಂಗ್ ಎಂಬವರು ಹೇಳಿದ್ದಾರೆ.
ಬದರಿನಾಥ ವಿಧಾನಸಭೆ ಉಪಚುನಾವಣೆಗೆ ಮತದಾನ ಮಾಡಲು ಹೋಗುತ್ತಿದ್ದ ಜನ ಭೂಕುಸಿತದಿಂದ ಗಾಬರಿಯಿಂದ ಓಡಿದ್ದಾರೆ. ಭೂಕುಸಿತದ ಉಂಟಾದ ಆಗಸದೆತ್ತರಕ್ಕೆ ಆವರಿಸಿದ್ದ ಧೂಳಿನ ಮೋಡಗಳನ್ನು ನೋಡುತ್ತ ಭಯದಲ್ಲೇ ನಿಂತಿದ್ದಾರೆ. ಕೆಲಕಾಲ ಇಡೀ ಪ್ರದೇಶವೇ ಧೂಳಿನ ಮೋಡಗಳಿಂದ ಆವೃತ್ತವಾಗಿತ್ತು.
ಭೂಕುಸಿತದಿಂದಾಗಿ ಉಂಟಾದ ರಸ್ತೆ ನಿರ್ಬಂಧಿಸಿದ ಕುರಿತು ಪೋಸ್ಟ್‌ ಹಂಚಿಕೊಂಡ ಉತ್ತರಾಖಂಡ ಪೊಲೀಸರು, “ಬದರಿನಾಥ ಹೆದ್ದಾರಿಯ ಪಾತಾಳಗಂಗಾ ಲಾಂಗ್ಸಿ ಸುರಂಗದ ಬಳಿ ಬೆಟ್ಟದಲ್ಲಿ ಭೂಕುಸಿತದಿಂದಾಗಿ ರಸ್ತೆಯನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಭೂ ಕುಸಿತದಿಂದ ಗ್ರಾಮವೇ ನಾಶವಾದ್ರೂ ಅಪಾಯದ ಬಗ್ಗೆ ಮಧ್ಯರಾತ್ರಿ ಎಚ್ಚರಿಸಿ 67 ಜನರ ಜೀವ ಉಳಿಸಿದ ನಾಯಿ..!

ವೀಡಿಯೋದಲ್ಲಿ, ಗುಡ್ಡದ ದೊಡ್ಡ ಭಾಗವು ಸುರಂಗದ ಬಳಿ ರಸ್ತೆಯ ಮೇಲೆ ಬೀಳುವುದನ್ನು ಕಾಣಬಹುದು, ಇದು ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಲು ಕಾರಣವಾಗಿದೆ. ನಿರ್ಬಂಧಿಸಿದೆ. ಈವರೆಗೆ ಯಾವುದೇ ಪ್ರಾಣಹಾನಿಯಾದ ವರದಿಯಾಗಿಲ್ಲ.
ಚಮೋಲಿ ಪೊಲೀಸರು ಭೂಕುಸಿತದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಹಾಗೂ ಜನರು ತಾಳ್ಮೆಯಿಂದ ಇರುವಂತೆ ಕೇಳಿಕೊಂಡಿದ್ದಾರೆ. “ಭೂಕುಸಿತದಿಂದಾಗಿ ಪಾತಾಳಗಂಗಾ ಸುರಂಗದ ಬಳಿ ಬದರಿನಾಥ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ದಯವಿಟ್ಟು ತಾಳ್ಮೆಯಿಂದಿರಿ” ಎಂದು ಚಮೋಲಿ ಪೊಲೀಸರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಉತ್ತರಾಖಂಡದಲ್ಲಿ ಧಾರಾಕಾರ ಮಳೆಯಿಂದಾಗಿ ಉಂಟಾದ ಭೂಕುಸಿತಗಳು ಜೋಶಿಮಠ ಹೆದ್ದಾರಿಯನ್ನೂ ನಿರ್ಬಂಧಿಸಿವೆ. ಉತ್ತರಾಖಂಡದ ಚಂಪಾವತ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ ಎಂದು ಎಸ್‌ಡಿಆರ್‌ಎಫ್ ಕಮಾಂಡೆಂಟ್ ಮಣಿಕಾಂತ ಮಿಶ್ರಾ ತಿಳಿಸಿದ್ದಾರೆ ಎಂದು ಎಬಿಪಿ ವರದಿ ಮಾಡಿದೆ.
ಪಿಥೋರಘರ್‌ನ ವಿಪತ್ತು ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಕನಿಷ್ಠ 21 ರಸ್ತೆಗಳನ್ನು ನಿರ್ಬಂಧಿಸಲಾಗಿದೆ.
ಚಮೋಲಿಯ ಲಂಬಗಡ ಬಳಿಯ ಪಾಗಲ್ ನಾಲಾದಲ್ಲಿ ಭೂಕುಸಿತದಿಂದ ಬದರಿನಾಥ ಹೆದ್ದಾರಿಯನ್ನು ನಿರ್ಬಂಧಿಸಿದರೆ, ಉತ್ತರಕಾಶಿಯ ದಾಬರ್‌ಕೋಟ್‌ನಲ್ಲಿ ಯಮುನೋತ್ರಿ ಹೆದ್ದಾರಿಯು ಭೂಕುಸಿತದಿಂದ ನಿರ್ಬಂಧಿಸಲ್ಪಟ್ಟಿದೆ.

ಪ್ರಮುಖ ಸುದ್ದಿ :-   ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಕೇರಳ ನರ್ಸ್‌ ಗೆ ಜುಲೈ 16ರಂದು ಗಲ್ಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement