ನವದೆಹಲಿ: ಇಸ್ರೇಲ್ ವಿರುದ್ಧ ಇರಾನ್ ಮತ್ತು ಹಿಜ್ಬುಲ್ಲಾ ದಾಳಿ ಸೋಮವಾರದಿಂದಲೇ ಪ್ರಾರಂಭವಾಗಬಹುದು ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಜಿ7 ದೇಶಗಳ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಆಕ್ಸಿಯೋಸ್ ವರದಿ ಮಾಡಿದೆ.
ಆದಾಗ್ಯೂ, ಇಸ್ರೇಲ್‌ನ ಪ್ರಮುಖ ದೈನಿಕ ಟೈಮ್ಸ್ ಆಫ್ ಇಸ್ರೇಲ್, ಬೆಂಜಮಿನ್ ನೆತನ್ಯಾಹು ನೇತೃತ್ವದ ಸರ್ಕಾರವು ಇಸ್ರೇಲಿ ನೆಲದ ಮೇಲಿನ ದಾಳಿ ತಡೆಯಲು ಇರಾನ್‌ನ ಮೇಲೆ ಪೂರ್ವಭಾವಿ ದಾಳಿ ನಡೆಸಲು ಅನುಮೋದನೆ ನೀಡಬಹುದು ಎಂದು ವರದಿ ಮಾಡಿದೆ. ವರದಿಯ ಪ್ರಕಾರ, ನೆತನ್ಯಾಹು ಕರೆದ ಸಭೆಯಲ್ಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಐಡಿಎಫ್ ಮುಖ್ಯಸ್ಥ ಹರ್ಜಿ ಹಲೇವಿ ಅಲ್ಲದೆ, ಇಸ್ರೇಲ್‌ನ ಪ್ರಮುಖ ಗುಪ್ತಚರ ಸಂಸ್ಥೆಗಳಾದ ಮೊಸಾದ್ ಮತ್ತು ಶಿನ್ ಬೆಟ್ ಮುಖ್ಯಸ್ಥರಾದ ಡೇವಿಡ್ ಬಾರ್ನಿಯಾ ಮತ್ತು ರೋನೆನ್ ಬಾರ್ ಅವರು ಕೂಡ ಭಾಗವಹಿಸಿದ್ದರು.
ಇರಾನಿನ ಬೆಂಬಲದೊಂದಿಗೆ 1980 ರ ದಶಕದ ಆರಂಭದಲ್ಲಿ ಸ್ಥಾಪಿಸಲಾದ ಹೆಜ್ಬೊಲ್ಲಾಹ್, ಮಧ್ಯಪ್ರಾಚ್ಯದಲ್ಲಿ ಇರಾನ್‌ನ ಮೊದಲ ಪ್ರಾಕ್ಸಿಯನ್ನು ಪ್ರತಿನಿಧಿಸುತ್ತದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನಿಂದ ಧನಸಹಾಯ ಪಡೆಯುವ ಮತ್ತು ಶಸ್ತ್ರಸಜ್ಜಿತ, ಹೆಜ್ಬೊಲ್ಲಾಹ್ ಟೆಹ್ರಾನ್‌ನ ಪ್ರಮುಖ ಸಿದ್ಧಾಂತವನ್ನು ಹಂಚಿಕೊಳ್ಳುತ್ತದೆ ಮತ್ತು ಪ್ರಾಥಮಿಕವಾಗಿ ಲೆಬನಾನ್‌ನ ಶಿಯಾ ಮುಸ್ಲಿಂ ಜನಸಂಖ್ಯೆಯಿಂದ ತನ್ನ ಗುಂಪಿಗೆ ನೇಮಕಾತಿ ಮಾಡಿಕೊಳ್ಳುತ್ತದೆ.
ಹೆಜ್ಬೊಲ್ಲಾಹ್ ತನ್ನ ದಾಳಿಯನ್ನು ಇಸ್ರೇಲಿ ಭೂಪ್ರದೇಶದ ಮೇಲೆ ತೀವ್ರವಾಗಿ ಹೆಚ್ಚಿಸಲಿದೆ ಎಂದು ಇರಾನ್ ಶನಿವಾರ ಹೇಳಿದೆ, ಇದು ಕೇವಲ ಮಿಲಿಟರಿ ಸ್ಥಾಪನೆಗಳಿಗಿಂತ ಹೆಚ್ಚಿನದನ್ನು ಗುರಿಯಾಗಿಸುತ್ತದೆ. ಇಸ್ರೇಲ್ ಹಿಜ್ಬೊಲ್ಲಾಹ್ ಮಿಲಿಟರಿ ಕಮಾಂಡರ್ ಫುವಾದ್ ಶುಕ್ರ್ ಅವರ ಹತ್ಯೆಯ ನಂತರ ಉದ್ವಿಗ್ನತೆಯ ತ್ವರಿತವಾಗಿ ಉಲ್ಬಣಗೊಂಡಿದೆ. ಜುಲೈ 30 ರಂದು, ಇಸ್ರೇಲ್ ದಕ್ಷಿಣ ಬೈರುತ್‌ನಲ್ಲಿ ಜನನಿಬಿಡ ವಸತಿ ಪ್ರದೇಶ ವಾಯುದಾಳಿಯಲ್ಲಿ ಹಿಜ್ಬೊಲ್ಲಾಹ್ ಮಿಲಿಟರಿ ಕಮಾಂಡರ್ ಫುವಾದ್ ಶುಕ್ರ್ ಅವರನ್ನು ಕೊಂದು ಹಾಕಿತು.
ಟೆಹ್ರಾನ್‌ನಲ್ಲಿ ಹಮಾಸ್ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಯಿಂದ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಿದೆ, ಇದು ಇದಕ್ಕೆ ಇಸ್ರೇಲ್ ಕಾಋಣ ಎಂದು ಹಮಾಸ್ ಆರೋಪಿಸಿದ್ದರೂ ಇದನ್ನು ಇಸ್ರೇಲಿ ಅಧಿಕಾರಿಗಳು ದೃಢೀಕರಿಸಿಲ್ಲ.
ಪ್ರಸ್ತುತ ಯುದ್ಧ ಪರಿಸ್ಥಿತಿಯು ತೀವ್ರಗೊಂಡ ನಂತರ ಭಾರತ ಸೇರಿದಂತೆ ವಿವಿಧ ದೇಶಗಳ ರಾಯಭಾರ ಕಚೇರಿಗಳು ಲೆಬನಾನ್ ತೊರೆಯುವಂತೆ ತಮ್ಮ ನಾಗರಿಕರಿಗೆ ಸೂಚನೆ ನೀಡಿವೆ.
ಈ ಬೆಳವಣಿಗೆಗಳಿಗೆ ಪ್ರತಿಕ್ರಿಯೆಯಾಗಿ, ಆಂಟೋನಿ ಬ್ಲಿಂಕೆನ್ G7 ವಿದೇಶಾಂಗ ಮಂತ್ರಿಗಳೊಂದಿಗೆ ಕಾನ್ಫರೆನ್ಸ್ ಕರೆಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳನ್ನು ಸಂಘಟಿಸಲು ಕೋರಿದ್ದಾರೆ ಎಂದು ವರದಿ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ