ಪೊಲೀಸರ ಕಂಡು ಪೊಲೀಸರೇ ಪರಾರಿ…! ಪೊಲೀಸರಿಂದ ಪೊಲೀಸರ ಬಂಧನ…!!

ವಾರಾಣಸಿ : ಬಿಹಾರದ ಗಡಿಯಲ್ಲಿ ಟ್ರಕ್ ಚಾಲಕರಿಂದ ಅಕ್ರಮವಾಗಿ ಹಣ ಸುಲಿಗೆ ವಿರುದ್ಧದ ಬೃಹತ್ ಕಾರ್ಯಾಚರಣೆಯಲ್ಲಿ, ಉತ್ತರ ಪ್ರದೇಶ ಸರ್ಕಾರ ಗುರುವಾರ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 18 ಜನರನ್ನು ಬಂಧಿಸಿದ್ದು, ಮೂವರು ಪೊಲೀಸರು ಸ್ಥಳದಿಂದ ಪರಾರಿಯಾಗಿದ್ದಾರೆ.
ಎಡಿಜಿ ವಾರಾಣಸಿ ಮತ್ತು ಡಿಐಜಿ ಅಜಂಗಢ್ ನೇತೃತ್ವದ ಜಂಟಿ ತಂಡಗಳು ಬಲ್ಲಿಯಾದಲ್ಲಿನ ನರ್ಹಿ ಪೊಲೀಸ್ ಠಾಣೆ ವ್ಯಾಪ್ತಿಯ ಭರೌಲಿ ತಿರಾಹಾದಲ್ಲಿ ದಾಳಿ ನಡೆಸಿ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ಸುವ್ಯವಸ್ಥಿತ ಸುಲಿಗೆ ಜಾಲವನ್ನು ಪತ್ತೆಹಚ್ಚಿದೆ. ದಾಳಿಯ ವೇಳೆ ಪೊಲೀಸರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ…!
ಉತ್ತರ ಪ್ರದೇಶ ಸರ್ಕಾರವು ಬಲ್ಲಿಯಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾ ಪೊಲಿಸ್‌ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಸ್‌ಪಿಯನ್ನು ಅಮಾನತುಗೊಳಿಸಿದೆ.

ಇಬ್ಬರು ಪೊಲೀಸ್ ಅಧಿಕಾರಿಗಳಲ್ಲದೆ 16 ದಲ್ಲಾಳಿಗಳನ್ನೂ ಬಂಧಿಸಲಾಗಿದೆ. ಬಿಹಾರದ ಬಕ್ಸರ್‌ನಿಂದ ಬರುವ ಟ್ರಕ್‌ಗಳಿಂದ ಹಣ ಸುಲಿಗೆ ಮಾಡಲಾಗುತ್ತಿತ್ತು ಎಂದು ಸರ್ಕಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಸುಲಿಗೆ ದಂಧೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಎಸ್‌ಎಚ್‌ಒ ಸೇರಿದಂತೆ 18 ಪೊಲೀಸರನ್ನು ಅಮಾನತುಗೊಳಿಸಿದೆ. ತಡರಾತ್ರಿ ನಡೆಸಿದ ದಾಳಿಯಲ್ಲಿ, ಎಡಿಜಿ ವಾರಾಣಸಿ ಮತ್ತು ಡಿಐಜಿ ಅಜಂಗಢ್ ಅವರ ಜಂಟಿ ತಂಡವು ಪ್ರತಿ ಟ್ರಕ್‌ನಿಂದ 500 ರೂಪಾಯಿ ಸುಲಿಗೆ ಮಾಡಿರುವುದನ್ನು ಪತ್ತೆಹಚ್ಚಿದೆ ಮತ್ತು ಅಕ್ರಮ ಕಾರ್ಯಾಚರಣೆಯಿಂದ ಸುಲಿಗೆಕೋರರಿಗೆ ದಿನಕ್ಕೆ 5 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು ಎಂದು ಹೇಳಿಕೆ ತಿಳಿಸಿದೆ.
ಅಮಾನತುಗೊಂಡ 18 ಪೊಲೀಸ್ ಅಧಿಕಾರಿಗಳಲ್ಲಿ ಎಸ್‌ಎಚ್‌ಒ ನರ್ಹಿ ಮತ್ತು ಚೌಕಿ ಪ್ರಭಾರಿ ಕೊರಂತಡಿಹ್ ಸೇರಿದಂತೆ 03 ಸಬ್ ಇನ್‌ಸ್ಪೆಕ್ಟರ್‌ಗಳು, 03 ಹೆಡ್ ಕಾನ್‌ಸ್ಟೆಬಲ್‌ಗಳು, 10 ಕಾನ್‌ಸ್ಟೆಬಲ್‌ಗಳು ಮತ್ತು 1 ಕಾನ್ಸ್‌ಟೇಬಲ್ ಡ್ರೈವರ್ ಸೇರಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| "ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು": ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

ಬಂಧಿತ ದಲ್ಲಾಳಿಗಳು ವಾಹನಗಳ ಲೆಕ್ಕವನ್ನು ದಾಖಲಿಸಿ ಹಣವನ್ನು ಎಸ್‌ಎಚ್‌ಒ ನರ್ಹಿ ಅವರಿಗೆ ಹಸ್ತಾಂತರಿಸುತ್ತಿದ್ದರು ಮತ್ತು ಎಲ್ಲಾ ದಾಖಲೆಗಳನ್ನು ನೋಟ್‌ಬುಕ್‌ನಲ್ಲಿ ಬರೆಯುತ್ತಿದ್ದರು. ಎಸ್‌ಎಚ್‌ಒ ಮನೆ ಸೀಲ್‌ ಮಾಡಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿಜಿಲೆನ್ಸ್ ವಿಚಾರಣೆಗೆ ಆದೇಶ
ಉಪ ಪೊಲೀಸ್‌ ವರಿಷ್ಠಾಧಿಕಾರಿ ಸದರ್, ನರ್ಹಿ ಪೊಲೀಸ್ ಠಾಣೆ ಎಸ್‌ಎಚ್‌ಒ ಮತ್ತು ಪೊಲೀಸ್ ಔಟ್‌ಪೋಸ್ಟ್ ಇನ್‌ಚಾರ್ಜ್ ಅವರ ಆಸ್ತಿಗಳ ವಿಜಿಲೆನ್ಸ್ ತನಿಖೆಗೆ ಆದೇಶಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಬಿಹಾರ ಗಡಿಯಲ್ಲಿ ಪೊಲೀಸ್ ಸಿಬ್ಬಂದಿ ವಾಹನಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶೂನ್ಯ ಸಹಿಷ್ಣುತೆ ನೀತಿಯೊಂದಿಗೆ ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನು ಗಮನಿಸಿದ ಬಲ್ಲಿಯಾ ಪೊಲೀಸ್ ವರಿಷ್ಠಾಧಿಕಾರಿ ದೇವರಂಜನ್ ವರ್ಮಾ ಮತ್ತು ಹೆಚ್ಚುವರಿ ಎಸ್ಪಿ ದುರ್ಗಾ ಪ್ರಸಾದ ತಿವಾರಿ ಅವರನ್ನು ವರ್ಗಾವಣೆ ಮಾಡಿ ನಿರೀಕ್ಷಣಾ ಪಟ್ಟಿಯಲ್ಲಿ ಇರಿಸಲಾಗಿದೆ ಮತ್ತು ಡಿಎಸ್‌ಪಿ ಸದರ್ ಶುಭ ಸೂಚಿತ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಇದಕ್ಕೂ ಮೊದಲು, ಪೊಲೀಸ್ ಉಪ ಮಹಾನಿರೀಕ್ಷಕ (ಅಜಂಗಢ ವಲಯ) ವೈಭವ ಕೃಷ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಗಡಿಯಲ್ಲಿ ಪೊಲೀಸರಿಂದ ಸುಲಿಗೆಗೆ ಸಂಬಂಧಿಸಿದ ಹಲವಾರು ದೂರುಗಳನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ವಾರಣಾಸಿ ವಲಯ) ಪಿಯೂಷ್ ಮೊರ್ಡಿಯಾ ಅವರು ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿ ರಾತ್ರಿ ಸುಮಾರು 1,000 ವಾಹನಗಳು ಗಡಿ ದಾಟುತ್ತವೆ ಎಂದು ಅಂದಾಜಿಸಲಾಗಿದೆ.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

4.8 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement