ವೀಡಿಯೊ..| ಮೌಂಟ್ ಎವರೆಸ್ಟ್‌ ಮೇಲೆ ಹಾರಾಡಿ ಅತ್ಯದ್ಭುತ ದೃಶ್ಯಗಳನ್ನು ಸೆರೆ ಹಿಡಿದ ಚೀನಾದ ಡ್ರೋನ್‌…ವೀಕ್ಷಿಸಿ

ಚೀನಾದ ಕಂಪನಿಯೊಂದು ಅಭಿವೃದ್ಧಿಪಡಿಸಿದ ಡ್ರೋನ್‌ ವಿಶ್ವದ ಅತ್ಯಂತ ಎತ್ತರದ ಮೌಂಟ್‌ ಎವರೆಸ್ಟ್‌ ಮೇಲೆ ಹಾರಾಟ ನಡೆಸಿದೆ. ಡ್ರೋನ್‌ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸೆರೆ ಹಿಡಿದ ದೃಶ್ಯಗಳು ಈಗ ವೈರಲ್‌ ಆಗಿದೆ.
ಡ್ರೋನ್ ತಯಾರಕರಾದ ಡಿಜೆಐ ಹಾಗೂ 8KRAW ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಸಾಧನಕ್ಕೆ ಡಿಜೆಐ ಮೇವಿಕ್ 3 ಡ್ರೋನ್ ಎಂದು ಹೆಸರಿಡಲಾಗಿದೆ.
ನಾಲ್ಕು ನಿಮಿಷಗಳ ಈ ವೀಡಿಯೊದಲ್ಲಿ ಸಮುದ್ರ ಮಟ್ಟದಿಂದ 5,300 ಮೀಟರ್ ಎತ್ತರದಲ್ಲಿರುವ ಬೇಸ್‌ ಕ್ಯಾಂಪ್‌ನಿಂದ ಹಿಡಿದು, 6 ಸಾವಿರ ಮೀಟರ್ ಎತ್ತರದಲ್ಲಿರುವ ಕ್ಯಾಂಪ್‌ ಸೈಟ್‌, ಕುಂಬು ಐಸ್‌ಫಾಲ್‌ ಸುತ್ತಮುತ್ತಲಿನ ನೀರ್ಗಲ್ಲುಗಳನ್ನು ಸಹ ಸೆರೆ ಹಿಡಿದಿದೆ.

ಬಿಳಿ ಮಂಜು ಹೊದ್ದ ಎವರೆಸ್ಟ್‌ನ ಕಣಿವೆ ಹಾದಿಯಲ್ಲಿನ ಬೇಸ್‌ ಕ್ಯಾಂಪ್‌ನಲ್ಲಿ ಬಣ್ಣ ಬಣ್ಣದ ಟೆಂಟ್‌ಗಳು ಕಾಣುತ್ತವೆ. ಈ ವೀಡಿಯೊಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಮೌಂಟ್ ಎವರೆಸ್ಟ್ ಜಗತ್ತಿನ ಅತಿ ಎತ್ತರದ ಪರ್ವತ. ಸಮುದ್ರ ಮಟ್ಟದಿಂದ 8,848 ಮೀಟರ್ ಎತ್ತರದಲ್ಲಿರುವ ಈ ಪರ್ವತ ನೇಪಾಳ ಹಾಗೂ ಟಿಬೆಟ್‌ ಗಡಿಯನ್ನು ಹಂಚಿಕೊಳ್ಳುತ್ತದೆ. ಅತಿ ಎತ್ತರ, ಪ್ರತಿಕೂಲ ಹವಾಮಾನ ಹಾಗೂ ಕಠಿಣ ಹಾದಿಯಿಂದಾಗಿ ಇಂದಿಗೂ ಪರ್ವತಾರೋಹಿಗಳಿಗೆ ಇದು ಸವಾಲಾಗಿದೆ. 1953ರಲ್ಲಿ ಶೇರ್ಪಾ ತೇನ್‌ಸಿಂಗ್ ಹಾಗೂ ಎಡ್ಮಂಡ್ ಹಿಲೇರಿ ಅವರು ಮೊದಲ ಬಾರಿಗೆ ಎವರೆಸ್ಟ್‌ನ ತುದಿ ತಲುಪಿದ್ದರು.

ಪ್ರಮುಖ ಸುದ್ದಿ :-   10 ವರ್ಷಗಳಿಗೂ ಹೆಚ್ಚು ಕಾಲ ವೈದ್ಯರಿಗೇ ತಿಳಿಯದ ನಿಗೂಢ ಕಾಯಿಲೆಯ ಮೂಲ ಕಾರಣ ಪತ್ತೆಹಚ್ಚಿದ ಚಾಟ್‌ ಜಿಪಿಟಿ...!

ಈ ಅದ್ಭುತ ವೀಡಿಯೊಕ್ಕೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ‘ಅಷ್ಟು ಎತ್ತರದಲ್ಲಿ ಡ್ರೋನ್ ಹಾರಾಟ ನಡೆಸಿದೆ ಎಂಬುದೇ ಅಚ್ಚರಿ. ಹಿಂದೆಂದೂ ನೋಡದ ಅದ್ಭುತ ವೀಡಿಯೊ ‘ ಎಂದು ಒಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಈ ವೀಡಿಯೊ ನೋಡಿದ ಮೇಲೆ ಪರ್ವತಾರೋಹಣದ ನನ್ನ ಪಟ್ಟಿಯಿಂದ ಎವರೆಸ್ಟ್ ಕೈಬಿಡುತ್ತೇನೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.

 

 

5 / 5. 4

ನಿಮ್ಮ ಕಾಮೆಂಟ್ ಬರೆಯಿರಿ

advertisement