ಮಡಗಾಂವ್-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರು ವರೆಗೆ ವಿಸ್ತರಣೆ

ಕಾರವಾರ: ಮಡಗಾಂವ್‌ (ಗೋವಾ)-ಮಂಗಳೂರು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಇದೀಗ ಬೆಂಗಳೂರಿನ ವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪತ್ರದ ಮೂಲಕ ತಮಗೆ ಮಾಹಿತಿ ನೀಡಿದ್ದನ್ನು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಬೆಂಗಳೂರು ಮತ್ತು ಮಡಗಾಂವ್ ನಡುವೆ … Continued

ಕರ್ನಾಟಕದ ಪಶ್ಚಿಮ ಘಟ್ಟದ ಮಂಜಿನ ಮಧ್ಯೆ ಕಿತ್ತಳೆ ಹಾವಿನಂತೆ ಸಾಗಿದ ʼವಂದೇ ಭಾರತʼ ರೈಲು ; ಅದ್ಭುತ ವಿಡಿಯೊಕ್ಕೆ ಭಾರೀ ಮೆಚ್ಚುಗೆ

ಬೆಂಗಳೂರು : ಪಶ್ಚಿಮ ಘಟ್ಟದ ದಟ್ಟ ಹಸಿರು ಕಾಡುಗಳು, ಎತ್ತರದ ಪರ್ವತಗಳು ಹಾಗೂ ಮಳೆಗಾಲದ ಮಂಜಿನ ಹೊದಿಕೆಯ ನಡುವೆ ಕಿತ್ತಳೆ-ಬಿಳಿ ಬಣ್ಣದ ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಸಾಗುತ್ತಿರುವ ಮನಮೋಹಕ ವೈಮಾನಿಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿವೆ. ಎಫ್‌ಪಿವಿ (FPV) ಕ್ರಿಯೇಟರ್‌ @hemisphere.fpv ಸೆರೆಹಿಡಿದ ಈ ಸಿನೆಮಾಟಿಕ್ ಡ್ರೋನ್ ವಿಡಿಯೊವನ್ನು ಕೇಂದ್ರ ರೈಲ್ವೆ … Continued

ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಸಿದ್ಧತೆ : ಪ್ರಯಾಣದ ಅವಧಿ 16 ತಾಸು

ಬೆಂಗಳೂರು: ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ ಸ್ಲೀಪರ್ ರೈಲು ಸೇವೆ ಆರಂಭಿಸಲು ದಕ್ಷಿಣ ಪಶ್ಚಿಮ ರೈಲ್ವೆ (SWR) ಸಿದ್ಧತೆ ನಡೆಸಿದೆ. ಬೆಂಗಳೂರು ಮೂಲದ ರೈಲ್ವೆ ವಲಯಕ್ಕೆ ಬಿಇಎಂಎಲ್ ನಿರ್ಮಿಸಿರುವ ಎರಡು 16 ಬೋಗಿಗಳ ವಂದೇ ಭಾರತ ಸ್ಲೀಪರ್ ರೈಲು ಸೆಟ್‌ಗಳು ತಲುಪಿದ್ದು, ಅವುಗಳನ್ನು ಸೇವೆಗೆ ನಿಯೋಜಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈನ ಇಂಟಿಗ್ರಲ್ ಕೋಚ್ … Continued

ವೀಡಿಯೊ..| ಪರಸ್ಪರ ಒಂದನ್ನೊಂದು ದಾಟುವ ‘ವಂದೇ ಭಾರತ’ ರೈಲುಗಳ ವೀಡಿಯೊ ಭಾರಿ ವೈರಲ್‌ : ಕೌತುಕದ ಈ ವೀಡಿಯೊ ‘ವಿಜ್ಞಾನವೇ? ಗೇಮಿಂಗ್ ಸೈಟೆ…?

ರೈಲ್ವೆ ಜಂಕ್ಷನ್‌ನಲ್ಲಿ ಮೂರು ಹೈಸ್ಪೀಡ್ ರೈಲುಗಳು ಸರಾಗವಾಗಿ ಪರಸ್ಪರ ದಾಟುತ್ತಿರುವುದನ್ನು ತೋರಿಸುವ ಅದ್ಭುತ ಅನಿಮೇಟೆಡ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಆಕರ್ಷಣೆ ಮತ್ತು ಚರ್ಚೆಗೆ ಕಾರಣವಾಗಿದೆ. ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವೀಡಿಯೊ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಪ್ರಶಂಸಿಸುತ್ತಾ ಭಾರತದ ಮುಂದುವರಿದ ರೈಲ್ವೆ ಮೂಲಸೌಕರ್ಯವನ್ನು ಪ್ರದರ್ಶಿಸುತ್ತದೆ ಎಂದು ಹೇಳುತ್ತದೆ. ಆದರೆ, ಇದು … Continued

ವೀಡಿಯೊ..| ದೇಶದ ಮೊದಲ ವಂದೇ ಭಾರತ ಸ್ಲೀಪರ್ ಕೋಚ್ ಹೇಗಿದೆ ನೋಡಿ…!

ಬೆಂಗಳೂರು : ಕೇಂದ್ರದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಘಟಕದಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್ ತಯಾರಿಸುವುದನ್ನು ಪರಿಶೀಲಿಸಿದರು. ಮುಂಬರುವ ಮೂರು ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಕಾರ್ಯಾಚರಣೆ ಮಾಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಹೆಚ್ಚಿನ ಪರೀಕ್ಷೆಗಾಗಿ ರೈಲು ಹಳಿಗಳ … Continued

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ… ಎಸಿ ಚೇರ್ ಕಾರ್, ಎಕ್ಸಿಕ್ಯೂಟಿವ್ ದರ್ಜೆಯ ದರಗಳಲ್ಲಿ ಭಾರಿ ಕಡಿತ

ನವದೆಹಲಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ ಭಾರತದಾದ್ಯಂತ ಚಲಿಸುವ ಎಲ್ಲಾ ರೈಲುಗಳಲ್ಲಿ ಭಾರತೀಯ ರೈಲ್ವೇಯು ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ದರ್ಜೆ ದರವನ್ನು ಶೇಕಡಾ 25ರ ವರೆಗೆ ಕಡಿತಗೊಳಿಸಲಿದೆ ಎಂದು ರೈಲ್ವೇ ಮಂಡಳಿಯ ಆದೇಶ ಹೇಳಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್, ಶತಾಬ್ದಿ ಎಕ್ಸ್‌ಪ್ರೆಸ್, ಅನುಭೂತಿ ಮತ್ತು ವಿಸ್ಟಾಡೋಮ್ ಕೋಚ್‌ಗಳಂತಹ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ … Continued