ವೀಡಿಯೊ | ‘ಅವರು ನನ್ನ ಮಾತು ಕೇಳಲೇ ಇಲ್ಲ..’: ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಕೇಜ್ರಿವಾಲ್ ನಿರ್ಧಾರಕ್ಕೆ ಅಣ್ಣಾ ಹಜಾರೆ ಪ್ರತಿಕ್ರಿಯೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಎರಡು ದಿನಗಳಲ್ಲಿ ರಾಜೀನಾಮೆ ನೀಡುವ ನಿರ್ಧಾರವನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ಅರವಿಂದ ಕೇಜ್ರಿವಾಲ್‌ ಅವರಿಂದ ಈ ರಾಜೀನಾಮೆ ನೀಡುವ ಘೋಷಣೆ ಹೊರಬಿದ್ದಿದೆ.
ತಮ್ಮ ಊರಾದ ರಾಲೇಗಾಂ-ಸಿದ್ಧಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾ ಹಜಾರೆ, ಕೇಜ್ರಿವಾಲ್ ಅವರಿಗೆ ರಾಜಕೀಯಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದೆ ಹೇಳಿದ್ದಾರೆ. ‘ರಾಜಕೀಯಕ್ಕೆ ಹೋಗಬೇಡಿ, ಸಮಾಜ ಸೇವೆ ಮಾಡಿ, ಮಹಾನ್ ವ್ಯಕ್ತಿಯಾಗುತ್ತೀರಿ’ ಎಂದು ಕೇಜ್ರಿವಾಲ್‌ಗೆ ಪದೇ ಪದೇ ಹೇಳುತ್ತಿದ್ದೆವು, ನಾವು ಹಲವು ವರ್ಷಗಳಿಂದ ಒಟ್ಟಿಗೆ ಇದ್ದೆವು, ಆ ಸಮಯದಲ್ಲಿ ಸಮಾಜ ಸೇವೆ ಸಂತೋಷ ನೀಡುತ್ತದೆ ಎಂದು ನಾನು ಅವರಿಗೆ ಹೇಳಿದ್ದೆ ಎಂದು ಅವರು ಹೇಳಿದ್ದಾರೆ. ಆದರೆ ದುರದೃಷ್ಟವಶಾತ್, ನನ್ನ ಮಾತುಗಳು ಅವರಿಗೆ ಅನುರಣಿಸಲಿಲ್ಲ, ಇಂದು, ಏನಾಗಬೇಕೋ ಅದು ಸಂಭವಿಸಿದೆ. ಅವರ ಹೃದಯದಲ್ಲಿ ನಿಜವಾಗಿ ಏನಿದೆ ಎಂದು ನನಗೆ ಹೇಗೆ ತಿಳಿಯುತ್ತದೆ? ಎಂದು ಅಣ್ಣಾ ಹಜಾರೆ ಹೇಳಿದರು.

ಪ್ರಮುಖ ಸುದ್ದಿ :-   ಕೆನಡಾದಿಂದ ದೊಡ್ಡ ರಾಜತಾಂತ್ರಿಕ ವಿವಾದ ; ಕೆನಡಾದ ಭಾರತೀಯ ಹೈಕಮಿಷನರ್ ನನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದ ಸರ್ಕಾರ

ಅಣ್ಣಾ ಹಜಾರೆ ಅವರು ಕೇಜ್ರಿವಾಲ್‌ಗೆ ಸಂಬಂಧಿಸಿದ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದು ಇದೇ ಮೊದಲಲ್ಲ. ಇದಕ್ಕೂ ಮುನ್ನ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪ್ರತಿಕ್ರಿಯಿಸಿದ್ದರು ಅವರು ಆಗ ನಿರಾಶೆ ವ್ಯಕ್ತಪಡಿಸಿದ್ದಾರೆ. ಆ ವೇಳೆ ಹಜಾರೆ, ನನ್ನ ಜೊತೆ ಕೆಲಸ ಮಾಡಿ ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ಅರವಿಂದ ಕೇಜ್ರಿವಾಲ್ ಈಗ ಮದ್ಯದ ನೀತಿಗಳನ್ನು ರೂಪಿಸುತ್ತಿರುವುದಕ್ಕೆ ನನಗೆ ತುಂಬಾ ಬೇಸರವಾಗಿದೆ, ಅವರ ಸ್ವಯಂಕೃತ್ಯಗಳಿಂದ ಅವರ ಬಂಧನವಾಗಿದೆ ಎಂದು ಹೇಳಿದ್ದರು.

ರಾಜೀನಾಮೆ ಬಗ್ಗೆ ಮಾತನಾಡಿದ ಕೇಜ್ರಿವಾಲ್‌….
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎರಡು ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮತ್ತು ದೆಹಲಿಯಲ್ಲಿ ಶೀಘ್ರ ಚುನಾವಣೆ ನಡೆಸಲು ಒತ್ತಾಯಿಸುವುದಾಗಿ ಭಾನುವಾರ ಘೋಷಿಸಿದ ನಂತರ ಸಾಮಾಜಿಕ ಕಾರ್ಯಕರ್ತರ ಹೇಳಿಕೆ ಬಂದಿದೆ. ಜನರು ಪ್ರಾಮಾಣಿಕತೆಯ ಪ್ರಮಾಣಪತ್ರ ನೀಡುವವರೆಗೆ ತಾನು ಮುಖ್ಯಮಂತ್ರಿ ಕುರ್ಚಿಯ ಮೇಲೆ ಇರುವುದಿಲ್ಲ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. “ಚುನಾವಣೆ ನಡೆಯುವವರೆಗೆ ಬೇರೆಯವರು ಮುಖ್ಯಮಂತ್ರಿ ಆಗಿರುತ್ತಾರೆ. ನಾನು ಮತ್ತು ಮನೀಶ್ ಸಿಸೋಡಿಯಾ ಇಬ್ಬರೂ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತುಕೊಳ್ಳುವುದಿಲ್ಲ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement