ಬೆಂಗಳೂರು : ಕೇಂದ್ರದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಘಟಕದಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್ ತಯಾರಿಸುವುದನ್ನು ಪರಿಶೀಲಿಸಿದರು. ಮುಂಬರುವ ಮೂರು ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಕಾರ್ಯಾಚರಣೆ ಮಾಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಹೆಚ್ಚಿನ ಪರೀಕ್ಷೆಗಾಗಿ ರೈಲು ಹಳಿಗಳ ಮೇಲೆ ಓಡಿಸುವ ಮೊದಲು, ವಂದೇ ಭಾರತ್ ಸ್ಲೀಪರ್ ಕೋಚ್ ಅನ್ನು ಹತ್ತು ದಿನಗಳ ಕಾಲ ಪ್ರಯೋಗಗಳು ಮತ್ತು ಪರೀಕ್ಷೆಗಳಿಗೆ ಒಳಪಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಮುಂದಿನ ಮೂರು ತಿಂಗಳಲ್ಲಿ ಇದು ಪ್ರಯಾಣಿಕರ ಕಾರ್ಯಾಚರಣೆಗೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
“ವಂದೇ ಭಾರತ್ ಚೇರ್ ಕಾರ್‌ಗಳ ನಂತರ, ನಾವು ವಂದೇ ಭಾರತ್ ಸ್ಲೀಪರ್ ಕಾರುಗಳ ಮೇಲೆ ಕೆಲಸ ಮಾಡುತ್ತಿದ್ದೇವೆ. ಅದರ ತಯಾರಿಕೆಯು ಈಗ ಪೂರ್ಣಗೊಂಡಿದೆ. ಈ ರೈಲು ಭಾನುವಾರ ಬಿಇಎಂಎಲ್ (BEML) ಸೌಲಭ್ಯದಿಂದ ಪ್ರಯೋಗ ಮತ್ತು ಪರೀಕ್ಷೆಗಾಗಿ ಹೊರಡಲಿದೆ” ಎಂದು ಸಚಿವ ವೈಷ್ಣವ್ ಹೇಳಿದರು.
ವಂದೇ ಭಾರತ್ ಸ್ಲೀಪರ್ ಕೋಚ್‌ನ ಪ್ರಮುಖ ಅಂಶಗಳು…
ಈ ರೈಲು ಗಂಟೆಗೆ ಗರಿಷ್ಠ 160 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 16 ಕೋಚ್‌ಗಳು ಇರುವ ವಂದೇ ಭಾರತ್ ಸ್ಲೀಪರ್ ರೈಲು ರಾತ್ರಿಯ ಪ್ರಯಾಣಕ್ಕೆ ನಿಗದಿಪಡಿಸಲಾಗಿದೆ. ಮತ್ತು 800 ಕಿ.ಮೀ ನಿಂದ 1,200 ಕಿ.ಮೀ ಕ್ರಮಿಸುತ್ತದೆ. ರೈಲಿನೊಳಗಿನ ಆಮ್ಲಜನಕದ ಮಟ್ಟ ಮತ್ತು ಕೋವಿಡ್-19 ಸಾಂಕ್ರಾಮಿಕದಿಂದ ಕಲಿತ ಪಾಠದಿಂದ ವೈರಸ್ ನಿಂದ ರಕ್ಷಣೆ ರೈಲಿನ ಹೆಚ್ಚುವರಿ ವೈಶಿಷ್ಟ್ಯಗಳಾಗಿವೆ ಎಂದು ವೈಷ್ಣವ್ ಹೇಳಿದರು.
ಇದು ಮಧ್ಯಮ ವರ್ಗದವರಿಗೆ ಮೀಸಲಾದ ರೈಲು ಮತ್ತು ದರಗಳು ರಾಜಧಾನಿ ಎಕ್ಸ್‌ಪ್ರೆಸ್ ದರಕ್ಕೆ ಸಮಾನವಾಗಿರುತ್ತದೆ” ಎಂದು ಅವರು ಹೇಳಿದರು. ಇದು ಜಿಎಫ್‌ಆರ್‌ಪಿ ಪ್ಯಾನೆಲ್‌ಗಳಿರುವ ಇಂಟೀರಿಯರ್, ಮಾಡ್ಯುಲರ್ ಪ್ಯಾಂಟ್ರಿ, ವಿಕಲಚೇತನರಿಗಾಗಿ ವಿಕಲಚೇತನರಿಗೆ ವಿಶೇಷ ಬರ್ತ್‌ಗಳು ಮತ್ತು ಶೌಚಾಲಯಗಳು, ಸ್ವಯಂಚಾಲಿತ ಪ್ರಯಾಣಿಕರ ಬಾಗಿಲುಗಳನ್ನು ಒಳಗೊಂಡಿರುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
1ನೇ ಎಸಿ ಕೋಚ್‌ನಲ್ಲಿ ಬಿಸಿನೀರಿನೊಂದಿಗೆ ಶವರ್, ಕೊನೆಯ ಗೋಡೆಯಲ್ಲಿ ರಿಮೋಟ್ ಚಾಲಿತ ಬೆಂಕಿ ನಿರೋಧಕ ಬಾಗಿಲುಗಳು, ಸೆನ್ಸರ್ ಆಧಾರಿತ ಇಂಟೀರಿಯರ್, ವಾಸನೆ ಮುಕ್ತ ಶೌಚಾಲಯ ವ್ಯವಸ್ಥೆ, ಯುಎಸ್‌ಬಿ ಚಾರ್ಜಿಂಗ್ ಸೌಲಭ್ಯದೊಂದಿಗೆ ಸಂಯೋಜಿತ ಓದಲು ಲೈಟ್, ವಿಶಾಲವಾದ ಲಗೇಜ್ ಕೋಣೆ ರೈಲಿನ ಇತರ ಪ್ರಮುಖ ವೈಶಿಷ್ಟ್ಯಗಳಲ್ಲಿ ಸೇರಿವೆ.
ವಂದೇ ಭಾರತ್ ಸ್ಲೀಪರ್ ಕಾರುಗಳ ಮೂಲಮಾದರಿಗಳನ್ನು ಸರಿಯಾಗಿ ಪರೀಕ್ಷಿಸಿದ ನಂತರ, ಇದರ ತಯಾರಿಕೆಯ ಸರಣಿಯು ಪ್ರಾರಂಭವಾಗುತ್ತದೆ.
ನಾವು ಒಂದೂವರೆ ವರ್ಷಗಳ ನಂತರ ತಯಾರಿಕೆಯ ಸರಣಿಯನ್ನು ಪ್ರಾರಂಭಿಸುತ್ತೇವೆ. ನಂತರ ಪ್ರಾಯೋಗಿಕವಾಗಿ ಪ್ರತಿ ತಿಂಗಳು ಎರಡರಿಂದ ಮೂರು ರೈಲುಗಳು ಹೊರಡಲು ಪ್ರಾರಂಭಿಸುತ್ತವೆ” ಎಂದು ವೈಷ್ಣವ್ ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ