ದಾಂಡೇಲಿ : ಬುಧವಾರ ಬೆಳ್ಳಂಬೆಳಗ್ಗೆ 6:30 ಗಂಟೆ ಸುಮಾರಿಗೆ ದಾಂಡೇಲಿ ನಗರದ ಅಂಬೆವಾಡಿಯಲ್ಲಿ ಇಂಡಿಯನ್ ಗ್ಯಾಸ್ ಕಾರ್ಯಾಲಯದ ಮುಂಭಾಗದಲ್ಲಿರುವ ಅರುಣಾದ್ರಿ ರಾವ್ ಎಂಬವರ ಮನೆಯ ಬಾಗಿಲ ಮುಂಭಾಗದಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆ ನಡೆದಿದೆ.
ಬೆಳಿಗ್ಗೆ ಎದ್ದು ಅರುಣಾದ್ರಿ ರಾವ್ ಅವರು ಮನೆಯ ಬಾಗಿಲು ತೆರೆಯುತ್ತಿದ್ದಂತೆಯೇ ಮೊಸಳೆಯನ್ನು ಗಮನಿಸಿದ್ದಾರೆ. ಮೊಸಳೆ ಬಂದಿರುವ ಸುದ್ದಿ ಸುತ್ತಮುತ್ತಲು ಹಬ್ಬಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ತಕ್ಷಣವೇ ಅರುಣದ್ರಿ ರಾವ್ ಅವರು ಉರಗ ಪ್ರೇಮಿ ರಜಾಕ್ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ. ಅವರು ತನ್ನ ಸಹಾಯಕರನ್ನು ಕಳುಹಿಸಿದ್ದಾರೆ. ಬಂದವರು ಸ್ಥಳೀಯರ ನೆರವಿನೊಂದಿಗೆ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ