ಜೂನ್‌ ಒಳಗೆ ಜಿಪಂ, ತಾಪಂ, ಗ್ರಾಪಂ ಚುನಾವಣೆ ; ಸಿಎಂ ಸಿದ್ದರಾಮಯ್ಯ

ಅಂಕೋಲಾ : ಜೂನ್‌ ಒಳಗೆ ರಾಜ್ಯದಲ್ಲಿ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜಗುಣಿಯಲ್ಲಿ ಗಂಗಾವಳಿ ನದಿಗೆ ಕಟ್ಟಲಾದ ಗಂಗಾವಳಿ-ಮಂಜುಗುಣಿ ಸೇತುವೆ ಉದ್ಘಾಟಿಸಿ ಮಾತನಾಡಿದ ಅವರು, ಗೋಕರ್ಣವನ್ನು ಮೇಲ್ದರ್ಜಗೇರಿಸಿ ಪಟ್ಟಣ ಪಂಚಾಯತ ಒತ್ತಾಯ ಇದ್ದಾಗ್ಯೂ ಜೂನ್‌ ಒಳಗೆ … Continued

ಕುಮಟಾ : ಮೀನು ಹಿಡಿಯಲು ಹೋದ ಗ್ರಾಪಂ ಸದಸ್ಯ ನದಿಯಲ್ಲಿ ಮುಳುಗಿ ಸಾವು

ಕಾರವಾರ: ನದಿಯಲ್ಲಿ ಮುಳುಗಿ ಗ್ರಾಮ ಪಂಚಾಯತ ಸದಸ್ಯರೊಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಕುಳಿ ಸಮೀಪ ಅಘನಾಶಿನಿ ನದಿ ಹಿನ್ನೀರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೀನು ಹಿಡಿಯಲು ಹೋಗಿದ್ದಾಗ ಈ ಅವಘಡ ಸಂಭವಿಸಿದ್ದು, ಮೃತರನ್ನು ದಾವುದ್ ಘಾರಿಯಾ (67) ಎಂದು ಗುರುತಿಸಲಾಗಿದೆ. ಮೃತರು ಬರ್ಗಿ ಗ್ರಾಮ ಪಂಚಾಯತ ಹಿರಿಯ ಸದಸ್ಯರಾಗಿದ್ದರು, ಮೀನು … Continued

ಗ್ರಾಪಂ, ತಾಪಂ, ಜಿಪಂ ಜನಪ್ರತಿನಿಧಿಗಳ ವೇತನ ಹೆಚ್ಚಳಕ್ಕೆ ಚಿಂತನೆ: ಸಚಿವ ಈಶ್ವರಪ್ಪ

ಬೆಂಗಳೂರು: ಸರ್ಕಾರ ಈಗ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳ ವೇತನ ಹೆಚ್ಚಳಕ್ಕೂ ಚಿಂತನೆ ನಡೆಸಿದೆ. ಈ ಕುರಿತು ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ, ತಾಲೂಕು ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಪ್ರತಿನಿಧಿಗಳ ವೇತನ ಹೆಚ್ಚಳ ಸಂಬಂಧ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು. ಸ್ಥಳೀಯ … Continued

ಗ್ರಾಪಂಗೆ ಸತಿ ಅಧ್ಯಕ್ಷೆ ಪತಿ ಉಪಾಧ್ಯಕ್ಷ

ಹುಬ್ಬಳ್ಳಿ: ಗ್ರಾಮ ಪಂಚಾಯತ ಚುನಾವಣೆಯಲ್ಲಿ ಜಯ ಸಾಧಿಸಿದ್ದ ದಂಪತಿಗಳಿಬ್ಬರು ಒಂದೇ ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಗಮನ ಸೆಳೆದಿದ್ದಾರೆ. ತಾಲೂಕಿನ ವರೂರು ಗ್ರಾಮ ಪಂಚಾಯತಿಯ ಅಧ್ಯಕ್ಷೆಯಾಗಿ ವಿಶಾಲಾಕ್ಷಿ ಚನ್ನಬಸನಗೌಡ ಚನ್ನಬಸನಗೌಡರ ಅವಿರೋಧವಾಗಿ ಆಯ್ಕೆಯಾದರೆ, ಚನ್ನಬಸನಗೌಡ ಚನ್ನಬಸನಗೌಡರ ಕೂಡ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ವಿಶೇಷ. ವಿಶಾಲಾಕ್ಷಿ ೧ನೇ ವಾರ್ಡ್‌ ನಿಂದ ಆಯ್ಕೆಯಾದರೆ, ಚನ್ನಬಸನಗೌಡ ೨ನೇ ವಾರ್ಡ್‌ನಿಂದ … Continued