ಅಂಕೋಲಾ | ಶಿರೂರು ಗುಡ್ಡ ಕುಸಿತ ದುರಂತ ; ಇಬ್ಬರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 6ಕ್ಕೆ ಏರಿಕೆ

ಅಂಕೋಲಾ:  ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಸಾವೀಗಿಡಾದ ಮತ್ತೆರಡು ಮೃತ ದೇಹಗಳು ಗುರುವಾರ ಬೆಳಿಗ್ಗೆ ಪತ್ತೆಯಾಗಿದ್ದು, ದುರಂತದಲ್ಲಿ ಮೃತರ ಸಂಖ್ಯೆ ಆರಕ್ಕೆ ಏರಿದೆ.
ಬಾಲಕಿಯ ಮೃತದೇಹ ಗೋಕರ್ಣ ಸಮೀಪ ಗಂಗೆಕೊಳ್ಳ ಸಮುದ್ರ ತೀರದಲ್ಲಿ ದೊರೆತಿದೆ. ತಾಲೂಕಿನ ಮಂಜಗುಣಿ ಬಳಿ ಪುರುಷನೋರ್ವನ ಮೃತ ದೇಹ ಪತ್ತೆಯಾಗಿದೆ ಈತ ಲಾರಿ ಚಾಲಕ ಇರಬಹುದು ಎಂದು ಅಂದಾಜಿಸಲಾಗಿದೆ
ಆವಂತಿಕಾ (6) ಮೃತ ದೇಹ ಪತ್ತೆಯಿಂದಾಗಿ ಲಕ್ಷ್ಮಣ ನಾಯ್ಕ ಕುಟುಂಬದ ನಾಲ್ವರ ಮೃತ ದೇಹಗಳು ಪತ್ತೆ ಆದಂತಾಗಿದೆ. ಇನ್ನೂ ಕೆಲವರು ಕಣ್ಮರೆಯಾಗಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ಶೋಧ ಕಾರ್ಯ ಮುಂದುವರೆಸಲಾಗಿದೆ.ಎನ್.ಡಿ.ಆರ್.ಎಫ್ ತಂಡದ ಸದಸ್ಯರು ಕಳೆದ ಎರಡು ದಿನಗಳಿಂದಲೂ ಕಣ್ಮರೆಯಾಗಿದ್ದವರಿಗೆ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸಗಡಗೇರಿ ಸಮೀಪದಲ್ಲಿ ನದಿಯಲ್ಲಿ ಸಿಲುಕಿರುವ ಗ್ಯಾಸ್ ಟ್ಯಾಂಕರ್ ಅನ್ನು ನದಿಯಲ್ಲಿಯೇ ಖಾಲಿ ಮಾಡುವ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement