ರಕ್ಷಣಾ ಸಚಿವ ರಾಜನಾಥ ಸಿಂಗ್ ದೆಹಲಿ ಏಮ್ಸ್ ಗೆ ದಾಖಲು

ನವದೆಹಲಿ: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಗುರುವಾರ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ದಾಖಲಿಸಲಾಗಿದೆ.
ಬುಧವಾರ ತಡರಾತ್ರಿ ಬೆನ್ನು ನೋವಿನಿಂದ ಬಳಲುತ್ತಿದ್ದ ಅವರನ್ನು ಹಳೆಯ ಖಾಸಗಿ ವಾರ್ಡ್‌ಗೆ ದಾಖಲಿಸಲಾಯಿತು. ನರಶಸ್ತ್ರಚಿಕಿತ್ಸಾ ವಿಭಾಗದ ನಿಗಾದಲ್ಲಿದ್ದು, ಆವರ ಆರೋಗ್ಯ ಸ್ಥಿರವಾಗಿದೆ. ಶುಕ್ರವಾರ ಡಿಸ್ಚಾರ್ಜ್ ಆಗಬಹುದು ಎಂದು ದೆಹಲಿಯ ಏಮ್ಸ್ ತಿಳಿಸಿದೆ.
ಗುರುವಾರ ಮುಂಜಾನೆ, ರಕ್ಷಣಾ ಸಚಿವರಿಗೆ ಎಂಆರ್‌ಐ ಮಾಡಲಾಯಿತು. ಅವರು ನರಶಸ್ತ್ರಚಿಕಿತ್ಸಕ ಡಾ.ಅಮೋಲ ರಹೇಜಾ ಅವರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜನಾಥ ಸಿಂಗ್ ಅವರು ಆಂಧ್ರಪ್ರದೇಶದಲ್ಲಿದ್ದಾಗ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಅವರಿಗೆ ಬೆನ್ನು ನೋವಿನಿಂದ ತೊಂದರೆ ಅನುಭವಿಸಿದ್ದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ರೈತರಿಗೆ ಪಿಸ್ತೂಲ್ ತೋರಿಸಿದ ವೀಡಿಯೊ ವೈರಲ್‌ ; ವಿವಾದಿತ ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ ತಾಯಿ ಬಂಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement