ವಾಷಿಂಗ್ಟನ್: ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಮುಂಬರುವ ಅಧ್ಯಕ್ಷೀಯ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ, ಹಾಲಿ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರೆಟ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಸ್ಥಾನಕ್ಕೆ ಹೆಸರಿಸಿದ್ದಾರೆ.
ಈ ಕುರಿತು ಭಾನುವಾರ ಹೇಳಿಕೆ ಬಿಡುಗಡೆ ಮಾಡಿರುವ ಬೈಡನ್, “ಮರು ಚುನಾವಣೆಯನ್ನು ಬಯಸುವುದು ನನ್ನ ಉದ್ದೇಶವಾಗಿದ್ದರೂ, ನನ್ನ ಪಕ್ಷ ಮತ್ತು ದೇಶದ ಹಿತದೃಷ್ಟಿಯಿಂದ ನನ್ನ ಉಳಿದ ಅವಧಿಗೆ ಅಧ್ಯಕ್ಷನಾಗಿ ನನ್ನ ಕರ್ತವ್ಯಗಳನ್ನು ಪೂರೈಸುವುದರ ಮೇಲೆ ಗಮನ ಹರಿಸುವುದು ಉತ್ತಮವಾಗಿದೆ ಎಂದು ಭಾವಿಸುತ್ತೇನೆ. ಈ ವಾರದ ನಂತರ ನನ್ನ ನಿರ್ಧಾರದ ಬಗ್ಗೆ ರಾಷ್ಟ್ರದೊಂದಿಗೆ ಹೆಚ್ಚು ವಿವರವಾಗಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ಅಮೆರಿಕದ ಅಧ್ಯಕ್ಷಜೋ ಬೈಡನ್ ಕಳೆದ ಒಂದೆರೆಡು ವರ್ಷದಿಂದ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಅವರು ಭಾರೀ ಮುಜುಗರಕ್ಕೆ ಉಂಟಾದ ಅನೇಕ ಪ್ರಸಂಗಗಳು ನಡೆದಿವೆ. ಒಮ್ಮೊಮ್ಮೆ ಅಕ್ಕಪಕ್ಕದಲ್ಲಿದ್ದವರು ಮತ್ತು ಎದುರಿಗೆ ಇದ್ದವರನ್ನು ಕೂಡ ಸರಿಯಾಗಿ ಗುರುತಿಸಲಾಗದ ಸ್ಥಿತಿಗೆ ತಲುಪಿತ್ತಿದ್ದರು. ಅದರಲ್ಲೂ ಇತ್ತೀಚೆಗೆ ರಿಪಬ್ಲಿಕನ್ ಪಕ್ಷ ಎದುರಾಳಿ ಟ್ರಂಪ್ ಜೊತೆಗೆ ನಡೆದ ಟಿವಿ ಚರ್ಚೆ ವೇಳೆ ಬೈಡನ್ ನಡವಳಿಕೆ ಭಾರೀ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಜೂನ್ 27 ರಿಂದ ಚರ್ಚೆ ಆರಂಭವಾಗಿತ್ತು.
ಆದರೆ, ಮೂರು ವಾರಗಳ ನಂತರ ತಡವಾಗಿ ಬೈಡನ್ ತಮ್ಮ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಅವರ ಪಕ್ಷದಲ್ಲಿಯೇ ಒತ್ತಡ ಹೆಚ್ಚಾಗಿತ್ತು. ನಟ ಜಾರ್ಜ್ ಕ್ಲೋನಿಯಿಂದ ಹಿಡಿದು ಮಾಜಿ ಅಧ್ಯಕ್ಷ ಬರಾಕ್ ಒಮಾಮಾ ಅವರ ವರೆಗೂ ಹಲವರು ಬೈಡನ್ ಚುನಾವಣೆಗೆ ಸ್ಪರ್ಧಿಸಬಾರದು ಎಂದು ಹೇಳಿದ್ದರು. ಅಂತಿಮವಾಗಿ ಕೋವಿಡ್ ನಿಂದ ಚಿಕಿತ್ಸೆಗೊಳಗಾಗಿ ಪ್ರಚಾರದಿಂದ ದೂರ ಸರಿದದ್ದು ಅವರು ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಿತು.
ಬೈಡನ್ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲಿ ರೇಸ್ ನಿಂದ ತಡವಾಗಿ ಹೊರಬಂದ ಮೊದಲ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಆರೋಗ್ಯ ಮತ್ತು ಮಾನಸಿಕ ತೀಕ್ಷ್ಣತೆ ಕಳವಳದಿಂದ ತಲೆಬಾಗಿದ ಮೊದಲಿಗ ಅಧ್ಯಕ್ಷರೂ ಆಗಿದ್ದಾರೆ. ನವೆಂಬರ್ 5ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.
https://twitter.com/JoeBiden/status/1815087772216303933?ref_src=twsrc%5Etfw%7Ctwcamp%5Etweetembed%7Ctwterm%5E1815087772216303933%7Ctwgr%5E4b70d6d5e1dd348036f931ee9ab34ca09900e47e%7Ctwcon%5Es1_&ref_url=https%3A%2F%2Fwww.kannadaprabha.com%2Fworld%2F2024%2FJul%2F21%2Fbiden-drops-out-of-2024-election-race
ಟ್ರಂಪ್ ಗೆ ಭಾರತೀಯ ಮೂಲದ ಕಮಲಾ ಎದುರಾಳಿ?
ಬೈಡನ್ ತಮ್ಮ ಬದಲಾಗಿ ಡೆಮಾಕ್ರೆಟ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರನ್ನು ಅನುಮೋದಿಸಿದ್ದಾರೆ. ಈ ಮೂಲಕ ಅಧ್ಯಕ್ಷ ಹುದ್ದೆಗೆ ಸ್ಪರ್ಧೆ ನಡೆಸಲಿರುವ ಎರಡನೇ ಮಹಿಳೆ ಎನ್ನಿಸಿಕೊಳ್ಳಲಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಆಯ್ಕೆಯಾದರೆ ಮೊದಲ ಮಹಿಳೆ ಮತ್ತು ಅಮೆರಿಕದ ಅಧ್ಯಕ್ಷೆಯಾದ ಭಾರತ ಮೂಲದ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.
ಕಮಲಾ ಹ್ಯಾರಿಸ್ ಅರ್ಹಳು
ಅಮೆರಿಕ ಅಧ್ಯಕ್ಷೆಯಾಗಲು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅರ್ಹಳು ಎಂದು ಹಾಲಿ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ತಮ್ಮ ಬದಲು ಕಮಲಾ ಅಭ್ಯರ್ಥಿ ಆಗಬೇಕು ಎಂಬ ಬೇಡಿಕೆ ಬೆನ್ನಲ್ಲೇ ಅವರ ಈ ಹೇಳಿಕೆ ಬಂದ್ದಿದ್ದು, ಎಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸಿ ದೇಶವನ್ನು ಮುನ್ನಡೆಸಲು ಅರ್ಹಳು ಎಂಬುದನ್ನು ಕಂಡುಕೊಂಡೇ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷೆಯಾಗಿ ಆರಿಸಿಕೊಂಡಿದ್ದೆ ಎಂದು ಶುಕ್ರವಾರ ಜೋ ಬೈಡನ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೆಮಾಕ್ರೆಟ್ ಪಕ್ಷದ ಜೋ ಬೈಡೆನ್ ಅವರಿಗಿಂತಲೂ ಉಪಾಧ್ಯಕ್ಷೆ ಕಮಲಾ ಪ್ಯಾರಿಪ್‌ರನ್ನು ಸೋಲಿಸುವುದು ಹೆಚ್ಚು ಸುಲಭವಾಗಿದೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ