ಜಿಪಿಎಸ್ ಸಿಗ್ನಲ್ ಸಿಗದೆ ಸೌದಿ ಅರೇಬಿಯಾ ಮರುಭೂಮಿಯಲ್ಲಿ ಜೀವ ಕಳೆದುಕೊಂಡ ತೆಲಂಗಾಣ ವ್ಯಕ್ತಿ, ಸಹೋದ್ಯೋಗಿ

ಹೈದರಾಬಾದ್: ಸೌದಿ ಅರೇಬಿಯಾದ ರಬ್ ಅಲ್ ಖಲಿ ಮರುಭೂಮಿಯಲ್ಲಿ ತೆಲಂಗಾಣದ 27 ವರ್ಷದ ಯುವಕ ನಿರ್ಜಲೀಕರಣ ಮತ್ತು ಬಳಲಿಕೆಯಿಂದ ಸಾವಿಗೀಡಾಗಿದ್ದಾನೆ.
ಸೌದಿ ಅರೇಬಿಯಾದಲ್ಲಿ ಮೂರು ವರ್ಷಗಳಿಂದ ಟೆಲ್ಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣದ ಕರೀಂನಗರದ ನಿವಾಸಿ ಮೊಹಮ್ಮದ್ ಶೆಹಜಾದ್ ಖಾನ್ ಎಂಬವರು ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದಾದ ಮರುಭೂಮಿಯ ನಿರ್ಜನ ಮತ್ತು ಅಪಾಯಕಾರಿ ಖಾಲಿ ಕ್ವಾರ್ಟರ್ ಭಾಗದಲ್ಲಿ ಸಿಕ್ಕಿಬಿದ್ದಿದ್ದಾರೆ.
ಸೌದಿ ಅರೇಬಿಯಾದ ದಕ್ಷಿಣ ಪ್ರದೇಶಗಳು ಮತ್ತು ನೆರೆಯ ದೇಶಗಳಾದ್ಯಂತ 650 ಕಿಲೋಮೀಟರ್‌ಗಳಷ್ಟು ವಿಸ್ತರಿಸಿರುವ ರಬ್ ಅಲ್ ಖಲಿಯು ಮರುಭೂಮಿ ಅತ್ಯಂತ ಪರಿಸ್ಥಿತಿಗಳಿಗೆ ಕುಖ್ಯಾತವಾಗಿದೆ.

ಅಲ್ಲಿ ಅವರ ಜಿಪಿಎಸ್ ಸಿಗ್ನಲ್ ವಿಫಲವಾದ ನಂತರ ಸುಡಾನ್ ಪ್ರಜೆಯೊಂದಿಗೆ ಶೆಹ್ಜಾದ್ ದಾರಿ ತಪ್ಪಿದರು ಎಂದು ಹೇಳಲಾಗಿದೆ. ಅಲ್ಲದೆ, ಶೆಹಜಾದ್‌ನ ಮೊಬೈಲ್ ಫೋನ್ ಬ್ಯಾಟರಿ ಚಾರ್ಜ್‌ ಹೋಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಹಾಗಾಗಿ ಇವರಿಬ್ಬರಿಗೆ ಸಹಾಯಕ್ಕಾಗಿ ಕರೆ ಮಾಡಲು ಸಾಧ್ಯವಾಗಲಿಲ್ಲ. ಅವರ ವಾಹನದ ಇಂಧನ ಖಾಲಿಯಾದ ಕಾರಣ, ಮರುಭೂಮಿಯ ಬಿಸಿಲಿನ ತಾಪದಲ್ಲಿ ಅವರು ಆಹಾರ ಮತ್ತು ನೀರಿಲ್ಲದೆ ಪರದಾಡಿದರು.ತೀವ್ರ ಮಟ್ಟಕ್ಕೆ ಏರಿದ ತಾಪಮಾನದಲ್ಲಿ ಬಸವಳಿದ ಇಬ್ಬರೂ ತೀವ್ರ ನಿರ್ಜಲೀಕರಣ (dehydration) ಮತ್ತು ಬಳಲಿಕೆಯಿಂದಾಗಿ ಇಬ್ಬರೂ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ನಾಲ್ಕು ದಿನಗಳ ನಂತರ ಗುರುವಾರ ಶೆಹಜಾದ್ ಮತ್ತು ಆತನ ಸಹಚರನ ಮೃತದೇಹಗಳು ಮರಳು ದಿಬ್ಬದಲ್ಲಿ ಅವರ ವಾಹನದ ಪಕ್ಕದಲ್ಲಿ ಬಿದ್ದಿದ್ದವು ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement