ಭೋಪಾಲ್ : ಭಾರತದ ನಾವಿಕರೊಬ್ಬರು ಅಮೆರಿಕವನ್ನು ಕಂಡುಹಿಡಿದರು, ಬೀಜಿಂಗ್ ನಗರವನ್ನು ಭಾರತೀಯ ವಾಸ್ತುಶಿಲ್ಪಿ ಸಹಾಯದಿಂದ ವಿನ್ಯಾಸಗೊಳಿಸಲಾಗಿದೆ ಮತ್ತು ಋಗ್ವೇದವನ್ನು ಬರೆದವರು ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಎಂದು ಮೊದಲು ಊಹಿಸಿದ್ದರು ಎಂದು ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಹೇಳಿದ್ದಾರೆ.
ಬರ್ಕತುಲ್ಲಾ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಮಂಗುಭಾಯ್ ಸಿ. ಪಟೇಲ್ ಮತ್ತು ಮುಖ್ಯಮಂತ್ರಿ ಮೋಹನ್ ಯಾದವ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪರ್ಮಾರ್ ಹೇಳಿದ್ದಾರೆ.
“ಇತಿಹಾಸಕಾರರು ವ್ಯವಸ್ಥಿತವಾಗಿ ಭಾರತದ ಶಕ್ತಿಯನ್ನು ದುರ್ಬಲಗೊಳಿಸಿದ್ದಾರೆ” ಮತ್ತು “ಸುಳ್ಳು ಸಂಗತಿಗಳ ಮೂಲಕ, ಭಾರತದ ನಕಾರಾತ್ಮಕ ಚಿತ್ರಣವನ್ನು ಜಗತ್ತಿಗೆ ಪ್ರಸ್ತುತಪಡಿಸಲಾಗಿದೆ” ಎಂದು ಪರ್ಮಾರ್ ಹೇಳಿದರು.
“ನಮ್ಮ ಪೂರ್ವಜರು ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯದ ಪ್ರತಿಯೊಂದು ಅಂಶದಲ್ಲೂ ಮುಂದುವರಿದಿದ್ದರು” ಮತ್ತು “ನಾವು ಕೀಳರಿಮೆ ಸಂಕೀರ್ಣತೆಗಳಿಂದ ಹೊರಬರಬೇಕು ಮತ್ತು ಉನ್ನತ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮುನ್ನಡೆಯಲು ಪ್ರಯತ್ನಿಸಬೇಕು” ಎಂದು ಅವರು ಹೇಳಿದರು.
ಅವರ ಪ್ರಕಾರ, “ಕೊಲಂಬಸ್ ಅಮೆರಿಕವನ್ನು ಕಂಡುಹಿಡಿದನು ಎಂಬುದು ಭಾರತದಲ್ಲಿ ಅನಗತ್ಯವಾಗಿ ಕಲಿಸಲ್ಪಟ್ಟ ಸುಳ್ಳು”. “ಇದು ಭಾರತೀಯ ವಿದ್ಯಾರ್ಥಿಗಳಿಗೆ ಅಪ್ರಸ್ತುತವಾಗಿತ್ತು. ಅವರು ಇದನ್ನು ಕಲಿಸಲು ಹೋದರೆ, ಕೊಲಂಬಸ್ ನಂತರ ಬಂದವರು ಮಾಡಿದ ದೌರ್ಜನ್ಯ, ಪ್ರಕೃತಿ ಆರಾಧಕರು ಮತ್ತು ಸೂರ್ಯ ಆರಾಧಕರಾದ ಸ್ಥಳೀಯ ಸಮಾಜಗಳನ್ನು ಹೇಗೆ ನಾಶಪಡಿಸಿದರು ಮತ್ತು ಅವರನ್ನು ಹೇಗೆ ಕಗ್ಗೊಲೆ ಮಾಡಿದರು, ಮತಾಂತರಗೊಳಿಸಿದರು ಎಂಬುದರ ಬಗ್ಗೆಯೂ ಅವರು ಕಲಿಸಬೇಕಾಗಿತ್ತು ಎಂದು ಪರ್ಮಾರ್ ಪ್ರತಿಪಾದಿಸಿದರು.
ಭಾರತೀಯ ನಾವಿಕನೊಬ್ಬ “8ನೇ ಶತಮಾನದಲ್ಲಿ ಅಮೆರಿಕಕ್ಕೆ ಹೋಗಿ ಸ್ಯಾನ್ ಡಿಯಾಗೋದಲ್ಲಿ ಹಲವಾರು ದೇವಾಲಯಗಳನ್ನು ನಿರ್ಮಿಸಿದ್ದ. ಅವುಗಳ ಬಗ್ಗೆ ಇನ್ನೂ ಅಲ್ಲಿನ ವಸ್ತುಸಂಗ್ರಹಾಲಯದಲ್ಲಿ ದಾಖಲೆಗಳಿವೆ ಮತ್ತು ಗ್ರಂಥಾಲಯಗಳಲ್ಲಿ ಅವುಗಳನ್ನು ಸಂರಕ್ಷಿಸಿ ಇಡಲಾಗಿದೆ” ಎಂದು ಪರ್ಮಾರ್ ಹೇಳಿದರು.
“ನಾವು ಅಲ್ಲಿಗೆ ಹೋದಾಗ, ನಾವು ಅವರ ಮಾಯಾ ನಾಗರಿಕತೆಯೊಂದಿಗೆ ಸಂಯೋಜಿಸುವ ಮೂಲಕ ಅವರ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದೆವು, ಇದು ವಿದ್ಯಾರ್ಥಿಗಳಿಗೆ ಕಲಿಸಬೇಕಾದ ಭಾರತದ ಆಲೋಚನಾ ವಿಧಾನ ಮತ್ತು ತತ್ವಶಾಸ್ತ್ರವಾಗಿದೆ … ಏನನ್ನಾದರೂ ಕಲಿಸಬೇಕಾದರೆ, ಅದನ್ನು ಸರಿಯಾಗಿ ಕಲಿಸಬೇಕಾಗಿತ್ತು. – ನಮ್ಮ ಪೂರ್ವಜರು ಅಮೆರಿಕವನ್ನು ಕಂಡುಹಿಡಿದರು, ಕೊಲಂಬಸ್ ಅಲ್ಲ ಎಂದು ಪರ್ಮಾರ್ ಹೇಳಿದರು.
ವಾಸ್ಕೋ ಡ ಗಾಮಾ ಭಾರತದ ವ್ಯಾಪಾರಿ ಚಂದನ್ ಅವರ ಹಡಗು ತನ್ನ ಹಡಗಿಗಿಂತ ದೊಡ್ಡದಾಗಿತ್ತು ಎಂದು ಬರೆದಿದ್ದಾನೆ, ಆತ ಅದು ತನ್ನ ಹಡಗಿನ ಎರಡರಿಂದ ನಾಲ್ಕು ಪಟ್ಟು ದೊಡ್ಡದಾಗಿತ್ತು ಎಂದು ಹೇಳಿದ್ದಾನೆ. ವಾಸ್ಕೋ ಡ ಗಾಮಾ ಭಾರತಕ್ಕೆ ಭಾರತೀಯ ವ್ಯಾಪಾರಿ ಚಂದನ್ ಅವರನ್ನು ಅನುಸರಿಸಿ ಬಂದವ. ಆದಾಗ್ಯೂ, ಭಾರತಕ್ಕೆ ಸಮುದ್ರ ಮಾರ್ಗವನ್ನು ವಾಸ್ಕೋ ಡ ಗಾಮಾ ಕಂಡುಹಿಡಿದಿದ್ದಾನೆ ಎಂದು ಇತಿಹಾಸಕಾರರು ಭಾರತೀಯ ವಿದ್ಯಾರ್ಥಿಗಳಿಗೆ ತಪ್ಪಾಗಿ ಕಲಿಸುತ್ತಾರೆ ”ಎಂದು ಪರ್ಮಾರ್ ಹೇಳಿದರು.
ಸುಮಾರು 1,200-1,300 ವರ್ಷಗಳ ಕಾಲ, ಭೌಗೋಳಿಕ ತಪ್ಪುಗ್ರಹಿಕೆಗಳನ್ನು ಆಧರಿಸಿದ ಸುಳ್ಳು ಪ್ರಪಂಚದಾದ್ಯಂತ ಶಾಶ್ವತವಾಗಿದೆ ಎಂದು ಪರ್ಮಾರ್ ಹೇಳಿದರು.
ಪೋಲಿಷ್ ಖಗೋಳಶಾಸ್ತ್ರಜ್ಞ ಕೋಪರ್ನಿಕಸ್ ಅವರ ಸಿದ್ಧಾಂತವು “ಸೂರ್ಯ ನಿಶ್ಚಲವಾಗಿದೆ ಮತ್ತು ಗೆಲಿಲಿಯೋ ಹೇಳಿದ್ದು – ಸೂರ್ಯನು ನಿಶ್ಚಲ ಮತ್ತು ಭೂಮಿ ಸೇರಿದಂತೆ ಎಲ್ಲಾ ಗ್ರಹಗಳು ಅದರ ಸುತ್ತ ಸುತ್ತುತ್ತವೆ ಎಂದು. ನಮ್ಮ ಪ್ರಾಚೀನ ಪಠ್ಯಗಳಲ್ಲಿ ಮೊದಲೇ ಅದನ್ನು ಹೇಳಲಾಗಿತ್ತು” ಎಂದು ಸಚಿವರು ಹೇಳಿದರು.
ಸಾವಿರಾರು ವರ್ಷಗಳ ಹಿಂದೆ, ಋಗ್ವೇದವನ್ನು ಬರೆದವರು ಚಂದ್ರನು ತನ್ನ ಮೂಲ ಗ್ರಹ, ಭೂಮಿಯ ಸುತ್ತ ಸುತ್ತುತ್ತದೆ ಮತ್ತು ಭೂಮಿಯು ತನ್ನ ಸೂರ್ಯನ ಸುತ್ತ ಸುತ್ತುತ್ತದೆ ಎಂದು ಉಲ್ಲೇಖಿಸಿದ್ದಾರೆ. ಇದರರ್ಥ ನಮ್ಮ ಪೂರ್ವಜರು ಈಗಾಗಲೇ ಸೂರ್ಯನನ್ನು ಸ್ಥಿರವೆಂದು ಪರಿಗಣಿಸಿದ್ದರು. ಹಾಗೂ ಭೂಮಿ, ಚಂದ್ರ ಮತ್ತು ಇತರ ಎಲ್ಲಾ ಗ್ರಹಗಳು ಅದರ ಸುತ್ತ ಸುತ್ತುತ್ತವೆ ಎಂದು ಅರಿತುಕೊಂಡಿದ್ದರು ಎಂದು ಪರ್ಮಾರ್ ಹೇಳಿದರು.
“12 ನೇ ಶತಮಾನದಲ್ಲಿ ಬೀಜಿಂಗ್ ನಗರವನ್ನು ಸ್ಥಾಪಿಸಿದಾಗ, ಅದರ ವಿನ್ಯಾಸಗಳು ಮತ್ತು ವಾಸ್ತುಶಿಲ್ಪವನ್ನು ಇಂದಿನ ನೇಪಾಳದಿಂದ ಹೋದ ವಾಸ್ತುಶಿಲ್ಪಿ ರಚಿಸಿದ್ದಾನೆ. ಅದು ಆಗ ಭಾರತದ ಭಾಗವಾಗಿತ್ತು” ಎಂಬ “ಆಸಕ್ತಿದಾಯಕ ಐತಿಹಾಸಿಕ ಸತ್ಯ” ವನ್ನು ತಾನು ಓದಿದ್ದಾಗಿ ಅವರು ಹೇಳಿದರು.
“ಬಾಲ ಬಾಹು ಎಂಬ ಹೆಸರಿನ ಈ ವಾಸ್ತುಶಿಲ್ಪಿ ಬುದ್ಧ ಮತ್ತು ರಾಮನ ಪ್ರತಿಮೆಗಳನ್ನು ಮಾಡಲು ಮತ್ತು ಭವ್ಯವಾದ ರಚನೆಗಳನ್ನು ವಿನ್ಯಾಸಗೊಳಿಸಲು ಹೆಸರುವಾಸಿಯಾಗಿದ್ದ. ಬೀಜಿಂಗ್ ಅನ್ನು ವಿನ್ಯಾಸಗೊಳಿಸಲು ಆತನನ್ನು ಆಹ್ವಾನಿಸಲಾಯಿತು. ಇಂದಿಗೂ, ಬಾಲ ಬಾಹು ಅವರ ಕೊಡುಗೆಗಳನ್ನು ಗುರುತಿಸಿ ಸರ್ಕಾರವು ಬೀಜಿಂಗ್‌ನಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಿ ಎಂದು ಪರ್ಮಾರ್ ಹೇಳಿದರು.
ಸಚಿವರು ಒಲಿಂಪಿಕ್ಸ್ ಮತ್ತು ಕ್ರೀಡಾಂಗಣಗಳು ಹಾಗೂ ಭಾರತದ ಪ್ರಾಚೀನ ಇತಿಹಾಸದ ಬಗ್ಗೆ ಮಾತನಾಡಿದರು. “ಒಲಿಂಪಿಕ್ಸ್ ಸುಮಾರು 2,800 ವರ್ಷಗಳಿಂದ ಕ್ರೀಡಾಂಗಣಗಳು ಮತ್ತು ಸಾಮೂಹಿಕ ಆಟಗಳ ಪರಿಕಲ್ಪನೆಯನ್ನು ಅಭಿವೃದ್ಧಿಪಡಿದೆ, ನಮ್ಮ ದೇಶವು ಇನ್ನೂ ಹಳೆಯದಾದ ಕ್ರೀಡಾಂಗಣಗಳಿರುವ ಪುರಾವೆಗಳನ್ನು ಹೊಂದಿದೆ. ಗುಜರಾತಿನ ರಾನ್ ಆಫ್ ಕಚ್‌ನಲ್ಲಿನ ಉತ್ಖನನದಲ್ಲಿ, 2,800 ಅಥವಾ 3,000 ವರ್ಷಗಳ ಹಿಂದಿನ ಕ್ರೀಡಾಂಗಣಗಳು ಕಂಡುಬಂದಿವೆ. ನಮ್ಮ ಪೂರ್ವಜರು ಆಗಲೇ ಕ್ರೀಡೆ ಬಗ್ಗೆ ಚಿರಪರಿಚಿತರಾಗಿದ್ದರು ಎಂಬುದನ್ನು ಇದು ತೋರಿಸುತ್ತದೆ ಎಂದು ಪರ್ಮಾರ್ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ