ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ : ಭಾರತಕ್ಕೆ ಮೊದಲ ಚಿನ್ನದ ಪದಕ; 10 ಮೀ ಏರ್ ರೈಫಲ್​ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ

ಪ್ಯಾರಿಸ್‌ : ಅವನಿ ಲೇಖರಾ ಶುಕ್ರವಾರ ಪ್ಯಾರಿಸ್‌ ನಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಎರಡು ಪ್ಯಾರಾಲಿಂಪಿಕ್ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ, ಅವನಿ (22) ತಾವೇ ನಿರ್ಮಿಸಿದ್ದ ಟೋಕಿಯೊ ಪ್ಯಾರಾ ಒಲಿಂಪಿಕ್ಸ್ 249.6 ಪಾಯಿಂಟ್ಸ್‌ ದಾಖಲೆಯನ್ನು ಮುರಿದಿದ್ದಾರೆ. ಅವರು ಪ್ಯಾರಿಸ್‌ನ ಪ್ಯಾರಾ ಒಲಿಂಪಿಕ್ಸ್‌ನಲ್ಲಿ 249.7 ಪಾಯಿಂಟ್ಸ್‌ ಗಳಿಸುವ ಮೂಲಕ ತಮ್ಮ ಹಳೆಯ ದಾಖಲೆಯನ್ನು ತಾವೇ ಮುರಿದಿದ್ದಾರೆ. , ಆದರೆ 2022 ರಲ್ಲಿ ಶೂಟಿಂಗ್ ಕ್ರೀಡೆಯನ್ನು ಕೈಗೆತ್ತಿಕೊಂಡ ಬಾರತದ ಮೋನಾ ಅಗರ್ವಾಲ್‌ ಅವರು 228.7 ಪಾಯಿಂಟ್ಸ್‌ ಗಳಿಸುವ ಮೂಲಕ ಕಂಚಿನ ಪದಕ ಗೆದ್ದರು.

ಫೈನಲ್ ಸುತ್ತಿಗೂ ಮುನ್ನ ನಡೆದಿದ್ದ ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್ (SH1) ಅರ್ಹತಾ ಸುತ್ತಿನಲ್ಲಿ 625.8 ಅಂಕ ಕಲೆಹಾಕಿ ಎರಡನೇ ಸ್ಥಾನ ಗಳಿಸುವ ಮೂಲಕ ಅವನಿ ಫೈನಲ್‌ಗೆ ಪ್ರವೇಶಿಸಿದ್ದರು. ಹಾಗೆಯೇ ಭಾರತದ ಮತ್ತೋರ್ವ ಪ್ಯಾರಾ ಶೂಟರ್ ಮೋನಾ ಅಗರ್ವಾಲ್ ಕೂಡ ಫೈನಲ್ ಅರ್ಹತಾ ಸುತ್ತಿನಲ್ಲಿ ಐದನೇ ಸ್ಥಾನ ಪಡೆದು ಫೈನಲ್​ಗೆ ಲಗ್ಗೆ ಇಟ್ಟಿದ್ದರು. ಇದೀಗ ಈ ಇಬ್ಬರು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ದಕ್ಷಿಣ ಕೊರಿಯಾದ ಲೀ ಯುನ್ರಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.

11 ವರ್ಷದವಳಿದ್ದಾಗ ಕಾರ್ ಅಪಘಾತದಲ್ಲಿ ಬೆನ್ನು ಹುರಿಗೆ ಪೆಟ್ಟು ಬಿದ್ದು ಪಾರ್ಶ್ವವಾಯುವಿಗೆ ಒಳಗಾದ ನಂತರ ಸೊಂಟದ ಕೆಳಗಿನ ಭಾಗದ ಪ್ರಜ್ಞೆ ಕಳೆದುಕೊಂಡ ಅವನಿ ಲೆಖರಾ ನಂತರ ಗಾಲಿ ಕುರ್ಚಿಗೆ ಸೀಮಿತರಾದರು.. ಆದರೆ ಇದಾದ ನಂತರವೂ ಛಲ ಬಿಡದ ಅವನಿ ಶೂಟಿಂಗ್ ಅನ್ನೇ ವೃತ್ತಿಯನ್ನಾಗಿಸಿಕೊಂಡರು. ಇದಾದ ಬಳಿಕ 2015ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಅವನಿ ಆ ಬಳಿಕ ಹಿಂತಿರುಗಿ ನೋಡಲಿಲ್ಲ. 2021 ರಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದ ದೇಶದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಪ್ರಮುಖ ಸುದ್ದಿ :-   ಮ್ಯಾನ್ಮಾರ್‌ನಿಂದ ಮಣಿಪುರ ಪ್ರವೇಶಿಸಿದ ಶಸ್ತ್ರಸಜ್ಜಿತ 900 ಕುಕಿ ಉಗ್ರಗಾಮಿಗಳು ; ಮಣಿಪುರ ಸರ್ಕಾರದ ಎಚ್ಚರಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement