ಆಘಾತಕಾರಿ ವೀಡಿಯೊ | ಕೌಟುಂಬಿಕ ಕಲಹಕ್ಕೆ ರಸ್ತೆ ರಂಪಾಟ : ಮಗು ಜತೆ ಮಹಿಳೆ ಕುಳಿತಿದ್ದ ಕಾರಿಗೆ ತನ್ನ ಕಾರಿನಿಂದ 2 ಸಲ ಡಿಕ್ಕಿ ಹೊಡೆದ ವ್ಯಕ್ತಿ ; ನಾಲ್ವರಿಗೆ ಗಾಯ

ಮುಂಬೈ : ಕೌಟುಂಬಿಕ ಕಲಹದ ಕಾರಣಕ್ಕೆ ಕಾರು ಚಾಲಕನೊಬ್ಬ ತನ್ನ ವಾಹನವನ್ನು ಮತ್ತೊಂದು ಕಾರಿಗೆ ಎರಡು ಬಾರಿ ಡಿಕ್ಕಿ ಹೊಡೆಸಿದ ಘಟನೆಯಲ್ಲಿ ನಾಲ್ವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ.
ಘಟನೆ ಥಾಣೆ ಜಿಲ್ಲೆಯ ಅಂಬರನಾಥ್-ಬದ್ಲಾಪುರ ರಸ್ತೆಯಲ್ಲಿ ನಡೆದಿದ್ದು, ಇದರ ವೀಡಿಯೋ ವೈರಲ್ ಆಗಿದೆ. ಕಪ್ಪು ಬಣ್ಣದ ಎಸ್‌ಯುವಿ ಜನನಿಬಿಡ ರಸ್ತೆಯಲ್ಲಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಮಂಗಳವಾರ (ಆಗಸ್ಟ್ 20) ಸಂಜೆ ಅಂಬರನಾಥ್-ಬದ್ಲಾಪುರ ರಸ್ತೆಯಲ್ಲಿ ಜಗಳವಾಡಿದ ನಂತರ ಕುಟುಂಬದ ಸದಸ್ಯರೊಬ್ಬರು ಚಲಾಯಿಸುತ್ತಿದ್ದ ಟಾಟಾ ಸಫಾರಿಯು ಕುಟುಂಬದ ಸದಸ್ಯರೊಬ್ಬರೊಬ್ಬರು ಟೊಯೊಟಾ ಫಾರ್ಚೂನರ್ ಎಸ್‌ಯುವಿಗೆ ಡಿಕ್ಕೆ ಹೊಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ಟಾಟಾ ಸಫಾರಿ ಓಡಿಸಿದ ವ್ಯಕ್ತಿ ಮತ್ತು ಆತನ ಪತ್ನಿ ವೈವಾಹಿಕ ಭಿನ್ನಾಭಿಪ್ರಾಯ ಹೊಂದಿದ್ದರು ಎಂದು ಶಂಕಿಸಲಾಗಿದೆ. ರಕ್ಷಣಾ ಇಲಾಖೆಯಿಂದ ನಿವೃತ್ತರಾಗಿರುವ ವ್ಯಕ್ತಿಯ ತಂದೆ ಮುಂಬೈನಲ್ಲಿ ಪತ್ನಿ ಮತ್ತು ಇನ್ನೊಬ್ಬ ಮಗನೊಂದಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ತಂದೆ, ತಾಯಿ ಮತ್ತು ಅವರ ಎರಡನೇ ಮಗ ಈ ವ್ಯಕ್ತಿ ಹಾಗೂ ಆತನ ಹೆಂಡತಿಯ ನಡುವಿನ ಜಗಳವನ್ನು ಬಗೆಹರಿಸಲು ಮುಂಬೈನಿಂದ ಬದ್ಲಾಪುರಕ್ಕೆ ಬಂದಿದ್ದರು. ಈ ವಿಚಾರವಾಗಿ ತಂದೆ ಮತ್ತು ಮಗ ಜಗಳವಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಕಪ್ಪು ಬಣ್ಣದ ಎಸ್‌ಯುವಿ ಚಲಾಯಿಸುತ್ತಿದ್ದ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ನಂತರ ಇತರ ಕುಟುಂಬ ಸದಸ್ಯರು ಮಧ್ಯ ಪ್ರವೇಶಿಸಿ ಮಹಿಳೆ ಮತ್ತು ಮಗುವನ್ನು ತಮ್ಮೊಂದಿಗೆ ಕರೆದೊಯ್ಯಲು ನಿರ್ಧರಿಸಿದರು. ಇದರಿಂದ ಕೋಪಗೊಂಡ ವ್ಯಕ್ತಿ ತನ್ನ ಕಪ್ಪು ಬಣ್ಣದ ಟಾಟಾ ಹ್ಯಾರಿಯರ್‌ ಕಾರಿನಿಂದ ತನ್ನ ಪತ್ನಿ ಹಾಗೂ ಮಗು ಕುಳಿತಿದ್ದ ಬಿಳಿ ಬಣ್ಣದ ಟೊಯೊಟಾ ಫಾರ್ಚುನರ್‌ಗೆ ಡಿಕ್ಕಿ ಹೊಡೆಸಿದ್ದಾನೆ. ಇದು ವೀಡಿಯೊದಲ್ಲಿ ಸೆರೆಯಾಗಿದೆ. ನಂತರ, ಅದು ಯು-ಟರ್ನ್‌ ತೆದುಕೊಂಡು ಬಂದು ಮುಂದಿನಿಂದ ಮತ್ತೆ ಟೊಯೊಟಾ ಫಾರ್ಚುನರ್‌ಗೆ ಡಿಕ್ಕಿ ಹೊಡೆಸಿದ್ದಾನೆ. ಇದರ ಪರಿಣಾಮವಾಗಿ ಕನಿಷ್ಠ ನಾಲ್ಕು ಜನರಿಗೆ ಗಾಯಗಳಾಗಿವೆ. ಘಟನೆಯ ಪರಿಣಾಮವಾಗಿ ರಸ್ತೆಯಲ್ಲಿ ನಿಂತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಬೈಕ್ ಸವಾರರನ್ನು ಕಪ್ಪು ಬಣ್ಣದ ಎಸ್‌ಯುವಿ ಡಿಕ್ಕಿ ಹೊಡೆದು ಹಲವಾರು ಮೀಟರ್ ಎಳೆದೊಯ್ದಿದೆ. ಸ್ಥಳೀಯರು ನೆರವಿಗೆ ಧಾವಿಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಅಂಬರನಾಥ್ ಮತ್ತು ಉಲ್ಲಾಸ್‌ನಗರದ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement