ಭೂಮಿ ಮೇಲಿನ ಅತ್ಯಂತ ಭೀಕರ ವರ್ಷ ಯಾವುದು ? ಕೋವಿಡ್‌-19 ಸಮಯ ಅಲ್ಲ .; 536ನೇ ಇಸ್ವಿಯಂತೆ : ಅದೇ ವರ್ಷ ಯಾಕೆಂದರೆ…

ಈಗ ಯಾರನ್ನಾದರೂ ಕೇಳಿದರೆ ಅತ್ಯಂತ ಕರಾಳ ಸಮಯ ಅಥವಾ ಕಾಲ ಯಾವುದೆಂದು ಕೇಳಿದರೆ ಅನೇಕರು ಸಹಜವಾಗಿಯೇ ಕೋವಿಡ್‌-19 ಸಾಂಕ್ರಾಮಿಕ ರೋಗದ ಸಮಯ ಎಂದು ಹೇಳುತ್ತಾರೆ. ಈ ಸಾಂಕ್ರಾಮಿಕವು ಅಭೂತಪೂರ್ವ ಸವಾಲುಗಳು ಮತ್ತು ವಿನಾಶವನ್ನು ಉಂಟುಮಾಡಿದೆ ಎಂಬುದು ನಿಜವಾಗಿದ್ದರೂ, ಇತಿಹಾಸವು ಇದಕ್ಕಿಂತ ಭೀಕರ ಕರಾಳ ಸಮಯದ ಬಗ್ಗೆಯೂ ಹೇಳುತ್ತದೆ. ಹಾಗಾದರೆ ಯಾವ ಯುಗವು ಅತ್ಯಂತ ಭೀಕರವಾಗಿತ್ತು? ಯುರೋಪ್ ಅನ್ನು ಧ್ವಂಸಗೊಳಿಸಿದ 1918ರ ಸ್ಪೇನಿಶ್‌ ಫ್ಲೂ ಸಾಂಕ್ರಾಮಿಕ ರೋಗ 5-10 ಕೋಟಿ ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಆದರೆ ಅದು ಅಲ್ಲವೆಂದು ವಿಜ್ಞಾನಿಗಳು ಹೇಳುತ್ತಾರೆ. ಅವರು 536 ರಲ್ಲಿ ಸಂಭವಿಸಿದ ದೊಡ್ಡ ಜ್ವಾಲಾಮುಖಿ ಸ್ಫೋಟದ ಕಾಲವೇ ಈವರೆಗಿನ ಅತ್ಯಂತ ಭೀಕರ ಕರಾಳ ಸಮಯ ಎಂದು ಹೇಳುತ್ತಾರೆ.

536 ರಲ್ಲಿ, ಯುರೋಪ್, ಮಧ್ಯಪ್ರಾಚ್ಯ ಮತ್ತು ಏಷ್ಯಾದ ಭಾಗಗಳಾದ್ಯಂತ ವಿಲಕ್ಷಣವಾದ ಮತ್ತು ಅಶುಭವಾದ ಮಂಜು ಆವರಿಸಿತ್ತು. ಇದು 18 ತಿಂಗಳುಗಳ ಕಾಲ ಜಗತ್ತನ್ನು ವಿಲಕ್ಷಣವಾದ ಕತ್ತಲೆಯಲ್ಲಿ ಮುಳುಗಿಸಿತು. ಇದು ಸಾಮಾನ್ಯ ಮಂಜಾಗಿರಲಿಲ್ಲ; ಹಗಲಿನಲ್ಲಿ ಸೂರ್ಯನನ್ನೇ ಅಸ್ಪಷ್ಟವಾಗಿ ಗೋಚರಿಸುವಂತೆ ಮಾಡಿದ್ದ ಅಸಮಾಮಾನ್ಯ ಮಂಜು ಕವಿದಿತ್ತು, ಇದರಿಂದಾಗಿ ತಾಪಮಾನವು ಕುಸಿಯಿತು, ಸೂರ್ಯನ ಬೆಳಕೇ ಇಲ್ಲದೆ ಬೆಳೆಗಳು ನಾಶವಾದವು ಮತ್ತು ಸಾವಿನ ಸಂಖ್ಯೆಗಳು ಹೆಚ್ಚಾದವು. ಹಿಸ್ಟರಿ.ಕಾಮ್ (History.com) ಪ್ರಕಾರ, ಇದು ನಿಜವಾದ ಕರಾಳ ವರ್ಷ.
ಜ್ವಾಲಾಮುಖಿ ಸ್ಫೋಟವು ಈ ಅಸಮಾಮಾನ್ಯ ಧೂಳಿನ ಮಂಜು ಆವರಿಸಲು ಪ್ರಾಥಮಿಕ ಕಾರಣ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಆಂಟಿಕ್ವಿಟಿ ಜರ್ನಲ್‌ನಲ್ಲಿ ಪ್ರಕಟವಾದ 2018ರ ಲೇಖನದ ಪ್ರಕಾರ, 536ರ ಆರಂಭದಲ್ಲಿ ಸಂಭವಿಸಿದ ಐಸ್‌ಲ್ಯಾಂಡಿಕ್ ಜ್ವಾಲಾಮುಖಿ ಸ್ಫೋಟದಿಂದ ಭೂಮಿಯ ಉತ್ತರ ಗೋಳಾರ್ಧದಾದ್ಯಂತ ಹರಡಿದ ಬೂದಿಯಿಂದ ಮಂಜು ಉಂಟಾಗಿತ್ತು. ಇದುವರೆಗೆ ದಾಖಲಾದ ಅತ್ಯಂತ ಮಾರಕವಾದ 1815 ರಲ್ಲಿ ಸಂಭವಿಸಿದ ಮೌಂಟ್ ಟಾಂಬೊರಾ ಜ್ವಾಲಾಮುಖಿ ಸ್ಫೋಟದಂತೆಯೇ, ಆ ಸ್ಫೋಟವು ಪ್ರಪಂಚದ ಹವಾಮಾನದ ಮಾದರಿಗಳನ್ನೇ ಬದಲಾಯಿಸುವಷ್ಟು ದೊಡ್ಡದಾಗಿತ್ತು, ಇದರಿಂದಾಗಿ ವರ್ಷಗಳ ಕಾಲ ಜನರು ಹಸಿವಿನಿಂದ ಬಳಲುತ್ತಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

ಬೈಜಾಂಟೈನ್ ಇತಿಹಾಸಕಾರ ಪ್ರೊಕೊಪಿಯಸ್ ಅವರು “536ರ ಇಡೀ ವರ್ಷದಲ್ಲಿ ಚಂದ್ರನಂತೆ ಸೂರ್ಯನು ಸಹ ಪ್ರಕಾಶವಿಲ್ಲದ ಮಂದ ಬೆಳಕನ್ನು ನೀಡಿದ್ದ” ಎಂದು ಹಿಸ್ಟರಿ ಆಫ್ ದಿ ವಾರ್ಸ್, ಪುಸ್ತಕಗಳು III ಮತ್ತು IV ನಲ್ಲಿ ದಾಖಲಿಸಿದ್ದಾರೆ. ಜೊತೆಗೆ, ಸೂರ್ಯನು ಯಾವಾಗಲೂ ಗ್ರಹಣದ ಸ್ಥಿತಿಯಲ್ಲಿರುವಂತೆ ಕಂಡುಬರುತ್ತಿದ್ದ ಮತ್ತು ಈ ಅವಧಿಯಲ್ಲಿ “ಪುರುಷರು ಯುದ್ಧ ಅಥವಾ ಪಿಡುಗು ಅಥವಾ ಸಾವಿಗೆ ಕಾರಣವಾಗುವ ಯಾವುದರಿಂದಲೂ ಮುಕ್ತರಾಗಿರಲಿಲ್ಲ” ಎಂದು ಸಂಶೋಧಕರು ಗಮನಿಸಿದ್ದಾರೆ.
1990 ರ ದಶಕದಿಂದಲೂ ನಡೆಯುತ್ತಿರುವ ಮರದ ಉಂಗುರದ ತನಿಖೆಗಳು 540 ರ ಬೇಸಿಗೆ ಅಸಹಜವಾಗಿ ತಂಪಾಗಿತ್ತು ಎಂದು ಬಹಿರಂಗಪಡಿಸಿವೆ, ವಿಜ್ಞಾನಿಗಳು ಇದಕ್ಕೆ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಗ್ರೀನ್‌ಲ್ಯಾಂಡ್ ಮತ್ತು ಅಂಟಾರ್ಟಿಕಾದದ ಧ್ರುವೀಯ ಮಂಜುಗಡ್ಡೆಗಳಲ್ಲಿ ಈ ಬಗ್ಗೆ ಸುಳಿವು ಪತ್ತೆಯಾಗಿದೆ.

ಜ್ವಾಲಾಮುಖಿಯ ಸ್ಫೋಟವು ಗಂಧಕ ಮತ್ತು ಬಿಸ್ಮತ್ ಸೇರಿದಂತೆ ವಾತಾವರಣಕ್ಕೆ ಹೆಚ್ಚಿನ ಕಣಗಳನ್ನು ಕಳುಹಿಸಿತ್ತು ಇದು ಸೌರ ವಿಕಿರಣವನ್ನು ಬಾಹ್ಯಾಕಾಶದಲ್ಲಿ ಏರೋಸಾಲ್ ಮುಸುಕನ್ನು ಉತ್ಪಾದಿಸಲು ಕಾರಣವಾಯ್ತು ಹಾಗೂ ಭೂಮಿಯನ್ನು ತಂಪಾಗಿಸಿತು.
535 ರ ಕೊನೆಯಲ್ಲಿ ಅಥವಾ 536 ರ ಆರಂಭದಲ್ಲಿ ಬಹುಶಃ ಉತ್ತರ ಅಮೆರಿಕಾದಲ್ಲಿ ದೊಡ್ಡ ಸ್ಫೋಟ ಸಂಭವಿಸಿತ್ತು ಎಂದು ಸಂಶೋಧಕರು ಪ್ರಸ್ತಾಪಿಸಿದ್ದಾರೆ. 540 ರಲ್ಲಿ ಮತ್ತೊಂದು ಸ್ಫೋಟ ಸಂಭವಿಸಿತ್ತು ಎಂದು ಹೇಳುತ್ತಾರೆ. ಸಿಗ್ಲ್‌ನ ವಿಜ್ಞಾನಿಗಳ ಪ್ರಕಾರ ಅವಳಿ ಸ್ಪೋಟವು ವಿಸ್ತೃತ ಕತ್ತಲೆ ಮತ್ತು ಶೀತಕ್ಕೆ ಕಾರಣವಾಗಿತ್ತು. ಏಷ್ಯಾ ಮತ್ತು ಯುರೋಪ್ 35-37°F ತಂಪಾದ ಬೇಸಿಗೆಯನ್ನು ಕಂಡಿತು; ಚೀನಾ ಕೂಡ ಬೇಸಿಗೆಯಲ್ಲಿ ಹಿಮಪಾತವನ್ನು ಅನುಭವಿಸಿತ್ತು. ಜ್ವಾಲಾಮುಖಿ ಬೂದಿಯಿಂದ ಸೂರ್ಯನು ಅಸ್ಪಷ್ಟವಾಗಿ ಗೋಚರಿಸುತ್ತಿದ್ದ, ಬೆಳಕೆ ಕಾಣುತ್ತಿರಲಿಲ್ಲ.
Science.org ಪ್ರಕಾರ, ಆಂಟಿಕ್ವಿಟಿ ಸಂಶೋಧನೆಯ ಸಹ-ಲೇಖಕ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕ ಮೈಕೆಲ್ ಮೆಕ್‌ಕಾರ್ಮಿಕ್ ಅವರು ಇದು ಅತ್ಯಂತ ಕರಾಳ ಅವಧಿ ಅಥವಾ ಕೆಟ್ಟ ಕರಾಳ ವರ್ಷ ಎಂದು ಹೇಳುತ್ತಾರೆ.

ಪ್ರಮುಖ ಸುದ್ದಿ :-   ಟಿಎಂಸಿ ಇಬ್ಭಾಗ ; ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉಚ್ಚಾಟಿತ ಶಾಸಕ ರಿತಬ್ರತ ಬೆಂಬಲಿಸಿ ಸ್ಪೀಕರ್‌ಗೆ 58 ಶಾಸಕರ ಹಕ್ಕು ಸಲ್ಲಿಕೆ !

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement