ವಾರಾಣಸಿ : ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿರುವುದು ಮತ್ತು ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದಕ್ಕಾಗಿ ಸ್ಥಳೀಯ ಕಾಂಗ್ರೆಸ್ ಮಹಿಳಾ ನಾಯಕಿ ರೋಶನಿ ಕುಶಾಲ ಜೈಸ್ವಾಲ್ ಹಾಗೂ ಅವರ ಬೆಂಬಲಿಗರು ಕೇಸರಿ ರಾಜೇಶ ಸಿಂಗ್ ಎಂಬ ವ್ಯಕ್ತಿಯನ್ನು ಆತನ ನಿವಾಸಕ್ಕೆ ತೆರಳಿ ಥಳಿಸಿದ್ದಾರೆ. ಮನೆಗೆ ನುಗ್ಗಿ, ಹೆಂಡತಿ ಮಕ್ಕಳ ಮುಂದೆಯೇ ಆತನಿಗೆ ಥಳಿಸಿದ್ದಾರೆ
ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ವೈರಲ್ ಆಗಿದೆ. ವಾರಾಣಸಿಯ ಲಾಲ್ಪುರ-ಪಾಂಡೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿ ಮತ್ತು ಅವರ ಬೆಂಬಲಿಗರು ಕೇಸರಿ ರಾಜೇಶ ಸಿಂಗ್ ಎಂಬಾತನ ಮನೆಗೆ ತಲುಪಿದ ನಂತರ ಮಹಿಳಾ ನಾಯಕಿಯ ಬೆಂಬಲಿಗರು ಮತ್ತು ರಾಜೇಶ ಸಿಂಗ್ ಅವರ ಕುಟುಂಬದ ನಡುವೆ ಮಾರಾಮಾರಿ ನಡೆಯಿತು. ತನ್ನ ಬೆಂಬಲಿಗರು ಆತನನ್ನು ಹಿಡಿದ ನಂತರ ಕಾಂಗ್ರೆಸ್ ಮಹಿಳಾ ನಾಯಕಿ ವ್ಯಕ್ತಿಗೆ ಕಪಾಳಮೋಕ್ಷ ಮಾಡುವುದನ್ನು ವೀಡಿಯೊ ತೋರಿಸಿದೆ.
ರೋಶನಿ ಮತ್ತು ಅವರ ಬೆಂಬಲಿಗರು ರಾಜೇಶ ಸಿಂಗ್ ಅವರನ್ನು ಥಳಿಸಿದಾಗ, ಆತನ ಪತ್ನಿ ಮತ್ತು ಮಗಳು ಅವರನ್ನು ಗುಂಪಿನಿಂದ ರಕ್ಷಿಸಲು ಪ್ರಯತ್ನಿಸಿದರು. ಅವರು ಆತನನ್ನು ಹೋಗಲು ಬಿಡುವಂತೆ ಗುಂಪಿಗೆ ಮನವಿ ಮಾಡುವುದನ್ನು ವೀಡಿಯೊ ತೋರಿಸುತ್ತದೆ.
ರಾಜೇಶ ಸಿಂಗ್ ನನ್ನು ಥಳಿಸುತ್ತಿದ್ದ ಗುಂಪಿಗೆ ಆತನ ಪತ್ನಿ ಮತ್ತು ಮಗಳು ಮನವಿ ಮಾಡುತ್ತಿದ್ದಂತೆ, ಆತ ಓಡಿಹೋಗಿ ತನ್ನ ಮನೆಯೊಳಗೆ ಸೇರಿಕೊಂಡಿದ್ದಾನೆ. ಈತ 4 ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈತ ತನಗೆ ಅತ್ಯಾಚಾರ ಬೆದರಿಕೆ ಹಾಕಿದ್ದಾನೆ ಎಂದು ಕಾಂಗ್ರೆಸ್ ನಾಯಕಿ ಹೇಳಿದ್ದಾರೆ
ಪೊಲೀಸ್ ಠಾಣೆಯಲ್ಲಿ ಮಹಿಳಾ ನಾಯಕಿ ಮಾಧ್ಯಮಗಳು ಮುಂದೆ ಮಾತನಾಡಿದ್ದು, ತನ್ನ ಬೆಂಬಲಿಗರಿಂದ ಥಳಿತಕ್ಕೊಳಗಾದ ವ್ಯಕ್ತಿ ತನಗೆ ಅತ್ಯಾಚಾರದ ಬೆದರಿಕೆ ಹಾಕುತ್ತಿದ್ದಾನೆ ಮತ್ತು ನಾಲ್ಕು ವರ್ಷಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ತನ್ನ ವಿರುದ್ಧ ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಇನ್ನು ಮುಂದೆ ಈತ ತನ್ನ ವಿರುದ್ಧ ಕಾಮೆಂಟ್ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಹಿಳೆ ಹೇಳಿದ್ದಾರೆ ಮತ್ತು ಆ ವ್ಯಕ್ತಿಯ ಹೆಂಡತಿ ಮತ್ತು ಮಗಳಿಗೆ ಅವನು ಎಂತಹ ವ್ಯಕ್ತಿ ಎಂದು ತಿಳಿಯಬೇಕು ಎಂದು ಈತನ ಮನೆಗೆ ಬಂದಿರುವುದಾಗಿ ಹೇಳಿದ್ದಾರೆ. ತಾನು ತೆಗೆದುಕೊಂಡ ಕ್ರಮಗಳು ಇತರ ಮಹಿಳೆಯರಿಗೆ “ಸಬಲೀಕರಣ” ಎಂದು ಸಾಬೀತುಪಡಿಸುತ್ತದೆ ಏಕೆಂದರೆ ಅನೇಕ ಮಹಿಳೆಯರು ಇಂತಹ ಘಟನೆಗಳ ವಿರುದ್ಧವೂ ಹೋರಾಡುತ್ತಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ನಂತರ ಮಹಿಳೆ ಲಿಖಿತ ಪೊಲೀಸ್ ದೂರನ್ನು ನೀಡಿದ್ದಾರೆ. ಜೊತೆಗೆ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯ ನಾಥ ಅವರನ್ನು ಒತ್ತಾಯಿಸಿದ್ದಾರೆ. ಇದೇವೇಳೆ ನನ್ನ ಪತಿಯ ಮೇಲೆ ಕಾರಣವಿಲ್ಲದೆ ಮಹಿಳೆ ಮತ್ತು ಆಕೆಯ ಕಡೆಯವರು ಕೈ ಮಾಡಿದ್ದಾರೆ ಎಂದು ರಾಜೇಶ ಸಿಂಗ್ ಪತ್ನಿಯೂ ಕೂಡಾ ರೋಶನಿ ವಿರುದ್ಧ ದೂರನ್ನು ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ