ಸುಮಾರು 10 ದಿನಗಳ ಹಿಂದೆ ಗೋರಕ್ಷಕರು ಗುಂಡು ಹಾರಿಸಿದ ನಂತರ 19 ವರ್ಷದ ಘಟನೆಗೆ ಸಂಬಂದವೇ ಇರದ ಯುವಕ ಸಾವಿಗೀಡಾಗಿದ್ದು, ಇದು ಆತ ಗೋ ಕಳ್ಳ ಎಂಬ ತಪ್ಪಾಗಿ ಭಾವಿಸಿದ್ದರಿಂದ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಅವರಲ್ಲಿ ಒಬ್ಬ ಗೋರಕ್ಷಕರ ಗುಂಪಿನ ಸದಸ್ಯ ಎಂದು ಹೇಳಲಾಗಿದೆ. ನಾಲ್ವರು ಆರೋಪಿಗಳು ಗೊಂದಲದ ಹಿನ್ನೆಲೆಯಲ್ಲಿ ತಪ್ಪಾದ ವ್ಯಕ್ತಿಯನ್ನು ಕೊಂದಿದ್ದೇವೆ ಮತ್ತು ಕಾರಿನಲ್ಲಿದ್ದವರು ನಾವು ಕೂಗಿದಾಗ ನಿಲ್ಲಿಸುವ ಬದಲು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಹೀಗಾಗಿ ಅನುಮಾನ ಹೆಚ್ಚಾಯಿತು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಆಗಸ್ಟ್ 23 ರ ರಾತ್ರಿ ಎನ್‌ಐಟಿ ಪ್ರದೇಶದಿಂದ ಕೆಲವು ಹಸು ಕಳ್ಳಸಾಗಣೆದಾರರು ಹಸುಗಳನ್ನು ಒಯ್ಯಲು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಗೋ ರಕ್ಷಕರು ಪರಿಶೀಲನೆಗೆ ಮುಂದಾದರು.
ಸಂಶಯದ ಮೇಲೆ ಇಲ್ಲಿನ ಎನ್‌ಐಟಿ ನಿವಾಸಿ ಆರ್ಯನ್ ಮಿಶ್ರಾ ಎಂಬಾತ ಕಾರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂಬಾಲಿಸಿದ ಕೆಲ ಯುವಕರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಆರ್ಯನ್, ಇಬ್ಬರು ಸ್ನೇಹಿತರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಕೆಲವು ಸ್ನೇಹಿತರು ರಾತ್ರಿ 11:30 ರ ಸುಮಾರಿಗೆ ಮಾಲ್‌ನಲ್ಲಿ ಪಾರ್ಟಿ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಇಲ್ಲಿನ ಪಟೇಲ್ ಚೌಕ್ ಬಳಿ ಗೋರಕ್ಷಕರು ಅವರನ್ನು ಅಡ್ಡಗಟ್ಟಿದ್ದಾರೆ. ನೆರೆಹೊರೆಯವರಾದ ಯುವಕ ಮತ್ತು ಸಂತ್ರಸ್ತ ಹಿಂಬಾಲಿಸಿದವರು ತಮ್ಮೊಂದಿಗೆ ಜಗಳವಾಡುತ್ತಾರೆ ಎಂದು ಭಾವಿಸಿ ಕಾರನ್ನು ನಿಲ್ಲಿಸದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ, ಗೋರಕ್ಷಕರು ಮೃತ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರನ್ನು ಹಸು ಕಳ್ಳಸಾಗಣೆದಾರರು ಎಂದು ಭಾವಿಸಿ ಅವರಿಗೆ ಕಾರನ್ನು ನಿಲ್ಲಿಸುವಂತೆ ಸೂಚಿಸಿದರು. ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪಿಗಳು, ಗುಂಡು ಹಾರಿಸುವ ಮೊದಲು ಸುಮಾರು 15 ನಿಮಿಷಗಳ ಕಾಲ ಅವರನ್ನು ಬೆನ್ನಟ್ಟಿದ್ದರು. ನಂತರ ಆರ್ಯನ್ ಮೇಲೆ ಗುಂಡು ಹಾರಿಸಿದರು. ಇದು ಆರ್ಯನ್‌ನ ಸಾವಿಗೆ ಕಾರಣವಾಯಿತು.
ಕಾರಿನಲ್ಲಿದ್ದ ಇಬ್ಬರು ಮಹಿಳೆಯರನ್ನು ಗಮನಿಸಿದ ಆರೋಪಿಗಳಿಗೆ ತಾವು ತಪ್ಪು ವ್ಯಕ್ತಿಯನ್ನು ಕೊಂದಿದ್ದೇವೆ ಎಂಬುದರ ಅರಿವಾಗಿದೆ. ಮತ್ತು ಕಾರಿನೊಳಗೆ ಗೋ ಕಳ್ಳ ಸಾಗಣೆ ಮಾಡುವ ಯಾವ ಅಂಶವೂ ಕಂಡುಬರಲಿಲ್ಲ. ಆರೋಪಿಗಳ ಬಂಧನದ ನಂತರ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರ್ಯನ್ ಮತ್ತು ಆತನ ಸ್ನೇಹಿತರು ಕಾರನ್ನು ನಿಲ್ಲಿಸದ ಕಾರಣ ಆರೋಪಿಗಳು ಕಾರನ್ನು ಹಿಂಬಾಲಿಸಿದ್ದಾರೆ. ನಂತರ ಕಾರನ್ನು ಚೇಸ್ ಮಾಡಿ ಅವರು ಕಾರಿಗೆ ಗುಂಡು ಹಾರಿಸಿದರು ಮತ್ತು ಗುಂಡು ಪ್ರಯಾಣಿಕರ ಸೀಟಿನಲ್ಲಿದ್ದ ಆರ್ಯನ್ ಕುತ್ತಿಗೆಗೆ ತಗುಲಿತು. ಆತನ ಸ್ನೇಹಿತ ಅಂತಿಮವಾಗಿ ಕಾರನ್ನು ನಿಲ್ಲಿಸಿದಾಗ ಅವನಿಗೆ ಮತ್ತೆ ಗುಂಡು ಹಾರಿಸಲಾಯಿತು.
ಎರಡನೇ ಗುಂಡು ಆರ್ಯನ್ ಎದೆಗೆ ತಗುಲಿತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಒಂದು ದಿನದ ನಂತರ ಆರ್ಯನ್ ನಿಧನರಾದರು.
ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ