ವಿಯೆನ್ನಾ: ಅತ್ಯಂತ ಯಶಸ್ವಿ ರಷ್ಯಾ ಭೇಟಿ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಯುರೋಪ್‌ನ ಆಸ್ಟ್ರಿಯಾ ದೇಶಕ್ಕೆ ಮಂಗಳವಾರದಿಂದ ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ. ವಿಯೆನ್ನಾಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಸ್ಟ್ರಿಯಾದ ಕಲಾವಿದರು ವಿಶೇಷವಾದ ‘ವಂದೇ ಮಾತರಂ’ ವಂದೇ ಮಾತರಂ ಸಮೂಹ ಗಾಯನದ ಮೂಲಕ ಸ್ವಾಗತಿಸಿದ್ದು ಹೆಚ್ಚು ವಿಶೇಷವಾಗಿದೆ. ವಿಯೆನ್ನಾದ ರಿಟ್ಜ್-ಕಾರ್ಲ್ಟನ್ ಹೋಟೆಲ್‌ಗೆ ಆಗಮಿಸಿದ ಭಾರತದ ಪ್ರಧಾನಿಯನ್ನು ಈ ವಿಶೇಷ ಹಾಡಿನ ಮೂಲಕ ಸ್ವಾಗತಿಸಲಾಯಿತು.
X ನಲ್ಲಿ ಇದನ್ನು ಹಂಚಿಕೊಂಡ ಪ್ರಧಾನಿ ಮೋದಿ, ಅಸ್ಟ್ರೀಯಾ ಪ್ರಜೆಗಳ ಕಂಠದಿಂದ ‘ವಂದೇ ಮಾತರಂ’ ಗಾಯನ ವಿಶೇಷವಾಗಿ ಮೂಡಿಬಂದಿದ್ದಕ್ಕೆ ಶ್ಲಾಘಿಸಿದ್ದಾರೆ. ಆಸ್ಟ್ರಿಯಾ ಸಾಕಷ್ಟು ವೈವಿಧ್ಯಮಯ ಸಂಗೀತಕ್ಕೆ ಹೆಸರುವಾಸಿಯಾಗಿದೆ. ನನ್ನೆದುರು ವಂದೇ ಮಾತರಂ ಗಾಯನ ಮಾಡಿದ್ದಕ್ಕೆ ಧನ್ಯವಾದಗಳು “ವಂದೇ ಮಾತರಂನ ಈ ಅದ್ಭುತವಾದ ನಿರೂಪಣೆಯಿಂದ ನನಗೆ ಅದರ ಒಂದು ನೋಟ ಸಿಕ್ಕಿತು ಎಂದು ಮೋದಿ ಬರೆದಿದ್ದಾರೆ.
40 ವರ್ಷಗಳ ನಂತರ ಆಸ್ಟ್ರಿಯಾಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಧಾನಿ ಮೋದಿ ಅವರು ಐತಿಹಾಸಿಕ ಭೇಟಿಗಾಗಿ ಮಂಗಳವಾರ ಆಸ್ಟ್ರಿಯಾಕ್ಕೆ ಆಗಮಿಸಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಕೊನೆಯ ಬಾರಿ ಭೇಟಿ ನೀಡಿದ್ದರು.
ಈ ಎರಡು ದಿನಗಳ ಪ್ರವಾಸದಲ್ಲಿ ಮೋದಿ ಅವರು ಹಲವು ಮಹತ್ವದ ಹೊಸ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಉಭಯ ದೇಶಗಳ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ.
ಇದರಲ್ಲಿ ಪ್ರಧಾನಿಯವರು ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ತಿಳಿಸಿವೆ. ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರು ಪ್ರಧಾನಿ ಮೋದಿ ಸ್ವಾಗತಿಸಿದರು ಮತ್ತು ಖಾಸಗಿ ಸಮಾರಂಭಕ್ಕೆ ಆತಿಥ್ಯ ನೀಡಿದರು. ಸುಮಾರು 40 ವರ್ಷಗಳಲ್ಲಿ ಆಸ್ಟ್ರಿಯಾಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರವಾಗುತ್ತಿದ್ದಂತೆ ನೆಹಮ್ಮರ್ ಅವರು ಭಾರತದ ಪ್ರಧಾನಿಯನ್ನು ತಬ್ಬಿಕೊಂಡು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
“ಪ್ರಧಾನಿ ಮೋದುವರೇ ವಿಯೆನ್ನಾಕ್ಕೆ ಸುಸ್ವಾಗತ. ನಿಮ್ಮನ್ನು ಆಸ್ಟ್ರಿಯಾಕ್ಕೆ ಸ್ವಾಗತಿಸಲು ಸಂತೋಷ ಮತ್ತು ಗೌರವವಾಗಿದೆ. ಆಸ್ಟ್ರಿಯಾ ಮತ್ತು ಭಾರತ ಸ್ನೇಹಿತರು ಮತ್ತು ಪಾಲುದಾರರು. ನಿಮ್ಮ ಭೇಟಿಯ ಸಮಯದಲ್ಲಿ ನಮ್ಮ ರಾಜಕೀಯ ಮತ್ತು ಆರ್ಥಿಕ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
ಪ್ರಧಾನಿ ಮೋದಿಯವರನ್ನು ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್‌ಬರ್ಗ್ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಅವರು ಆಸ್ಟ್ರಿಯಾ ಚಾನ್ಸಲರ್ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ಅವರನ್ನು ಭೇಟಿ ಮಾಡುತ್ತಾರೆ ಮತ್ತು ನೆಹಮ್ಮರ್ ಅವರೊಂದಿಗೆ ಬುಧವಾರ ಔಪಚಾರಿಕ ಮಾತುಕತೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಭಾರತ ಮತ್ತು ಆಸ್ಟ್ರಿಯಾದ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ 22 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯನ್ನು ನಡೆಸಲು ಪ್ರಧಾನಿ ಸೋಮವಾರ ರಷ್ಯಾಕ್ಕೆ ತಮ್ಮ ಸರ್ಕಾರಿ ಪ್ರವಾಸವನ್ನು ಪ್ರಾರಂಭಿಸಿದರು. ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಪ್ರಧಾನಿ ಮೋದಿಯವರ ಮೊದಲ ಭೇಟಿ ಮತ್ತು ಅವರ ಮೂರನೇ ಅವಧಿಯಲ್ಲಿ ಅವರ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ತಮ್ಮ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷರು ಇಂಧನ, ವ್ಯಾಪಾರ, ಉತ್ಪಾದನೆ ಮತ್ತು ರಸಗೊಬ್ಬರಗಳಂತಹ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ