ಚನ್ನಮ್ಮನ ಕಿತ್ತೂರು : ಅಪಹರಣವಾಗಿದ್ದ ಪ.ಪಂ ಸದಸ್ಯ ನಾಗರಾಜ ಪತ್ತೆ

ಚನ್ನಮ್ಮನ ಕಿತ್ತೂರು: ಆರು ದಿನಗಳ ಹಿಂದೆ ಅಪಹರಣಕ್ಕೆ ಒಳಗಾಗಿದ್ದ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರು ಕೊನೆಗೂ ಪತ್ತೆಯಾಗಿದ್ದಾರೆ.
ನಾಗರಾಜ ಅಸುಂಡಿ ಅವರನ್ನು ಬೈಲಹೊಂಗಲ ಕೋರ್ಟ್ ಗೆ ಹಾಜರುಪಡಿಸಲು ಪೊಲೀಸರು ಕರೆತಂದಿದ್ದಾರೆ.
ಸೆಪ್ಟೆಂಬರ್ 3 ರಂದು ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು. ಸಂಖ್ಯಾಬಲ ಹೆಚ್ಚಿಸಿಕೊಂಡು ಅಧಿಕಾರ ಹಿಡಿಯಬೇಕು ಎಂದು ಕಾಂಗ್ರೆಸ್ ಮುಖಂಡರು ಅಪಹರಿಸಿದ್ದಾರೆ ಎಂದು ಚನ್ನಮ್ಮನ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಿಜೆಪಿ ತಮ್ಮ ಪಕ್ಷದ ಸದಸ್ಯನನ್ನು ಅಪಹರಿಸಿದ ಬಗ್ಗೆ ತೀವ್ರ ಪ್ರತಿಭಟನೆ ನಡೆಸಿತ್ತು.

ನಂತರ ಪೊಲೀಸರು ಪತ್ತೆಗಾಗಿ ಕಾರ್ಯಾಚರಣೆಗೆ ಇಳಿದಿದ್ದರು. ನಂತರ ನಾಗರಾಜ ಅಸುಂಡಿ ಅವರನ್ನು ಅಪಹರಣ ಮಾಡಿದ್ದ ವಾಹನ ಬೆಂಗಳೂರು ರೆಸಾರ್ಟ್ ಬಳಿ ಪತ್ತೆಯಾಗಿತ್ತು.
ನಾಗರಾಜ ಅಸುಂಡಿ ಅವರ ತಾಯಿ ಸಹ ಮಗನ ಅಪಹರಣದಿಂದ ಬೇಸರಗೊಂಡು ಧಾರವಾಡ ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಗೂ ನಾಗರಾಜ ಅಸುಂಡಿ ಪತ್ತೆಯಾಗುವ ಮೂಲಕ ಅಪಹರಣ ಪ್ರಕರಣಕ್ಕೆ ತೆರೆ ಬಿದ್ದಿದೆ. ನಾಗರಾಜ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಸ್ವಪಕ್ಷದ ಪಟ್ಟಣ ಪಂಚಾಯತ ಸದಸ್ಯನ ಪರ ವಕಾಲತು ವಹಿಸಿದ ಕಿತ್ತೂರು ಮಾಜಿ ಶಾಸಕ ಮಹಾಂತೇಶ ದೊಡಗೌಡರ ಅವರು ಕೋಟ್ ಧರಿಸಿ ಕೋರ್ಟ್ ಗೆ ಆಗಮಿಸಿದ್ದು ಗಮನ ಸೆಳೆದಿದೆ.
ಸೆ.3ರಂದು ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿತ್ತು. ಕಾಂಗ್ರೆಸ್‌- ಬಿಜೆಪಿ ಕಡೆಗೆ ತಲಾ 10 ಮತಗಳು ಇದ್ದವು. ಚುನಾವಣೆಯಲ್ಲಿ ಬಿಜೆಪಿಯ ಒಂದು ಮತ ಕಡಿಮೆ ಮಾಡಲು ನಾಗರಾಜ ಅವರನ್ನು ಕಾಂಗ್ರೆಸ್ಸಿಗರೇ ಅಪಹರಣ ಮಾಡಿದ್ದರು ಎಂದು ಬಿಜೆಪಿ ಆರೋಪಿಸಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಮುಜರಾಯಿ ದೇಗುಲಗಳಲ್ಲಿ ಪೂಜೆ, ಪ್ರಸಾದಕ್ಕೆ ʼನಂದಿನಿ ತುಪ್ಪʼದ ಬಳಕೆ ಕಡ್ಡಾಯ: ಸರ್ಕಾರ ಆದೇಶ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement