ಏಷ್ಯನ್ ಗೇಮ್ಸ್ 2026 : ಒಂದೇ ದಿನ 5 ಚಿನ್ನದ ಪದಕ ಗೆದ್ದ ಭಾರತ ; ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿತ

ಏಷ್ಯನ್ ಗೇಮ್ಸ್ 2026ರಲ್ಲಿ ಭಾರತ ಚಿನ್ನದ ಪದಕಗಳ ಬೇಟೆಯನ್ನು ಮುಂದುವರಿಸಿದ್ದು, ಶನಿವಾರ ಭಾರತದ ಆಟಗಾರರು ಒಟ್ಟು ಐದು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಹಾಗೂ ಪದಕ ಪಟ್ಟಿಯಲ್ಲಿ ಭಾರತವು ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಭಾರತವು ಶನಿವಾರ ಪುರಚರ ಕ್ರಿಕೆಟ್‌ ಮತ್ತು ಹಾಕಿ, ಮಹಿಳೆಯರ ಗಾಲ್ಫ್‌ ಸೇರಿದಂತೆ ಐದು ಚಿನ್ನದ ಪದಕಗಳನ್ನು ಗೆದ್ದುಕೊಂಡಿತು. ಭಾರತವು ಒಟ್ಟಾರೆಯಾಗಿ 21 ಚಿನ್ನ, … Continued

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ 2ನೇ ಚಿನ್ನ: ಏರ್‌ ಪಿಸ್ತೂಲ್‌ನಲ್ಲಿ ಸೂರೂಚಿ-ಕಮಲ್‌ಜೀತ್‌ ಜೋಡಿಯಿಂದ ಹೊಸ ಏಷ್ಯನ್‌ ದಾಖಲೆ

ನವದೆಹಲಿ: ಐಚಿ-ನಗೋಯಾ ಏಷ್ಯನ್‌ ಗೇಮ್ಸ್‌-2026ರಲ್ಲಿ ಭಾರತದ ಶೂಟಿಂಗ್‌ ತಂಡವು 10 ಮೀಟರ್‌ ಏರ್‌ ಪಿಸ್ತೂಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ ಸೂರೂಚಿ ಸಿಂಗ್‌ ಮತ್ತು ಕಮಲ್‌ಜೀತ್‌ ಚಿನ್ನದ ಪದಕ ಗೆದ್ದು ಭಾರತಕ್ಕೆ ಕ್ರೀಡಾಕೂಟದ ಎರಡನೇ ಚಿನ್ನ ತಂದುಕೊಟ್ಟಿದ್ದಾರೆ. ಫೈನಲ್‌ನಲ್ಲಿ 484.6 ಅಂಕಗಳನ್ನು ಕಲೆಹಾಕಿದ ಭಾರತೀಯ ಜೋಡಿ ದಕ್ಷಿಣ ಕೊರಿಯಾದ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು. ದಕ್ಷಿಣ ಕೊರಿಯಾ 478.0 … Continued

ಹ್ಯಾಟ್ರಿಕ್ ಸಾಧನೆ ! ಗ್ಲಾಸ್ಗೋ 2026 ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟು ದಾಖಲೆ ಬರೆದ ಮೀರಾಬಾಯಿ ಚಾನು

ಗ್ಲಾಸ್ಗೋ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಭರ್ಜರಿ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ ಕ್ರೀಡಾಕೂಟದ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಮಹಿಳೆಯರ 48 ಕೆ.ಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಪ್ರಭುತ್ವ ಸಾಧಿಸಿದ ಅವರು, ತಮ್ಮ ಸತತ ಮೂರನೇ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಹಿಂದೆ … Continued

ಭಾರತದ ಶೂಟಿಂಗ್ ದಂತಕಥೆ ಜಸ್ಪಾಲ್ ರಾಣಾ 49ನೇ ವಯಸ್ಸಿನಲ್ಲೇ ನಿಧನ

ನವದೆಹಲಿ: ಭಾರತದ ಖ್ಯಾತ ಶೂಟರ್ ಹಾಗೂ ಹೈ-ಪರ್ಫಾರ್ಮೆನ್ಸ್ ಪಿಸ್ತೂಲ್ ತರಬೇತುದಾರರಾದ ಜಸ್ಪಾಲ್ ರಾಣಾ (49) ಅವರು ಇಂದು ಶುಕ್ರವಾರ (ಜೂನ್‌ 12) ಬೆಳಗಿನ ಜಾವ ನವದೆಹಲಿಯಲ್ಲಿ ನಿಧನರಾಗಿದ್ದಾರೆ. ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಅಧ್ಯಕ್ಷರಾದ ಕಲಿಕೇಶ ನಾರಾಯಣ್ ಸಿಂಗ್ ದಿಯೋ ಅವರು ಈ ದುಃಖದ ಸಂಗತಿಯನ್ನು ದೃಢಪಡಿಸಿದ್ದಾರೆ. ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್‌ … Continued

ಭಾರತಕ್ಕೆ ನೀಡಬೇಕಿದ್ದ ಏಷ್ಯಾ ಕಪ್ ಟ್ರೋಫಿ ಹೊತ್ತೊಯ್ದ ಮೊಹ್ಸಿನ್ ನಖ್ವಿಗೆ ಪಾಕಿಸ್ತಾನದಲ್ಲಿ ‘ವಿಶೇಷ ಚಿನ್ನದ ಪದಕ’ ನೀಡಿ ಗೌರವ…!?

ಸೆಪ್ಟೆಂಬರ್ 28, ಭಾನುವಾರ ದುಬೈನಲ್ಲಿ ನಡೆದ ಏಷ್ಯಾ ಕಪ್ 2025 ಟ್ರೋಫಿಯನ್ನು ತೆಗೆದುಕೊಂಡು ಹೋದ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ಅಧ್ಯಕ್ಷರೂ ಆಗಿರುವ ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷ ಹಾಗೂ ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಸುದ್ದಿಯಾಗಿದ್ದರು. ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ಜಯಗಳಿಸಿದ ನಂತರ ಭಾರತವನ್ನು ಪದೇಪದೇ ಟೀಕಿಸಿದ ಅವರಿಂದ ಟ್ರೋಫಿಯನ್ನು … Continued

ಪ್ಯಾರಾಲಿಂಪಿಕ್ಸ್ 2024: ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ಭಾರತದ ನವದೀಪ್

ಪ್ಯಾರಿಸ್‌ : ಸೆಪ್ಟೆಂಬರ್ 7 ರಂದು ನಡೆದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ 7 ನೇ ಚಿನ್ನದ ಪದಕ ಗೆದ್ದುಕೊಂಡಿದೆ. ಜಾವೆಲಿನ್ ಎಸೆತಗಾರ ನವದೀಪ್ ಅವರು 47.32 ಮೀಟರ್‌ಗಳಷ್ಟು ದೂರ ಎಸೆದು ಪ್ಯಾರಾಲಿಂಪಿಕ್ ದಾಖಲೆಯನ್ನು ಮುರಿಯುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. 2021 ರಲ್ಲಿ ಟೋಕಿಯೊದಲ್ಲಿ ಚೀನಾದ ಪೆಂಗ್‌ಕ್ಸಿಯಾಂಗ್ ಸನ್ ಅವರು ನಿರ್ಮಿಸಿದ್ದ ಹಿಂದಿನ ದಾಖಲೆಯನ್ನು … Continued

ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್ : ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದ ಭಾರತದ ನಿತೇಶಕುಮಾರ

ನವದೆಹಲಿ : ನಿತೇಶಕುಮಾರ ಅವರು ಪ್ಯಾರಾಲಿಂಪಿಕ್ಸ್ 2024 ರ ಪುರುಷರ ಸಿಂಗಲ್ಸ್ ಎಸ್‌ಎಲ್ 3 (SL3) ವರ್ಗದ ಪ್ಯಾರಾ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಗೆದ್ದಿದ್ದಾರೆ. ಸೋಮವಾರ (ಸೆಪ್ಟೆಂಬರ್ 2) ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ಎಸ್‌ಎಲ್ 3 ವರ್ಗದ ಚಿನ್ನದ ಪದಕದ ಪಂದ್ಯದಲ್ಲಿ ನಿತೇಶಕುಮಾರ ಅವರು ಗ್ರೇಟ್ ಬ್ರಿಟನ್‌ನ ಡೇನಿಯಲ್ … Continued

ಹಂಗೇರಿ | ಯೂತ್ ವಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ; ಉತ್ತರ ಕನ್ನಡದ ಧನ್ವಿತಾ ಮೊಗೇರ ವಲ್ಡ್ ಚಾಂಪಿಯನ್

ಕಾರವಾರ : ಯುರೋಪಿನ ಹಂಗೇರಿಯಲ್ಲಿ ನಡೆದ ಯೂತ್ ವಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಧನ್ವಿತಾ ವಾಸು ಮೊಗೇರ ಚಿನ್ನದ ಪದಕ ಗೆದ್ದು ವಲ್ಡ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ. ಪ್ರಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ವಾಕೊ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ -2024 ರಲ್ಲಿ … Continued

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ : ಭಾರತಕ್ಕೆ ಮೊದಲ ಚಿನ್ನದ ಪದಕ; 10 ಮೀ ಏರ್ ರೈಫಲ್​ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ

ಪ್ಯಾರಿಸ್‌ : ಅವನಿ ಲೇಖರಾ ಶುಕ್ರವಾರ ಪ್ಯಾರಿಸ್‌ ನಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಎರಡು ಪ್ಯಾರಾಲಿಂಪಿಕ್ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ, … Continued

ವೀಡಿಯೊ…| ಒಲಿಂಪಿಕ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಂ ʼಲಷ್ಕರ್ ಉಗ್ರʼನ ಜತೆ ಇರುವ ವೀಡಿಯೊ ವೈರಲ್‌ !

ಜಾವೆಲಿನ್‌ ಥ್ರೋದಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಮ್, ಅಮೆರಿಕದಿಂದ ಭಯೋತ್ಪಾದಕ ಎಂದು ಗೊತ್ತುಪಡಿಸಿದ ಮೊಹಮ್ಮದ್ ಹ್ಯಾರಿಸ್ ಧರ್ ಅವರೊಂದಿಗೆ ಕಾಣಿಸಿಕೊಂಡ ವೀಡಿಯೊವೊಂದು ವೈರಲ್ ಆದ ನಂತರ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಆನ್‌ಲೈನ್ ಚರ್ಚೆಗೆ ಕಾರಣವಾಗಿರುವ ಈ ವೀಡಿಯೊ, ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಯ ರಾಜಕೀಯ ಫ್ರಂಟ್‌ ಮರ್ಕಝಿ ಮುಸ್ಲಿಂ ಲೀಗ್ … Continued