ಪ್ಯಾರಿಸ್ ಒಲಿಂಪಿಕ್ಸ್ 2024 : ಭಾರತಕ್ಕೆ ಮೊದಲ ಪದಕ ಗೆದ್ದ ಶೂಟರ್‌ ಮನು ಭಾಕರ್‌

ಪ್ಯಾರಿಸ್‌ : ಭಾನುವಾರ (ಜುಲೈ 28) ಪ್ಯಾರಿಸ್‌ ಒಲಿಂಪಿಕ್ ನಲ್ಲಿ ಶೂಟಿಂಗ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮನು ಭಾಕರ್ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.
ಪ್ಯಾರಿಸ್‌ನ ಚಟೌರೊಕ್ಸ್ ಶೂಟಿಂಗ್ ಸೆಂಟರ್‌ನಲ್ಲಿ ಹರಿಯಾಣದ 22 ವರ್ಷ ವಯಸ್ಸಿನ ಮನು ಬಾಕರ್‌ ಅವರು ಮಹಿಳೆಯರ 10 ಮೀಟರ್ ಏರ್‌ ಪಿಸ್ತೂಲ್ ಫೈನಲ್ ನಲ್ಲಿ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕ ಗೆದ್ದರು.
ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಖಾತೆ ತೆರೆದಿದ್ದು, ಗೇಮ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಪದಕಕ್ಕಾಗಿ ದೇಶವು 12 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತು. ಅಭಿನವ ಬಿಂದ್ರಾ, ರಾಜವರ್ಧನ ಸಿಂಗ್ ರಾಥೋಡ್, ವಿಜಯಕುಮಾರ ಮತ್ತು ಗಗನ್ ನಾರಂಗ್ ನಂತರ ಶೂಟಿಂಗ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಐದನೇ ಶೂಟರ್ ಮನು ಬಾಕರ್‌.

ಭಾನುವಾರ ನಡೆದ ಫೈನಲ್ ಪಂದ್ಯವನ್ನು ಮನು ಭಾಕರ್ ಆತ್ಮವಿಶ್ವಾಸದಿಂದ ಆರಂಭಿಸಿದರು. ಮನು 5 ಶಾಟ್‌ಗಳ ಮೊದಲ ಸರಣಿಯಲ್ಲಿ 50.4 ಅನ್ನು ಹೊಡೆದು ಬಲವಾದ ಆರಂಭ ಕಂಡರು. ಮನು ಮೊದಲ ಸರಣಿಯಲ್ಲಿ ಮೂರು ಬಾರಿ 10 ಕ್ಕೂ ಹೆಚ್ಚು ಶಾಟ್ ಮಾಡಿದರು. 5 ಶಾಟ್‌ಗಳ ಎರಡನೇ ಸೆಟ್‌ನಲ್ಲಿ, ಮನು ತನ್ನ ಮೊತ್ತವನ್ನು 100.3 ಕ್ಕೆ ತೆಗೆದುಕೊಂಡು ಸ್ಪರ್ಧೆಯುದ್ದಕ್ಕೂ ಅಗ್ರ 3 ರಲ್ಲಿ ಉಳಿಯಲು ಯಶಸ್ವಿಯಾದರು.
ಮನು ಭಾಕರ್ ಅವರು ಟೋಕಿಯೊ ಒಲಿಂಪಿಕ್ಸ್‌ನ ಕಾಡುವ ನೆನಪುಗಳನ್ನು ನಿವಾರಿಸಿಕೊಂಡರು, ಅಲ್ಲಿ ಭಾರತೀಯ ಶೂಟರ್ ಸ್ಪರ್ಧಿಸಿದ ಮೂರು ಈವೆಂಟ್‌ಗಳಲ್ಲಿ ಒಂದರಲ್ಲಿಯೂ ಫೈನಲ್‌ಗೆ ಅರ್ಹತೆ ಪಡೆದಿರಲಿಲ್ಲ.

ಪ್ರಮುಖ ಸುದ್ದಿ :-   ತನ್ನ ಬಿಟ್ಟು ಬೇರೊಬ್ಬಳನ್ನು ಮದುವೆಯಾದ ವ್ಯಕ್ತಿ ಸಿಲುಕಿಸಲು 21 ಸಲ ಬಾಂಬ್ ಬೆದರಿಕೆ ಹಾಕಿದ್ದ ಮಹಿಳಾ ರೊಬೊಟಿಕ್ಸ್ ಎಂಜಿನಿಯರ್ ಬಂಧನ...!

10 ಮೀಟರ್ ಏರ್ ರೈಫಲ್ ಫೈನಲ್ ಗೆ ಭಾರತದ ರಮಿತಾ ಜಿಂದಾಲ
ಭಾನುವಾರ ಫ್ರಾನ್ಸ್‌ನ ಚಟೌರೌಕ್ಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ರಮಿತಾ ಜಿಂದಾಲ್ ಅವರು ಅರ್ಹತಾ ಸುತ್ತಿನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್‌ಗೆ ಐದನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದರು. ಈವೆಂಟ್‌ನಲ್ಲಿ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ರಮಿತಾ ಅವರು 631.5 ಅಂಕಗಳನ್ನು ಗಳಿಸಿ ಫೈನಲ್‌ ಅರ್ಹತೆ ಪಡೆದರು. ಮನು ಭಾಕರ್ ನಂತರ ಫೈನಲ್‌ನಲ್ಲಿ ಸ್ಥಾನ ಪಡೆದ ದೇಶದ ಎರಡನೇ ಶೂಟರ್ ಆಗಿದ್ದಾರೆ, ಆದರೆ ಭಾರತದ ಎಲವೆನಿಲ್ 630.7 ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರೂ 10ನೇ ಸ್ಥಾನಗಳಿಸಿ, ಫೈನಲ್‌ಗೆ ಅರ್ಹತೆ ಪಡೆಯಲು ಸ್ವಲ್ಪದರಲ್ಲೇ ವಂಚಿತರಾದರು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement