ಇತ್ತೀಚೆಗೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ 5 ವರ್ಷದ ಪುಟ್ಟ ಪೋರನೊಬ್ಬ ತನ್ನ ತಂದೆಯ ವಿರುದ್ಧ ದೂರು ದಾಖಲು ಮಾಡಲು ಪೊಲೀಸ್ ಠಾಣೆಗೆ ಬಂದಿದ್ದಾನೆ..! ಯಾರ ಭಯವೂ ಇಲ್ಲದೆ ನೇರವಾಗಿ ಪೊಲೀಸ್ ಠಾಣೆಗೆ ಬಂದ 5 ವರ್ಷದ ಬಾಲಕ ನದಿ ನೀರಿನಲ್ಲಿ ಆಟವಾಡಲು ಬಿಡದ ಹಾಗೂ ಜನನಿಬಿಡ ಬೀದಿಯಲ್ಲಿ ಆಟವಾಡುವುದನ್ನು ನಿರ್ಬಂಧಿಸಿದ್ದರಿಂದ ತಂದೆಯ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾನೆ. ಮುಗ್ಧ ಮಗು ಪೊಲೀಸ್ ಠಾಣೆಗೆ ಬಂದು ಎಫ್ಐಆರ್ ದಾಖಲಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಕಂಡುಬಂದಂತೆ, ಐದು ವರ್ಷದ ಬಾಲಕ ದೂರು ನೀಡಲು ಪೊಲೀಸ್ ಠಾಣೆಯಲ್ಲಿ ಕುರ್ಚಿಯ ಮೇಲೆ ಕುಳಿತಿದ್ದಾನೆ. ಒಬ್ಬ ಪೋಲೀಸ್ ಅಧಿಕಾರಿ ಈ ಪುಟ್ಟ ಪೋರನ ಮುಂದೆ (ಮೇಜಿನ ಎದುರು ಭಾಗದಲ್ಲಿ) ಕುಳಿತಿರುವುದು ಕಂಡುಬರುತ್ತದೆ. ಪೊಲೀಸ್ ಠಾಣೆಗೆ ಬಂದ ಮಗುವನ್ನು ನೋಡಿ ಪೊಲೀಸರಿಗೆ ನಗು ತಡೆಯಲಾಗಲಿಲ್ಲ. ಆದರೂ ಪೋಲೀಸ್ ಅಧಿಕಾರಿಗಳು ಮಗುವನ್ನು ಕುರ್ಚಿಯ ಮೇಲೆ ಕೂರಿಸಿದರು., ಪೊಲೀಸ್ ಅಧಿಕಾರಿ ಆ ಮಗುವಿನ ಹೆಸರನ್ನು ಕೇಳುತ್ತಾರೆ, ಯಾರ ವಿರುದ್ಧ ದೂರು ನೀಡಲು ಹಾಗೂ ಯಾವ ತಪ್ಪಿನ ಬಗ್ಗೆ ದೂರು ನೀಡಲು ಬಂದಿದ್ದೀಯಾ ಎಂದು ಕೇಳುತ್ತಾರೆ. ಸ್ವಲ್ಪವೂ ಅಳುಕದ ಬಾಲಕ ಅಧಿಕಾರಿಗೆ ಉತ್ತರಿಸಿ, ತನ್ನ ಹೆಸರನ್ನು ಹೇಳಿದ್ದಾನೆ. ಮತ್ತು ನದಿಗೆ ಹೋಗದಂತೆ ಅಥವಾ ಬೀದಿಯಲ್ಲಿ ಆಟವಾಡದಂತೆ ತನ್ನ ತಂದೆ ನಿರ್ಬಂಧಿಸಿದ್ದಾರೆ. ಹೀಗಾಗಿ ತಂದೆ ವಿರುದ್ಧ ಕ್ರಮ ಕೈಗೊಳ್ಳಬೇಕು,ಹಾಗೂ ಬಂಧಿಸಬೇಕು ಎಂದುಪೊಲೀಸ್ ಅಧಿಕಾರಿಗೆ ದೂರನ್ನು ನೀಡಿದ್ದಾನೆ. ಪೊಲೀಸ್ ಅಧಿಕಾರಿ ಕ್ರಮ ಕೈಗೊಳ್ಳುವುದಾಗಿ ಬಾಲಕನಿಗೆ ಭರವಸೆ ನೀಡಿದ ನಂತರ ಸಂತೋಷದಿಂದ ಅಲ್ಲಿಂದ ತೆರಳಿದೆ.
ಬಳಕೆದಾರ ಸುರೇಶ್ ಸಿಂಗ್ X ಪ್ಲಾಟ್ಫಾರ್ಮ್ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವರು ಹಿಂದಿಯಲ್ಲಿ ಬರೆದ ಶೀರ್ಷಿಕೆಯಲ್ಲಿ ಗೂಗಲ್ ಭಾಷಾಂತರದಲ್ಲಿ ಈ ಕೆಳಗಿನಂತೆ ಬರೆಯಲಾಗಿದೆ, “ಮಧ್ಯಪ್ರದೇಶದ ಧಾರ್ನಲ್ಲಿ, 5 ವರ್ಷದ ಮಗು ತನ್ನ ಸ್ವಂತ ತಂದೆಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತಲುಪಿದೆ. ನದಿಯಲ್ಲಿ ಸ್ನಾನ ಮಾಡಲು ಹೋಗುತ್ತಿದ್ದ ಮಗುವನ್ನು ತಂದೆ ತಡೆದು ಗದರಿಸಿದ್ದರು. ಇದರಿಂದ ಕೋಪಗೊಂಡ ಮಗು ತಂದೆಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತಲುಪಿದೆ ಎಂದು ಬರೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ