ಹೃದಯ ಸ್ತಂಭನ : 48ನೇ ವಯಸ್ಸಿನಲ್ಲಿ ಜನಪ್ರಿಯ ಹಿಂದಿ ಕಿರುತೆರೆ ನಟ ವಿಕಾಸ್ ಸೇಥಿ ನಿಧನ

ಮುಂಬೈ: 48ರ ವಯಸ್ಸಿನಲ್ಲೇ ಖ್ಯಾತ ಕಿರುತೆರೆ ನಟ ನಟ ವಿಕಾಸ್ ಸೇಥಿ (Vikas Sethi) ನಿಧನರಾಗಿದ್ದಾರೆ. ಅವರು ಹೃದಯ ಸ್ತಂಭನದಿಂದ ಭಾನುವಾರ(ಸೆ.8ರಂದು) ಮಲಗಿದ್ದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತ ದೇಹವನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತರು ಪತ್ನಿ ಜಾನ್ವಿ ಸೇಥಿ ಮತ್ತು ಅವರ ಅವಳಿ ಮಕ್ಕಳನ್ನು ಅಗಲಿದ್ದಾರೆ.
2000 ಇಸವಿಯ ಆರಂಭದಲ್ಲಿ ಹಿಂದಿ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಗಳಿಸಿದ ನಟ ವಿಕಾಸ್ ಸೇಥಿ. ʼಕ್ಯುಂಕಿ ಸಾಸ್ ಭೀ ಕಭಿ ಬಹು ಥಿʼ , ʼಕಹಿಂ ತೊ ಹೋಗಾʼ ಮೊದಲಾದ ಧಾರಾವಾಹಿಗಳಲ್ಲಿನ ಅವರ ಅಭಿನಯ ಪ್ರೇಕ್ಷಕರನ್ನು ರಂಜಿಸಿತ್ತು. ಸಿನಿಮಾದಲ್ಲೂ ಕಾಣಿಸಿಕೊಂಡಿದ್ದ ಅವರು, ʼದೀವಾನಾ ಪನ್ʼ ಮತ್ತು ʼಕಭಿ ಖುಷಿ ಕಭಿ ಘಮ್ʼ, ‘ಇಸ್ಮಾರ್ಟ್ ಶಂಕರ್’, ‘ಓಪ್ಸ್’, ‘ಮೋದ್’ ಮೊದಲಾದ ಚಿತ್ರದಲ್ಲಿ ನಟಿಸಿದ್ದರು. ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಮನೆ ಮಾತಾಗಿದ್ದರು.
ಅವರು ‘ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ’, ‘ಕಹೀಂ ತೋ ಹೋಗಾ’, ‘ಕಸೌಟಿ ಜಿಂದಗಿ’, ‘ಕೆ ಸ್ಟ್ರೀಟ್ ಪಾಲಿ ಹಿಲ್’, ‘ಗುಸ್ತಖ್ ದಿಲ್’, ‘ಉತ್ತರಣ್’, ‘ಸಸುರಾಲ್ ಸಿಮರ್ ಕಾ’ ಮತ್ತು ‘ಯೇ ವಾದಾ ರಹಾ’ ಮತ್ತು ‘ಡರ್ ಸಬ್ಕೋ ಲಗ್ತಾ ಹೈ’ ಮುಂತಾದ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಸಚಿವ ಬಾಬಾ ಸಿದ್ದಿಕ್‌ ಹತ್ಯೆ ನಂತರ ನಟ ಸಲ್ಮಾನ್ ಖಾನ್‌ ಭದ್ರತೆ ಹೆಚ್ಚಳ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement