ಖ್ಯಾತ ಆಟಗಾರ್ತಿ ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್‌ ಆಡಿದ ರಾಷ್ಟ್ರಪತಿ ದೌಪದಿ ಮುರ್ಮು- ವೀಡಿಯೊ ವೈರಲ್‌

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಅವರೊಂದಿಗೆ ಬ್ಯಾಡ್ಮಿಂಟನ್ ಸೌಹಾರ್ದ ಪಂದ್ಯವನ್ನು ಆಡುವ ಮೂಲಕ ಈ ಕ್ರೀಡೆಯ ಮೇಲಿನ ಪ್ರೀತಿಯನ್ನು ಪ್ರದರ್ಶಿಸಿದರು. ರಾಷ್ಟ್ರಪತಿಗಳ ಕಚೇರಿ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ದ್ರೌಪದಿ ಮುರ್ಮು ಅವರು ಲಿಲಾಕ್ ಬಣ್ಣದ ಸಾಂಪ್ರದಾಯಿಕ ಸಲ್ವಾರ್-ಕಮೀಜ್ ಧರಿಸಿದ್ದು, ಕ್ರೀಡಾ ಬೂಟುಗಳನ್ನು ಹಾಕಿಕೊಂಡಿರುವುದನ್ನು ಕಾಣಬಹುದು. ರಾಷ್ಟ್ರಪತಿ ಭವನದ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಸೈನಾ ನೆಹ್ವಾಲ್ ಅವರೊಂದಿಗೆ ಬ್ಯಾಡ್ಮಿಂಟನ್ ಆಡಿದ್ದಾರೆ. ಮುರ್ಮು ಅಂಕ ಗಳಿಸುತ್ತಿದ್ದಂತೆ, ಪ್ರೇಕ್ಷಕರು ಚಪ್ಪಾಳೆ ತಟ್ಟಿದರು ಮತ್ತು ಹರ್ಷೋದ್ಗಾರ ಮಾಡಿದರು.
ಭಾರತವು ವಿಶ್ವದಾದ್ಯಂತ ಬ್ಯಾಡ್ಮಿಂಟನ್‌ನಲ್ಲಿ ಚಾಂಪಿಯನ್‌ನಂತೆ ಹೊರಹೊಮ್ಮುತ್ತಿರುವಾಗ ರಾಷ್ಟ್ರಪತಿ ಮುರ್ಮು ಕ್ರೀಡೆಯಲ್ಲಿ ತನ್ನ ಆಸಕ್ತಿ ಮತ್ತು ಉತ್ಸಾಹವನ್ನು ಸಾರ್ವಜನಿಕಗೊಳಿಸಿದ್ದಾರೆ.

ವೀಡಿಯೊದಲ್ಲಿ, ರಾಷ್ಟ್ರಪತಿ ಭವನದ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಪ್ರಸಿದ್ಧ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಬ್ಯಾಡ್ಮಿಂಟನ್ ಆಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸೈನಾ ನೆಹ್ವಾಲ್, ಈ ಅನುಭವ ಅವಿಸ್ಮರಣೀಯ ಎಂದು ಬಣ್ಣಿಸಿದ್ದಾರೆ. ಇದು ನನ್ನ ಜೀವನದ ಸ್ಮರಣೀಯ ದಿನ. ‘‘ನನ್ನೊಂದಿಗೆ ಬ್ಯಾಡ್ಮಿಂಟನ್ ಆಡಿದ್ದಕ್ಕಾಗಿ ರಾಷ್ಟ್ರಪತಿ ಮುರ್ಮು ಅವರಿಗೆ ತುಂಬಾ ಧನ್ಯವಾದಗಳು” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸೌರ ವಿದ್ಯುತ್‌ ಚಾಲಿತ 3 ಟವರ್‌ಗಳು, 12 ಅಂತಸ್ತಿನ ಕಟ್ಟಡ, 300 ಕೊಠಡಿಗಳು, ಆಸ್ಪತ್ರೆ, ಸಭಾಂಗಣ ; ದೆಹಲಿಯಲ್ಲಿ 150 ಕೋಟಿ ರೂ.ವೆಚ್ಚದಲ್ಲಿ ನವೀಕರಿಸಿದ ಆರ್‌ ಎಸ್‌ ಎಸ್ ಕಚೇರಿ

https://twitter.com/i/status/1811251426259354081

ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಮಾತ್ರವಲ್ಲದೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆಯೂ ಆಗಿರುವ ಸೈನಾ ನೆಹ್ವಾಲ್ ಅವರು ನಾಳೆ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ‘ಹರ್ ಸ್ಟೋರಿ – ಮೈ ಸ್ಟೋರಿ’ ಉಪನ್ಯಾಸ ಸರಣಿಯ ಉಪಕ್ರಮದ ಭಾಗವಾಗಿ ಭಾಷಣ ಮಾಡಲಿದ್ದಾರೆ. ಈ ಸರಣಿಯು ಮಹಿಳಾ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಒಳಗೊಂಡಿದೆ ಮತ್ತು ದೇಶಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.
ಲಂಡನ್​ನಲ್ಲಿ 2012ರಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ನೆಹ್ವಾಲ್ ಮಹಿಳೆಯರ ಸಿಂಗಲ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ 20ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement