ಶಿರೂರು ಗುಡ್ಡ ಕುಸಿತ | ನಾಪತ್ತೆಯಾದವರ ಹುಡುಕಾಟ ಮತ್ತಷ್ಟು ತೀವ್ರ ; ಟ್ರಕ್‌ ಸ್ಥಳ ನಿರ್ಧರಿಸಲು ಅಡ್ವಾನ್ಸ್ಡ್‌ ಡ್ರೋನ್ ಬಳಕೆ : ಮುಳುಗು ತಜ್ಞರಿಗೆ ನದಿಯ ಪ್ರವಾಹವೇ ಸವಾಲು

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ತಂಡಗಳು ಲಾರಿ ಗಂಗಾವಳಿ ನದಿಯಲ್ಲಿ ಇರುವುದರ ಬಗ್ಗೆ ಮತ್ತಷ್ಟು ಖಚಿತತೆ ವ್ಯಕ್ತಪಡಿಸಿವೆ.
ಹೈರೆಸಲ್ಯೂಶನ್‌ ದ್ರೋಣ್ ಮೂಲಕ ಗುರುವಾರ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕ್ವಿಕ್ ಪೇ ಪ್ರೈವೇಟ್ ಲಿಮಿಟೆಡ್ ಆಪರೇಶನಲ್ ಸಲಹೆಗಾರ, ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ನಂಬಿಯಾರ್, ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಶಾಸಕ ಸತೀಶ್ ಸೈಲ್ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜಂಟಿಯಾಗಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ನದಿಯ ಹರಿವು ವೇಗವಾಗಿದೆ. ನದಿಗೆ ಧುಮುಕಿ ಲಾರಿಯನ್ನು ಹುಡುಕುವುದು ಅಪಾಯವಾಗಿದೆ. ಅತ್ಯಾಧುನಿಕ ರೇಡಾರ್ ಸಹಾಯದಿಂದ ನದಿ ಆಳದ ಕಬ್ಬಿಣ ಕಂಟೆಂಟ್ ಇರುವ ವಸ್ತು ಪತ್ತೆಯಾಗಿದೆ. ಅಂಡರ್ ವಾಟರ್ ಡಿಟೆಕ್ಟಿವ್ ಡ್ರೋನ್ ಮೂಲಕ ನದಿಯ ಆಳದ ವಸ್ತುಗಳ ಸ್ಪಷ್ಟತೆಗೆ ಪ್ರಯತ್ನಿಸಲಾಗುತ್ತಿದೆ.
ನೌಕಾದಳದವರು ಗುರುವಾರ ದಿನವಿಡೀ ಕಾರ್ಯಾಚರಣೆ ನಡೆಸಿದ್ದಾರೆ. ಈ ದುರಂತದಲ್ಲಿ ನಾಪತ್ತೆಯಾದ ಮೂವರು ಪತ್ತೆಯಾಗಬೇಕಾಗಿದೆ. ಇಂದಿನ ಕಾರ್ಯಾಚರಣೆಯಲ್ಲಿ ಮೂರು ಕಡೆ ಮೆಟಲ್ ಇರುವುದು ಖಚಿತವಾಗಿದೆ. ಅರ್ಜುನ್ ಅವರು ಜೀವಂತವಾಗಿದ್ದಾರೆ ಎಂದು ಖಚಿತವಾಗಿ ಹೇಳುವುದು ಈ ಸಂದರ್ಭದಲ್ಲಿ ಕಷ್ಟ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಕರ್ನಾಟಕದ 8 ಜಿಲ್ಲೆಗಳಲ್ಲಿ ಇನ್ನೂ 3 ದಿನ ಭಾರಿ ಗಾಳಿ ಮಳೆಯ ಮುನ್ಸೂಚನೆ

ಇಂದ್ರಬಾಲನ್‌ನೇತೃತ್ವದ ತಂಡ ಡ್ರೋನ್‌ಮೂಲಕ ನೀರಿನ ಒಳಗೆ ಹಾಗೂ ಭೂಮಿಯ ಮೇಲೆ ಮಣ್ಣಿನ ಒಳಗಡೆ ನಾಪತ್ತೆಯಾದವರ ಬಗ್ಗೆ ಹುಡುಕಾಟ ನಡೆಸಲಾಗಿದೆ. ಇಂದ್ರ ಬಾಲನ್‌ಅವರ ತಂಡ ಮೂರು ಪಾಯಿಂಟ್‌(ನಿರ್ದಿಷ್ಟ ಸ್ಥಳ))ದಲ್ಲಿ ಮೆಟಲ್‌ಅನ್ನು ಗುರುತಿಸಿದೆ. ತಂಡದವರು ನಾಲ್ಕನೇ ಪಾಯಿಂಟ್‌ಅನ್ನು ಗುರುತಿಸಿದ್ದಾರೆ. ಆದರೆ ಅದರ ಬಗ್ಗೆ ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ. ಇವರು ಲಾರಿ ಇರುವ ಸಾಧ್ಯತೆ ಬಗ್ಗೆ ಕಂಡುಕೊಂಡ ಎರಡು ಪಾಯಿಂಟ್‌(ನಿರ್ದಿಷ್ಟ ಸ್ಥಳ) ಹಾಗೂ ಬುಧವಾರ ನೌಕೆ ಪಡೆ ಹಾಗೂ ಸೇನೆ ಶೋಧ ಕಾರ್ಯಾಚಣೆಯಲ್ಲಿ ಗುರುತಿಸಿದ ಎರಡು ಪಾಯಿಂಟ್‌(ನಿರ್ದಿಷ್ಟ ಸ್ಥಳ) ತಾಳೆಯಾಗಿವೆ ಎಂದು ಶಾಸಕ ಸತೀಶ ಸೈಲ್‌ ಮಾಹಿತಿ ನೀಡಿದರು. ಈ ತಂಡದವರು ಡ್ರೋಣ್‌ಡೇಟಾವನ್ನು ಕಲೆ ಹಾಕಿ ಅದನ್ನು ತುಲನಾತ್ಮಕವಾಗಿ ಹಾಗೂ ವೈಜ್ಞಾನಿಕವಾಗಿ ಪರಿಶೀಲನೆಗೆ ಒಳಪಡಿಸಲಿದ್ದಾರೆ. ಆಗ ಇನ್ನಷ್ಟು ಸ್ಪಷ್ಟತೆ ಸಿಗಬಹುದು ಎಂದರು.

ನದಿಯಲ್ಲಿ ರೆಲಿಂಗ್, ಟವರ್, ಲಾರಿ, ಟ್ಯಾಂಕರ್ ಕ್ಯಾಬಿನ್ ಇರುವ 3 ಪಾಯಿಂಟ್‌ಗಳು ಪತ್ತೆಯಾಗಿದೆ. ನಾಲ್ಕನೇ ಪಾಯಿಂಟ್‌ಸಹ ಪತ್ತೆಯಾಗಿದ್ದು, ಆದರೆ ಅದರ ಬಗ್ಗೆ ಸ್ಪಷ್ಟತೆಯ ಕೊರತೆಯಿದೆ. ಅದರ ಪೈಕಿ ಅರ್ಜುನನ್‌ಅವರ ಲಾರಿ ಇರುವ ಪಾಯಿಂಟ್‌ಯಾವುದು ಎಂದು ಪತ್ತೆಯಾಗಬೇಕಿದೆ. 60 ಮೀ. ಉದ್ದ ಹಾಗೂ 20 ಮೀ. ಅಗಲ ಹಾಗೂ 9 ಮೀಟರ್ ಒಂದು ಮೆಟಲ್ ಡಿಟೆಕ್ಟ್ ಆಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೇ 400 ಲಾಗ್ಸ್ ಲಾರಿಯಲ್ಲಿ ಇದ್ದುದರಿಂದ ಹೆಚ್ಚು ಆಳದಲ್ಲಿ ಇರಬಹುದಾದ ಸಾಧ್ಯತೆಗಳಿವೆ. 500 ಮೀ. ದೂರದಲ್ಲಿ ಮರದ ದಿಮ್ಮಿಗಳು ಸಿಕ್ಕಿದ್ದು, ಲಾರಿಯಿಂದ ಕೆಲವು ದಿಮ್ಮಿಗಳು ದೂರಾಗಿವೆ. ಗುರುತಿಸಲಾದ ಸ್ಪಾಟ್‌ಗಳ ಪೈಕಿ ಲಾರಿ ಯಾವುದು ಎಂದು ನೋಡಲಾಗುತ್ತಿದೆ. ತುಂಬಾ ಆಳದಲ್ಲಿರುವ ಸ್ಪಾಟ್ ಲಾರಿಯಾಗಿರಬಹುದು ಎಂದು ಊಹೆ ಮಾಡಲಾಗಿದೆ. ಕಂಪನಿಯ ಪ್ರಕಾರ ಟ್ರಕ್ಕಿನ ಉಳಿದ ಭಾಗಗಳ ಜೊತೆಯೇ ಕ್ಯಾಬಿನ್ ಸಹ ಇರುತ್ತದೆ . ಆದರೆ ನದಿಯ ನೀರಿನ ಹರಿವಿನ ವೇಗ 8 ನಾಟ್ಸ್ ಇದ್ದು, ಡೀಪ್ ಡೈವರ್ಸ್‌ಗಳಿಗೆ ಅಲ್ಲಿ ಹೊಗಿ ಪತ್ತೆ ಮಾಡುವುದು ಗಂಗಾವಳಿ ನದಿಯಲ್ಲಿ ಕಷ್ಟವಾಗಿದೆ. ಮುಳುಗು ತಜ್ಞರು ನೀರಿನ ವೇಗ 3 ನಾಟ್ಸ್‌ವರೆಗೆ ಹುಡುಕಾಟ ನಡೆಸಬಹುದು. ಆದರೆ ಇದು ಅದಕ್ಕಿಂತ ಬಹಳ ಹೆಚ್ಚಿದೆ. ಹೀಗಾಗಿ ನೀರಿನ ವೇಗ ನಾಳೆ ಎಷ್ಟಿದೆ ಎಂದು ತಿಳಿದು ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಜಂಟಿಯಾಗಿ ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಚಿನ್ನ ಕಳ್ಳಸಾಗಣೆ ಪ್ರಕರಣ : ರನ್ಯಾ ರಾವ್‌ ಗೆ ಸೇರಿದ 34 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement