ಒಲಿಂಪಿಕ್ಸ್ | ಕಂಚಿನ ಪದಕ ಪಂದ್ಯದ ಮೊದಲು 4.5 ಕೆಜಿ ತೂಕ ಹೆಚ್ಚಾಗಿತ್ತು : ಆದ್ರೆ 10 ತಾಸಿನಲ್ಲಿ 4.6 ಕೆಜಿ ಇಳಿಸಿಕೊಂಡ ಸೆಹ್ರಾವತ್ ; ಅದು ಹೇಗೆ..?

ಪ್ಯಾರಿಸ್‌ : ತೂಕದ ಕಾರಣದಿಂದ ಮಹಿಳಾ ಕುಸ್ತಿಯ ಫೈನಲ್‌ ಪಂದ್ಯದಲ್ಲಿ ತೂಕದ ಕಾರಣದಿಂದ ಅನರ್ಹಗೊಂಡ ವಿನೇಶ್‌ ಫೋಗಟ್‌ ಪ್ರಕರಣದ ಚರ್ಚೆ ನಡೆಯುತ್ತಿರುವಾಗಲೇ ಭಾರತದ ಮತ್ತೊಬ್ಬ ಕುಸ್ತಿಪಟು ಸಹ ಇದೇ ಸವಾಲನ್ನು ಎದುರಿಸಿದ್ದು, ಸತತ ಪ್ರಯತ್ನದ ನಂತರ ಅವರು ಅನರ್ಹತೆ ಭೀತಿಯಿಂದ ಪಾರಾಗಿದ್ದಾರೆ.
ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ ಪದಕ ಪಡೆಯಲು ಮೊದಲು ತನ್ನ ತೂಕ ಕಳೆದುಕೊಳ್ಳಬೇಕಾಗಿತ್ತು. ಗುರುವಾರ, ಅಮನ್ ತನ್ನ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ರೇ ಹಿಗುಚಿ ವಿರುದ್ಧ ಸಂಜೆ 6:30 ರ ಸುಮಾರಿಗೆ ಸೋತಿದ್ದರು. ಚಾಂಪಿಯನ್ ರೇ ಹಿಗುಚಿ ವಿರುದ್ಧ ಸೋಲನುಭವಿಸಿದ ನಂತರ ಗುರುವಾರ ಅವರ ತೂಕದ ಯಂತ್ರದ ಮಾಪಕಗಳು 61.5 ಕೆಜಿ ಎಂದು ತೋರಿಸಿದ್ದವು. ಭಾರತದ ಅತ್ಯಂತ ಕಿರಿಯ ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಅಮನ್ ಸೆಹ್ರಾವತ್ 57 ಕೆಜಿ ವಿಭಾಗದ ಕುಸ್ತಿಯಲ್ಲಿ ಅರ್ಹತೆ ಪಡೆಯಲು ಕಡ್ಡಾಯವಾಗಿ ಕಂಚಿನ ಪದಕದ ಪಂದ್ಯಕ್ಕೆ ಮೊದಲು ಅಮನ್ ಅವರಿಗೆ ತೂಕ ಕಡಿಮೆ ಮಾಡುವುದು ದೊಡ್ಡ ಸವಾಲಾಗಿತ್ತು.

ಪಂದ್ಯ ನಡೆಯುವ 10 ಗಂಟೆಗಳ ಮೊದಲು ನಿಗದಿತ ಸಮಯದಲ್ಲಿ 4.5 ಕಿಲೋಗ್ರಾಂಗಳಷ್ಟು ದೇಹದ ತೂಕವನ್ನು ಕಳೆದುಕೊಳ್ಳಲೇ ಬೇಕಾಗಿತ್ತು. ಅಮನ್ ಪಂದ್ಯದ ದಿನ ಬೆಳಿಗ್ಗೆ ತೂಕದ ಯಂತ್ರದಲ್ಲಿ ನೋಡಿದಾಗ ಅವರು ತಮ್ಮ ತರಬೇತುದಾರರಾದ ಜಗಮಂದರ್ ಸಿಂಗ್ ಮತ್ತು ವೀರೇಂದ್ರ ದಹಿಯಾ ಅವರೊಂದಿಗೆ ಸೇರಿ ತೂಕ ಕಳೆದುಕೊಳ್ಳುವ ತಮ್ಮ ಗುರಿ ಸಾಧಿಸಿದ್ದರು. ಅವರು 4.6 ಕೆಜಿಗಳನ್ನು ಕಡಿಮೆ ಮಾಡಿಕೊಂಡಿದ್ದು, 56.9 ಕೆಜಿ ತೂಕದೊಂದಿಗೆ ಕಂಚಿನ ಪದಕದ ಹೋರಾಟಕ್ಕೆ ಅವರು ಅರ್ಹತೆ ಪಡೆದರು.
ಇದು ನಿರ್ಣಾಯಕ ಮಿತಿಗಿಂತ ನಿಖರವಾಗಿ 100 ಗ್ರಾಂ ಕಡಿಮೆಯಾಗಿದೆ. ವಿನೇಶ್ ಫೋಗಟ್‌ಗೆ 100 ಗ್ರಾಂ ದುರಂತವಾದರೆ, ಅಮಾನ್‌ಗೆ 100 ಗ್ರಾಂ ಅರ್ಹತೆಗೆ ಕಾರಣವಾಯಿತು.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

ಸಮಯ ಇರಲಿಲ್ಲ… ಆದರೆ ಗುರಿ ಸಾಧಿಸಬೇಕಿತ್ತು…
ʼಮಿಷನ್’ ಒಂದೂವರೆ-ಗಂಟೆಯ ಮ್ಯಾಟ್ ಸೆಷನ್‌ನೊಂದಿಗೆ ತೂಕ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಪ್ರಾರಂಭವಾಯಿತು, ಈ ಸಮಯದಲ್ಲಿ ಇಬ್ಬರು ಹಿರಿಯ ತರಬೇತುದಾರರು ಅಮನ್ ಸೆಹ್ರಾವತ್ ಅವರನ್ನು ಕುಸ್ತಿಯಲ್ಲಿ ತೊಡಗಿಸಿಕೊಂಡರು ಮತ್ತು ಅದರ ನಂತರ ಒಂದು ತಾಸು ಬಿಸಿ-ಸ್ನಾನದ ಪ್ರಯೋಗ ನಡೆಯಿತು. ನಂತರ 12:30 ಕ್ಕೆ ಅವರು ಜಿಮ್‌ಗೆ ಬಂದರು, ಅಲ್ಲಿ ಅಮನ್ ಟ್ರೆಡ್‌ಮಿಲ್‌ನಲ್ಲಿ ತಡೆರಹಿತ ಒಂದು ಗಂಟೆ ಓಡಿದರು. ಯಾಕೆಂದರೆ ಬೆವರುವಿಕೆಯು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಂತರ ಅವರಿಗೆ 30 ನಿಮಿಷಗಳ ವಿರಾಮವನ್ನು ನೀಡಲಾಯಿತು, ನಂತರ 5 ನಿಮಿಷಗಳ ಸೌನಾ ಸ್ನಾನದ ಐದು ಸೆಶನ್‌ ನೀಡಲಾಯಿತು.
ಕೊನೆಯ ಸೆಶನ್‌ ಅಂತ್ಯದ ವೇಳೆಗೆ, ಅಮನ್ ಅವರು ನಿಗದಿಗಿಂತ ಇನ್ನೂ 900 ಗ್ರಾಂ ಹೆಚ್ಚು ತೂಕ ಹೊಂದಿದ್ದರು.
ಎಲ್ಲರಿಗೂ ಟೆನ್ಶನ್‌.. ಟೆನ್ಶನ್‌…ಅವರಿಗೆ ಮಸಾಜ್ ಮಾಡಲಾಯಿತು ಮತ್ತು ನಂತರ ತರಬೇತುದಾರರು ಲಘು ಜಾಗಿಂಗ್ ಮಾಡಲು ಹೇಳಿದರು. ಅದರ ನಂತರ ಐದು 15 ನಿಮಿಷಗಳ ಓಟದ ಅವಧಿಗಳು ನಡೆದವು. ಮುಂಜಾನೆ 4:30 ರ ಹೊತ್ತಿಗೆ, ಅಮನ್ 56.9 ಕೆಜಿ ತೂಕ ಹೊಂದಿದ್ದರು. ಇದು ನಿಗದಿಪಡಿಸಿದ ಮಿತಿಗಿಂತ 100 ಗ್ರಾಂ ಕಡಿಮೆ. ತರಬೇತುದಾರರು ಮತ್ತು ಕುಸ್ತಿಪಟು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಈ ಅವಧಿಗಳ ನಡುವೆ, ಅಮಾನ್‌ಗೆ ನಿಂಬೆ ಮತ್ತು ಜೇನುತುಪ್ಪದೊಂದಿಗೆ ಉಗುರು ಬೆಚ್ಚಗಿನ ನೀರು ಮತ್ತು ಕುಡಿಯಲು ಸ್ವಲ್ಪ ಕಾಫಿಯನ್ನು ನೀಡಲಾಯಿತು.

ಪ್ರಮುಖ ಸುದ್ದಿ :-   ಕಸದ ರಾಶಿಯ ಮಧ್ಯೆ ಕ್ಯಾನ್ಸರ್ ಪೀಡಿತ ವೃದ್ಧ ಮಹಿಳೆ ಪತ್ತೆ : ಮೊಮ್ಮಗ ನನ್ನನ್ನು ಇಲ್ಲಿ ಬಿಟ್ಟು ಹೋದ ಎಂದ ವೃದ್ಧೆ...!

ನಿದ್ರೆ ಬರಲಿಲ್ಲ….
“ನಾನು ಇಡೀ ರಾತ್ರಿ ಕುಸ್ತಿ ಪಂದ್ಯಗಳ ವೀಡಿಯೊಗಳನ್ನು ವೀಕ್ಷಿಸಿದ್ದೇನೆ. ನಾವು ಪ್ರತಿ ಗಂಟೆಗೆ ಆತನ ತೂಕವನ್ನು ಪರೀಕ್ಷಿಸುತ್ತಿದ್ದೆವು. ನಾವು ಇಡೀ ರಾತ್ರಿ ಮಲಗಲಿಲ್ಲ, ಹಗಲಿನಲ್ಲಿಯೂ ಸಹ” ಎಂದು ಕೋಚ್ ದಹಿಯಾ ಹೇಳಿದರು.
“ತೂಕ ಕಡಿತಗೊಳಿಸುವುದು ವಾಡಿಕೆ, ನಮಗೆ ಸಾಮಾನ್ಯ ಆದರೆ ಹಿಂದಿನ ದಿನ (ವಿನೇಶ್ ಪೋಗಟ್‌ ಜೊತೆ) ಏನಾಯಿತು ಎಂಬ ಕಾರಣದಿಂದಾಗಿ ಟೆನ್ಷನ್, ಸಾಕಷ್ಟು ಟೆನ್ಷನ್ ಇತ್ತು. ನಾವು ಮತ್ತೊಂದು ಪದಕವನ್ನು ಕಳೆದುಕೊಳ್ಳಲು ಬಿಡಲಿಲ್ಲ” ಎಂದು ದಹಿಯಾ ಹೇಳಿದರು.
ಶುಕ್ರವಾರದಂದು ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ಅವರನ್ನು ಸೋಲಿಸಿ ಅಮಾನ್ ಕಂಚಿನ ಪದಕವನ್ನು ಗೆದ್ದಾಗ ಕಠಿಣ ಪರಿಶ್ರಮವು ಫಲಪ್ರದವಾಯಿತು, ಅವರು ಭಾರತದ ಅತ್ಯಂತ ಕಿರಿಯ ಒಲಿಂಪಿಕ್ ಪದಕ ವಿಜೇತರಾದರು.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement