ಕುಮಟಾ : ಲಾರಿಯೊಂದರಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 27 ಕೋಣಗಳನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಎಪಿಎಂಸಿ ಬಳಿ ರಕ್ಷಣೆ ಮಾಡಿರುವ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳದ ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ವಾಹವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ 27 ಕೋಣಗಳನ್ನು ಅತಿ ಸಣ್ಣ ಜಾಗದಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದು ಕಂಡುಬಂದಿದೆ. ತಕ್ಷಣವೇ ವಿಚಾರಣೆ ಮಾಡಿದಾಗ ಇವುಗಳನ್ನು ಕೇರಳಕ್ಕೆ ಒಯ್ಯಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಈ ಸಂಬಂಧ ಕೇರಳದ ಕಾಸರಗೋಡಿನ ಅಬೂಬಕ್ಕರ್ ಮಹಮ್ಮದ್, ಅಬ್ದುಲ್ ರಹಮಾನ್ ಪಲ್ಲಿಯನ್, ಮೈಸೂರು ಮೂಲದ ಅಯೂಬ್ ಅಹ್ಮದ್ ರಶೀದ್ ಹಾಗೂ ಹಾಸನ ಜಿಲ್ಲೆಯ ಅಜ್ಗರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ