ಕಾರವಾರ: ನದಿಯಲ್ಲಿ ಮುಳುಗಿ ಗ್ರಾಮ ಪಂಚಾಯತ ಸದಸ್ಯರೊಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಕುಳಿ ಸಮೀಪ ಅಘನಾಶಿನಿ ನದಿ ಹಿನ್ನೀರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೀನು ಹಿಡಿಯಲು ಹೋಗಿದ್ದಾಗ ಈ ಅವಘಡ ಸಂಭವಿಸಿದ್ದು, ಮೃತರನ್ನು ದಾವುದ್ ಘಾರಿಯಾ (67) ಎಂದು ಗುರುತಿಸಲಾಗಿದೆ. ಮೃತರು ಬರ್ಗಿ ಗ್ರಾಮ ಪಂಚಾಯತ ಹಿರಿಯ ಸದಸ್ಯರಾಗಿದ್ದರು, ಮೀನು ಹಿಡಿಯಲು ಹೋದಾಗ ನದಿಗೆ ಕಾಲು ಜಾರಿಬಿದ್ದು ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದಾವುದ್ ಘಾರಿಯಾ ಅವರು ಸತತ ಮೂರನೇ ಬಾರಿಗೆ ಗ್ರಾಮ ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿದ್ದರು ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ