ಬಾಂಗ್ಲಾದೇಶದ ಘರ್ಷಣೆಯಲ್ಲಿ 72 ಮಂದಿ ಸಾವು: ರಾಜಧಾನಿ ಢಾಕಾದಲ್ಲಿ ಅನಿರ್ದಿಷ್ಟಾವಧಿಗೆ ಕರ್ಫ್ಯೂ

ಢಾಕಾ : ಬಾಂಗ್ಲಾದೇಶದಲ್ಲಿ ಭಾನುವಾರ ನಡೆದ ಘರ್ಷಣೆಯಲ್ಲಿ ಕನಿಷ್ಠ 72 ಜನರು ಸಾವಿಗೀಡಾಗಿದ್ದಾರೆ ಮತ್ತು ಹತ್ತಾರು ಜನರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಬಾಂಗ್ಲಾದೇಶದಲ್ಲಿ ಭಾನುವಾರ ನಡೆದ ಘರ್ಷಣೆಯಲ್ಲಿ ಕನಿಷ್ಠ 72 ಜನರು ಸಾವನ್ನಪ್ಪಿದ್ದಾರೆ ಮತ್ತು ಹತ್ತಾರು ಜನರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಸ್ಟನ್ ಗ್ರೆನೇಡ್‌ಗಳನ್ನು ಪ್ರಯೋಗಿಸಿದ್ದಾರೆ.
ಹಿಂಸಾತ್ಮಕ ಪರಿಸ್ಥಿತಿಯ ನಂತರ, ಭಾನುವಾರ ಸಂಜೆ 6 ರಿಂದ ಅನಿರ್ದಿಷ್ಟ ಅವಧಿಗೆ ಢಾಕಾ ಮತ್ತು ಇತರ ಹಲವು ಭಾಗಗಳಲ್ಲಿ ಮತ್ತೆ ಕರ್ಫ್ಯೂ ಘೋಷಿಸಲಾಗಿದೆ. ಒಂದು ಹೇಳಿಕೆಯಲ್ಲಿ, ದೇಶದ ಗೃಹ ಸಚಿವಾಲಯವು “ಢಾಕಾ ಮೆಟ್ರೋಪಾಲಿಟನ್ ಪ್ರದೇಶ ಮತ್ತು ಎಲ್ಲಾ ವಿಭಾಗೀಯ ಕೇಂದ್ರಗಳು, ನಗರ ನಿಗಮಗಳು, ಪುರಸಭೆಗಳು, ಕೈಗಾರಿಕಾ ಪ್ರದೇಶಗಳು, ಜಿಲ್ಲೆ ಮತ್ತು ಉಪಜಿಲಾ ಪ್ರಧಾನ ಕಚೇರಿಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಸೂಚಿಸಿದೆ.

ಈವರೆಗೆ, ದೇಶಾದ್ಯಂತ  ನಡೆದ ಘರ್ಷಣೆಗಳಲ್ಲಿ 72 ಜನರು ಸಾವಿಗೀಡಾಗಿದ್ದಾರೆ ಎಂದು ಬಂಗಾಳಿ ಭಾಷೆಯ ಪ್ರಮುಖ ದಿನಪತ್ರಿಕೆ ಪ್ರೋಥೋಮ್ ಅಲೋ ವರದಿ ಮಾಡಿದೆ. ಪ್ರತಿಭಟನೆಗಳ ನಂತರ ಸರ್ಕಾರ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಪ್ರತಿಭಟನಕಾರರು ಪ್ರಮುಖ ಹೆದ್ದಾರಿಗಳನ್ನು ನಿರ್ಬಂಧಿಸಿದ್ದರಿಂದ ಬಾಂಗ್ಲಾದೇಶದ ಇತರೆಡೆ ಹಿಂಸಾಚಾರಗಳು ಭುಗಿಲೆದ್ದವು. ಪ್ರತಿಭಟನಾಕಾರರು ಹಸೀನಾ ಅವರ ಆಡಳಿತಾರೂಢ ಅವಾಮಿ ಲೀಗ್‌ನ ಮತ್ತು ಕಾರ್ಯಕರ್ತರ ನಡುವಿನ ಘರ್ಷಣೆ ಭುಗಿಲೆದ್ದಿತು.
ಸರ್ಕಾರದ ರಾಜೀನಾಮೆಗಾಗಿ ಒತ್ತಾಯಿಸಿ ವಿದ್ಯಾರ್ಥಿ ಪ್ರತಿಭಟನಾಕಾರರು ಅಸಹಕಾರ ಚಳವಳಿ ಪ್ರಾರಂಭಿಸಿದಾಗ ಒಂದು ಗುಂಪು ರಾಜಧಾನಿಯ ಬಂಗಬಂಧು ಶೇಖ್ ಮುಜೀಬ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿತು.

ಪ್ರಮುಖ ಸುದ್ದಿ :-   ಇರಾನಿನ 400 ಕೆಜಿ ಯುರೇನಿಯಂ ಕಾಣೆಯಾದ ಬಗ್ಗೆ ಅಮೆರಿಕಕ್ಕೆ ಭಯ ? ಯಾಕಂದ್ರೆ ಇದ್ರಿಂದ 10 ಪರಮಾಣು ಬಾಂಬ್‌ ತಯಾರಿಸಬಹುದಂತೆ...

ಮಾನವ ಹಕ್ಕುಗಳ ಗುಂಪುಗಳ ಜೊತೆಗೆ ಹಸೀನಾ ಅವರ ಟೀಕಾಕಾರರು ಹಸೀನಾ ಸರ್ಕಾರವು ಚಳುವಳಿ ಹತ್ತಿಕ್ಕಲು ಅತಿಯಾದ ಬಲವನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಸರ್ಕಾರ ಆರೋಪವನ್ನು ನಿರಾಕರಿಸಿದೆ. ಸರ್ಕಾರವು ಹೈ-ಸ್ಪೀಡ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಮತ್ತು ವಾಟ್ಸಾಪ್ ಬ್ರಾಡ್‌ಬ್ಯಾಂಡ್ ಸಂಪರ್ಕಗಳ ಮೂಲಕವೂ ಲಭ್ಯವಿಲ್ಲ.
ಕಳೆದ ತಿಂಗಳು ನಡೆದ ಪ್ರತಿಭಟನೆಯಲ್ಲಿ ಕನಿಷ್ಠ 150 ಜನರು ಸಾವಿಗೀಡಾಗಿದ್ದರು, ಸಾವಿರಾರು ಜನರು ಗಾಯಗೊಂಡಿದ್ದರು ಮತ್ತು ಹಿಂಸಾಚಾರದಲ್ಲಿ ಸುಮಾರು 10,000 ಜನರನ್ನು ಬಂಧಿಸಲಾಯಿತು. ಸುಪ್ರೀಂ ಕೋರ್ಟ್ ಹೆಚ್ಚಿನ ಮೀಸಲಾತಿಯನ್ನು ರದ್ದುಗೊಳಿಸಿದ ನಂತರ ಪ್ರತಿಭಟನೆಗಳು ನಿಂತಿದ್ದವು. ಸತ್ತವರ ಕುಟುಂಬಗಳಿಗೆ ನ್ಯಾಯವನ್ನು ಕೋರಿ ಆದರೆ ವಿದ್ಯಾರ್ಥಿಗಳು ಕಳೆದ ವಾರ ಪ್ರತಿಭಟನೆಗಳನ್ನು ನಡೆಸಿದ ನಂತರ ಹಿಂಸಾತ್ಮಕ ಸಂಘರ್ಷ ಭುಗಿಲೆದ್ದಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement