ವೀಡಿಯೊ..| ವೈದ್ಯ ವಿದ್ಯಾರ್ಥಿನಿ ಕೊಲೆಯಾದ ಸ್ಥಳದಲ್ಲಿ ಕಾಮಗಾರಿ; ವೀಡಿಯೊ ಹಂಚಿಕೊಂಡು ಇದು ಸಾಕ್ಷ್ಯ ನಾಶದ ಯತ್ನ ಎಂದು ಆರೋಪಿಸಿದ ಬಿಜೆಪಿ

ಕೋಲ್ಕತ್ತಾ : ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಹೊಸ ರಾಜಕೀಯ ವಿವಾದ ಭುಗಿಲೆದ್ದಿದ್ದು, ಎಡ ಗುಂಪುಗಳು ಮತ್ತು ಬಿಜೆಪಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ಸಾಕ್ಷ್ಯ ನಾಶಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿವೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಅಧಿಕಾರಿಗಳು, ಎದೆಯ ಔಷಧ ವಿಭಾಗದ ಒಳಗೆ ಕೊಠಡಿಯ ಗೋಡೆಗಳನ್ನು ಒಡೆದು ಹಾಕಿದ್ದಾರೆ. ಅಲ್ಲಿಯೇ ಟ್ರೈನಿ ವೈದ್ಯೆಯನ್ನು ಅತ್ಯಾಚಾರ ಮತ್ತು ಕ್ರೂರವಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸಿಪಿಐ(ಎಂ)-ಸಂಯೋಜಿತ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಮತ್ತು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ವೈದ್ಯೆಯ ಶವ ಪತ್ತೆಯಾದ ಸೆಮಿನಾರ್ ಕೊಠಡಿಯ ಬಳಿ ನವೀಕರಣ ಕಾರ್ಯವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ. ಅಧಿಕಾರಿಗಳು ಸಾಕ್ಷ್ಯ ನಾಶಪಡಿಸಿ ನಿಜವಾದ ಅಪರಾಧಿಗಳನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಯ ತುರ್ತು ಕಟ್ಟಡದ ಗೇಟ್ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಎಡ ರಂಗ-ಸಂಯೋಜಿತ ವೈದ್ಯರ ಜಂಟಿ ವೇದಿಕೆ ವೈದ್ಯರು, ಮೃತ ವೈದ್ಯೆ ಅನೇಕ ವ್ಯಕ್ತಿಗಳಿಂದ ಅತ್ಯಾಚಾರಕ್ಕೊಳಗಾಗಿರಬಹುದು ಎಂದು ಪೋಸ್ಟ್‌ಮಾರ್ಟಮ್ ವರದಿ ಸೂಚಿಸಿದೆ ಎಂದು ಹೇಳಿದ್ದಾರೆ. ಇದು ಒಬ್ಬ ವ್ಯಕ್ತಿಯ ಕೆಲಸವಲ್ಲ… ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಪೋಸ್ಟ್‌ಮಾರ್ಟಮ್ ವರದಿ ನೋಡಿದ ಸಂತ್ರಸ್ತೆಯ ಕುಟುಂಬದೊಂದಿಗೆ ಇದ್ದ ವೈದ್ಯೆ ಸುವರ್ಣ ಗೋಸ್ವಾಮಿ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್‌ ಎಕ್ಸ್‌ಪ್ರಸ್‌ ವರದಿ ಮಾಡಿದೆ.
31 ವರ್ಷದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಇಲ್ಲಿಯವರೆಗೆ ನಾಗರಿಕ ಸ್ವಯಂಸೇವಕ ಸಂಜೋಯ ರಾಯ್ ಎಂಬಾತನನ್ನು ಬಂಧಿಸಿದ್ದಾರೆ. ಏತನ್ಮಧ್ಯೆ, ಸಿಬಿಐ ಬುಧವಾರ ಬೆಳಗ್ಗೆ ಪ್ರಕರಣವನ್ನು ಕೈಗೆತ್ತಿಕೊಂಡಿದೆ.
ಮಮತಾ ಬ್ಯಾನರ್ಜಿಯವರ ನಿರಾಸಕ್ತಿ ಮತ್ತು ಕೋಲ್ಕತ್ತಾ ಪೊಲೀಸರಿಂದ ಪ್ರಕರಣ ಮುಚ್ಚಿಹಾಕುವ ಯತ್ನದ ವಿರುದ್ಧ ಪಶ್ಚಿಮ ಬಂಗಾಳವು ಕೋಪದಿಂದ ಕುದಿಯುತ್ತಿರುವಾಗ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಅಧಿಕಾರಿಗಳು ಎದೆಯ ವೈದ್ಯಕೀಯ ವಿಭಾಗದ ಕೊಠಡಿಯ ಗೋಡೆಗಳನ್ನು ಒಡೆದಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಆರೋಪಿಸಿದ್ದಾರೆ. ಕಿರಿಯ ವೈದ್ಯೆಯನ್ನು ಕ್ರೂರ ಅತ್ಯಾಚಾರ ಮತ್ತು ಕೊಲೆಗೆ ಒಳಪಡಿಸಲಾಯಿತು, ನಿರ್ಣಾಯಕ ಸಾಂದರ್ಭಿಕ ಸಾಕ್ಷ್ಯವನ್ನು ನಾಶಪಡಿಸಲಾಯಿತು. ಆದರೆ ಇದು ಸಿಬಿಐ ತನಿಖಾ ತಂಡವನ್ನು ಕೊಲೆಗಾರರ ಬಳಿ ಕರೆದೊಯ್ಯುತ್ತದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭೀಕರ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ‘ಐಎಸ್‌ಐ’ ಬೆಂಬಲಿತ ಉಗ್ರ ಜಾಲ ಭೇದಿಸಿದ ಪೊಲೀಸರು : 7 ಮಂದಿ ಕುಖ್ಯಾತರ ಬಂಧನ

“ರೆಸಿಡೆಂಟ್ ಡಾಕ್ಟರ್ಸ್ ಏರಿಯಾ ಎಂದು ಗುರುತಿಸಲಾದ ಪ್ರದೇಶ ಮತ್ತು ಚೆಸ್ಟ್ ಮೆಡಿಸಿನ್ ವಿಭಾಗದ ಒಳಗಿನ ಶೌಚಾಲಯ (ಮಹಿಳೆ)ವನ್ನು ಸಹ ನವೀಕರಣದ ಹೆಸರಿನಲ್ಲಿ ಕಡೆವಲಾಗಿದೆ. ಮಮತಾ ಬ್ಯಾನರ್ಜಿ ಅವರು ಘೋರ ಅಪರಾಧದಲ್ಲಿ ಭಾಗಿಯಾಗಿರುವವರನ್ನು ರಕ್ಷಿಸಲು ಪುರಾವೆಗಳನ್ನು ಅಳಿಸಿಹಾಕುತ್ತಿದ್ದಾರೆ ಎಂಬುದರಲ್ಲಿ ಯಾರಿಗೂ ಸಂದೇಹವಿಲ್ಲ. ಬಂಗಾಳದಲ್ಲಿ ಯಾವುದೇ ಮಹಿಳೆ ಸುರಕ್ಷಿತವಾಗಿಲ್ಲ, ”ಎಂದು ಅಮಿತ್ ಮಾಳವಿಯಾ ವೀಡಿಯೊ ಹಂಚಿಕೊಂಡು ಎಕ್ಸ್‌ನಲ್ಲಿ ಬರೆದಿದ್ದಾರೆ.
ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಮಿನಾಕ್ಷಿ ಮುಖರ್ಜಿ, ಟಿಎಂಸಿ ಸರ್ಕಾರ ನಿಜವಾದ ಅಪರಾಧಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಶಾಸಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, “ಅವರು ಈಗಾಗಲೇ ಸಾಕಷ್ಟು ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ. ಸಿಬಿಐ ಕೂಡಲೇ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು. ಮುಖ್ಯಮಂತ್ರಿ ಮತ್ತು ರಾಜ್ಯದ ಗೃಹ ಸಚಿವರಾಗಿರುವ ಮಮತಾ ಬ್ಯಾನರ್ಜಿ ಅವರ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸಿಬಿಐ ತಂಡ ಕೋಲ್ಕತ್ತಾಕ್ಕೆ ಆಗಮನ
ಕೋಲ್ಕತ್ತಾ ಹೈಕೋರ್ಟ್‌ನ ಆದೇಶದಂತೆ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ವಹಿಸಿಕೊಳ್ಳಲು ದೆಹಲಿಯಿಂದ ವಿಶೇಷ ವೈದ್ಯಕೀಯ ಮತ್ತು ವಿಧಿವಿಜ್ಞಾನ ತಂಡದೊಂದಿಗೆ ಸಿಬಿಐ ತಂಡ ಆಗಮಿಸಿದೆ.
ಮಂಗಳವಾರ, ಕೋಲ್ಕತ್ತಾ ಹೈಕೋರ್ಟ್ ಈ ಪ್ರಕರಣದ ಸಿಬಿಐ ತನಿಖೆಗೆ ಆದೇಶಿಸಿದೆ. ಕೋಲ್ಕತ್ತಾ ಪೊಲೀಸರಿಗೆ ಎಲ್ಲಾ ದಾಖಲೆಗಳನ್ನು ತಕ್ಷಣವೇ ಸಿಬಿಐಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಸೂಚಿಸಿದೆ.
ಮಹಿಳಾ ವೈದ್ಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆಯ ವಿರುದ್ಧ ಒಗ್ಗಟ್ಟಿನಿಂದ ಮಂಗಳವಾರದಿಂದ ರಾಷ್ಟ್ರವ್ಯಾಪಿ ಒಪಿಡಿ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ ​​(ಎಫ್‌ಎಐಎಂಎ) ಕರೆ ನೀಡಿದ ನಂತರ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ದೆಹಲಿಯ ಏಮ್ಸ್‌ನಲ್ಲಿ ಪ್ರತಿಭಟನೆ ನಡೆಸಿದರು. ಹಲವೆಡೆ ಪ್ರತಿಭಟನೆಗಳು ಮುಂದುವರಿದಿವೆ.

ಪ್ರಮುಖ ಸುದ್ದಿ :-   ಜೂನ್ 22ರ ವರೆಗೆ ದೇಶಾದ್ಯಂತ ಟೆಲಿಗ್ರಾಂ ಬಂದ್‌ ; ನೀಟ್ ಮರುಪರೀಕ್ಷೆ ಅಕ್ರಮ ತಡೆಗೆ ಕ್ರಮ : ತೊಂದರೆಗೆ ಕ್ಷಮೆ ಕೋರಿದ ಎನ್‌ಟಿಎ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement