ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸುಲ್ತಾನ್‌ಪುರಕ್ಕೆ ಹೋಗಿದ್ದಾಗ ಚಪ್ಪಲಿ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದ ವೇಳೆ ಅವರು ಹೊಲಿಗೆ ಹಾಕಿದ್ದ ಚಪ್ಪಲಿಗಳಿಗೆ ಈಗ ಚಿನ್ನದ ಬೇಡಿಕೆ ಬಂದಿದೆ. ಆ ಚಪ್ಪಲಿಗಳನ್ನು ಲಕ್ಷ ಲಕ್ಷ ಹಣವನ್ನು ಕೊಟ್ಟು ಖರೀದಿ ಮಾಡಲು ಜನರು ಮುಂದೆ ಬಂದಿದ್ದಾರೆ.
ರಾಹುಲ್ ಗಾಂಧಿ ಜುಲೈ 26ರಂದು ಮಾನನಷ್ಟ ಮೊಕದ್ದಮೆ ಪ್ರಕರಣವೊಂದರಲ್ಲಿ ಉತ್ತರ ಪ್ರದೇಶದ ಸುಲ್ತಾನಪುರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆಗ ಸುಲ್ತಾನ್‌ಪುರದ ಸಮೀಪದ ಕುರೇಭಾರ್‌ನಲ್ಲಿ ಚಮ್ಮಾರ ರಾಮ ಚೇತ್ ಅವರ ಚಪ್ಪಲಿ ಅಂಗಡಿಗೆ ಭೇಟಿ ನೀಡಿದ್ದರು. ಅವರೊಂದಿಗಿನ ಮಾತುಕತೆ ಸಮಯದಲ್ಲಿ ರಾಹುಲ್ ಗಾಂಧಿ ಶೂ ರಿಪೇರಿ ಮಾಡಲು ಪ್ರಯತ್ನಿಸಿದರು. ಅವರು ಚಪ್ಪಲಿಗೆ ಹೊಲಿಗೆ ಹಾಕಲು ಪ್ರಯತ್ನಿಸಿದರು. ಈಗ ಆ ಚಪ್ಪಲಿಗೆ ಭಾರಿ ಡಿಮ್ಯಾಂಡ್ ಬಂದಿದೆ.
ರಾಹುಲ್ ಗಾಂಧಿ ಅವರನ್ನು ಭೇಟಿಯಾದ ನಂತರ ನನ್ನ ಜೀವನವೇ ಬದಲಾಗಿದೆ. ನಾನು ಬಹಳಷ್ಟು ಪ್ರೀತಿಯನ್ನು ಸ್ವೀಕರಿಸುತ್ತಿದ್ದೇನೆ. ಜನರು ತಮ್ಮ ಕಾರುಗಳನ್ನು ನನ್ನ ಪುಟ್ಟ ಅಂಗಡಿ ಮುಂದೆ ನಿಲ್ಲಿಸಿ ನನ್ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ ಎಂದು ರಾಮ ಚೇತ್ ಹೇಳಿದ್ದಾರೆ.
ರಾಹುಲ್ ಗಾಂಧಿಯವರು ಹೊಲಿದ ಚಪ್ಪಲಿ ಖರೀದಿಸಲು 10 ಲಕ್ಷ ರೂ.ಗಳ ವರೆಗೆ ಆಫರ್ ಮಾಡಿದರು, ಆದರೆ ನಾನು ಆ ಆಫರ್ ಅನ್ನು ತಿರಸ್ಕರಿಸಿದ್ದೇನೆ. ಮತ್ತು “ಅದೃಷ್ಟ” ಪಾದರಕ್ಷೆಗಳನ್ನು ಗಾಜಿನಲ್ಲಿ ಫ್ರೇಮ್ ಮಾಡಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ಜುಲೈ 26 ರಂದು ಗಾಂಧಿ ಅಂಗಡಿಯಲ್ಲಿ ಸ್ವಲ್ಪಕಾಲ ಇದ್ದರು, ನಮ್ಮ ಕುಟುಂಬ ಮತ್ತು ನಮ್ಮ ಸಮಸ್ಯೆಗಳ ಬಗ್ಗೆ ಕೇಳಿದರು. ಅಲ್ಲದೆ, ರಾಹುಲ್ ಗಾಂಧಿಯವರು ಪಾದರಕ್ಷೆಗಳನ್ನು ಹೊಲಿಯಲು ಮತ್ತು ಶೂ ಅಂಟಿಸಲು ಪ್ರಯತ್ನಿಸಿದರು. ರಾಹುಲ್ ಗಾಂಧಿ ಭೇಟಿ ನನ್ನ ಅದೃಷ್ಟವನ್ನು ನಾಟಕೀಯವಾಗಿ ಬದಲಾಯಿಸಿದೆ ಮತ್ತು ಈ ಭೇಟಿಯು ನನ್ನನ್ನು ಎಲ್ಲರಿಗೂ ಪರಿಚಯಿಸಿದೆ ಎಂದು ರಾಮ ಚೈತ್ ಹೇಳುತ್ತಾರೆ.
ನನ್ನ ಪ್ರಪಂಚವು ಸಂಪೂರ್ಣವಾಗಿ ಬದಲಾಗಿದೆ. ನಾನು ಮೊದಲು ಬಹುತೇಕ ಯಾರಿಗೂ ಪರಿಚಯವಿರಲಿಲ್ಲ, ಆದರೆ ಈಗ ಜನರು ನನ್ನ ಅಂಗಡಿಗೆ ಬಂದು ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿಯವರು ಹೊಲಿದ ಚಪ್ಪಲಿ ಖರೀದಿಸಲು ಬಯಸಿ ನನಗೆ ಅನೇಕರಿಂದ ಫೋನ್‌ಗಳು ಬಂದಿವೆ. ಮೊದಲು ಒಬ್ಬ ವ್ಯಕ್ತಿ ಒಬ್ಬ ವ್ಯಕ್ತಿ 1 ಲಕ್ಷದ ಆಫರ್‌ನೊಂದಿಗೆ ಬಂದಿದ್ದ, ನಾನು ಅದನ್ನು ತಿರಸ್ಕರಿಸಿದೆ. ಈಗ ಆ ಚಪ್ಪಲಿ ಖರೀದಿಗಾಗಿ ಯಾರೋ 10 ಲಕ್ಷ ರೂ.ಗಳ ವರೆಗೆ ಆಫರ್ ನೀಡಿದ್ದಾರೆ. ಆದರೆ ನಾನು ಈ ಆಫರ್‌ಗಳನ್ನು ತಿರಸ್ಕರಿಸಿದ್ದೇನೆ. ಏಕೆಂದರೆ ನಾನು ಅದನ್ನು ಮಾರಾಟ ಮಾಡುವುದಿಲ್ಲ. ಅದು ನನ್ನ ಅದೃಷ್ಟ ಬದಲಾಯಿಸಿದ್ದರಿಂದ ನಾನು ಆ ಚಪ್ಪಲಿಯನ್ನು ಗಾಜಿನ ಚೌಕಟ್ಟಿನಲ್ಲಿ ನನ್ನ ಅಂಗಡಿಯಲ್ಲಿ ಇಡುತ್ತೇನೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ನನ್ನ ಅಂಗಡಿಗೆ ಬಂದ ನಂತರ ಸರ್ಕಾರಿ ಅಧಿಕಾರಿಗಳು ಈಗ ನನ್ನತ್ತ ಗಮನ ನೀಡುತ್ತಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ನನ್ನ ಸಮಸ್ಯೆಗಳನ್ನು ಕೇಳಲು ಬರಲಾರಂಭಿಸಿದ್ದಾರೆ ಎಂದು ರಾಮ ಚೈತ್ ಹೇಳಿದ್ದಾರೆ.
ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಮಧಿ ಸುಲ್ತಾನ್‌ಪುರಕ್ಕೆ ಬಂದಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ