ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ 2024 ರ ಪುರುಷರ ಹಾಕಿ ಪಂದ್ಯದಲ್ಲಿ ಭಾರತವು ಸ್ಪೇನ್ ಅನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಭಾಜನವಾಗಿದೆ.
ಭಾರತ ತಂಡದ ಹರ್ಮನ್‌ಪ್ರೀತ್ ಸಿಂಗ್ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರರ್ತಿಸುವ ಮೂಲಕ ಭಾರತಕ್ಕೆ ಗೆಲುವನ್ನು ತಂದುಕೊಟ್ಟರು.. ಈ ಮೂಲಕ ಭಾರತವು ಒಲಿಂಪಿಕ್ಸ್‌ನಲ್ಲಿ ಸತತವಾಗಿ ಪದಕಗಳನ್ನು ಪಡೆದುಕೊಂಡಿತು. ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ 52 ವರ್ಷಗಳ ನಂತರ ಮೊದಲ ಬಾರಿಗೆ ಕಂಚು ಗೆದ್ದಿತ್ತು. 1968 ಮತ್ತು 1972 ರಲ್ಲಿ ಭಾರತವು ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿಗೆ ಬ್ಯಾಕ್-ಟು-ಬ್ಯಾಕ್ ಹಾಕಿ ಪದಕಗಳನ್ನು ಗೆದ್ದುಕೊಂಡಿತ್ತು.
ಮೊದಲ 15 ನಿಮಿಷಗಳಲ್ಲಿ ನಿಯಮಿತವಾಗಿ ಸ್ಪೇನ್‌ನ ರಕ್ಷಣೆಯನ್ನು ಭೇದಿಸಿದ ಭಾರತ ಆರನೇ ನಿಮಿಷದಲ್ಲಿ ಪಂದ್ಯದ ಮೊದಲ ಗೋಲು ಗಳಿಸುವ ಅವಕಾಶ ಸೃಷ್ಟಿಸಿತು. ಆದರೆ ಗೋಲು ಗಳಿಸಲು ಸಾಧ್ಯವಾಗದೆ ಹೋಯಿತು. ಆದರೆ ಭಾರತದ ಆಕ್ರಮಣಕಾರಿ ಆಟ ಮುಂದುವರಿಯಿತು.
ಸ್ಪೇನ್ ತಂಡದ ನಾಯಕ ಮಾರ್ಕ್ ಮಿರಾಲ್ಲೆಸ್ (18ನೇ ನಿಮಿಷ) ಪೆನಾಲ್ಟಿ ಸ್ಟ್ರೋಕ್ ಗೋಲಾಗಿ ಪರಿವರ್ತಿಸುವುದರೊಂದಿಗೆ ಸ್ಪೇನ್ ಮುನ್ನಡೆ ಸಾಧಿಸಿತು. ಆದರೆ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ (30, 33ನೇ ನಿಮಿಷ) ಸತತ ಎರಡು ಗೋಲು ಹೊಡೆಉವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.
ಸೆಮಿಫೈನಲ್‌ನಲ್ಲಿ ಭಾರೀ ಹೋರಾಟದ ಪಂದ್ಯದಲ್ಲಿ ಜರ್ಮನಿ ವಿರುದ್ಧದ 2-3 ಅಂತರದ ಸೋತಿದ್ದ ಭಾರತ ಕಂಚಿನ ಪದಕಕ್ಕಾಗಿ ನಡೆದ ಈ ಪಂದ್ಯದಲ್ಲಿ ಭಾರೀ ಪ್ರದರ್ಶನ ನೀಡಿತು.
ಭಾರತದ ತಂಡದ ಪರವಾಗಿ ತನ್ನ ಅಂತಿಮ ಪಂದ್ಯವನ್ನು ಆಡುತ್ತಿದ್ದ ಅನುಭವಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರು ಕಾರ್ನರ್‌ಗಳಿಂದ ಸ್ಪೇನ್ ನಾಯಕ ಮಾರ್ಕ್ ಮಿರಾಲ್ಲೆಸ್ ಅವರ ಪೆನಾಲ್ಟಿ ಕಾರ್ನರ್ ಹೊಡೆತವನ್ನು ತಡೆಯುವ ಮೂಲಕ ಗೋಲನ್ನು ನಿರಾಕರಿಸಿದರು. ಪೂರ್ಣಾವಧಿಯ ವಿಸಿಲ್ ನಂತರ ನಂತರ ಭಾರತೀಯ ಆಟಗಾರರು 36 ವರ್ಷ ವಯಸ್ಸಿನ ಶ್ರೀಜೇಶ ಅವರಿಗೆ ಅದ್ಭುತವಾದ ವಿದಾಯವನ್ನು ನೀಡಿದರು.


ನಿಮ್ಮ ಕಾಮೆಂಟ್ ಬರೆಯಿರಿ