ಶವಪರೀಕ್ಷೆಗೆ ಒಯ್ಯುವಾಗ ಎದ್ದು ಕುಳಿತ ʼಸತ್ತʼ ವ್ಯಕ್ತಿ…!

ಬಿಹಾರದಲ್ಲಿ ಗೊಂದಲಕಾರಿ ಘಟನೆಯೊಂದು ತೆರೆದುಕೊಂಡಿದ್ದು, ʼಸತ್ತಿದ್ದಾನೆʼ ಎಂದು ಘೋಷಿಸಿದ್ದ ವ್ಯಕ್ತಿಯೊಬ್ಬ ಕೆಲವು ಗಂಟೆಗಳ ನಂತರ ಇದ್ದಕ್ಕಿದ್ದಂತೆ ಜೀವಂತವಾಗಿ ಎದ್ದು ಕುಳಿತಿದ್ದಾನೆ..! ಇದು ವೈದ್ಯರು ಮತ್ತು ಪೊಲೀಸರನ್ನು ಬೆರಗುಗೊಳಿಸಿತು. ನಂತರ ವ್ಯಕ್ತಿಯನ್ನು ಬಿಹಾರ ಷರೀಫ್‌ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ವರದಿಗಳ ಪ್ರಕಾರ, ವ್ಯಕ್ತಿ ಸ್ನಾನಗೃಹದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಇದು ಸ್ವಚ್ಛತಾ ಸಿಬ್ಬಂದಿ ಸ್ನಾನಗೃಹದ ಬಾಗಿಲು ತೆರೆಯಲು ಹೋದಾಗ ಬೆಳಕಿಗೆ ಬಂದಿದೆ. ಅವರು ಬಾಗಿಲು ದೂಡಿದಾಗ ಬಾಗಿಲು ಒಳಗಿನಿಂದ ಲಾಕ್‌ ಆಗಿತ್ತು. ಆಗ ಒಳಗೆ ಯಾರೋ ಇದ್ದಾರೆ ಎಂದು ಅವರಿಗೆ ಗೊತ್ತಾಗಿದೆ. ಆದರೆ ಕೂಗಿದರೆ ಅದಕ್ಕೆ ಯಾವುದೇ ಸ್ಪಂದನೆ ಇರಲಿಲ್ಲ. ಆಗ ಅವರು ಅಲ್ಲಿದ್ದ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆರೋಗ್ಯ ಕಾರ್ಯಕರ್ತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಶೌಚಾಲಯದ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಶೌಚಾಲಯದ ನೆಲದ ಮೇಲೆ ವ್ಯಕ್ತಿಯೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಪೊಲೀಸರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ಅವರ ನಾಡಿಮಿಡಿತವನ್ನು ಪರೀಕ್ಷಿಸಿದರು ಮತ್ತು ಅವರು ಸತ್ತಿದ್ದಾರೆ ಎಂದು ಪರಿಗಣಿಸಿದರು. ಶೌಚಾಲಯದಲ್ಲಿ ಶವ ಪತ್ತೆಯಾದ ಸುದ್ದಿ ಆಸ್ಪತ್ರೆಯಲ್ಲಿ ಕಾಳ್ಗಿಚ್ಚಿನಂತೆ ಹರಡಿತು, ನಂತರ ಜನರು ಅಲ್ಲಿ ಜಮಾಯಿಸಿದರು.
ಸಾಕ್ಷ್ಯ ಸಂಗ್ರಹಿಸಲು ವಿಧಿವಿಜ್ಞಾನ ಘಟಕವನ್ನು ಕರೆಸಲಾಯಿತು. ನಂತರ ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಒಯ್ಯಲು ಮುಂದಾದಾಗ, ವ್ಯಕ್ತಿಗೆ ಅನಿರೀಕ್ಷಿತವಾಗಿ ಪ್ರಜ್ಞೆ ಬಂದಿದೆ. ಆತ ಎದ್ದು ಕುಳಿತಿದ್ದನ್ನು ನೋಡಿ ಆಸ್ಪತ್ರೆ ಸಿಬ್ಬಂದಿ ಮತ್ತು ನೆರೆಹೊರೆಯವರು ಗಾಬರಿಗೊಂಡರು. ವ್ಯಕ್ತಿಯನ್ನು ರಾಕೇಶ ಕೇವಟ ಎಂದು ಗುರುತಿಸಲಾಗಿದ್ದು, ಇವರು ಜಿರೈನ್ ಗ್ರಾಮದವರಾಗಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಪೊಲೀಸ್‌ ಕುಟುಂಬದ ಹತ್ಯೆಯ ಘಟನೆಯ ನಂತರ ಉಪವಿಭಾಗೀಯ ಅಧಿಕಾರಿಯನ್ನು ಬೆನ್ನಟ್ಟಿದ ಉದ್ರಿಕ್ತ ಗುಂಪು...!

ವೈದ್ಯರು ಸಂಪೂರ್ಣ ಮೌಲ್ಯಮಾಪನದ ನಂತರ ರಾಕೇಶ ಉತ್ತಮ ಆರೋಗ್ಯದಲ್ಲಿದ್ದಾರೆ ಎಂಬುದು ಕಂಡುಬಂದಿದೆ. ಈ ಘಟನೆ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ. ರಾಕೇಶ ಅವರು ಸತ್ತಿಲ್ಲ, ಅವರು ಮದ್ಯ ಸೇವಿಸಿ ಮಲಗಿರುವುದಾಗಿ ಹೇಳಿದ್ದಾರೆ. ತನ್ನ ಪಾದರಕ್ಷೆಗಳನ್ನು ಬಾಗಿಲಿನ ಹೊರಗೆ ಬಿಟ್ಟು ಸ್ನಾಗೃಹದಲ್ಲಿ ಮಲಗಿದ್ದ. ಶುಚಿಗೊಳಿಸುವ ಸಿಬ್ಬಂದಿ ಬಾಗಿಲು ಬಡಿಯುವುದನ್ನು ಕೇಳಿಸಿಕೊಂಡರೂ ಆತ ಮದ್ಯದ ಅಮಲಿನಲ್ಲಿದ್ದ ಕಾರಣ ಪ್ರತ್ಯುತ್ತರ ನೀಡಲಿಲ್ಲ. ಬಾಗಿಲು ಒಡೆದು ಕೋಣೆಗೆ ಪ್ರವೇಶಿಸಿದ ನಂತರ, ಸಿಬ್ಬಂದಿ ತಪ್ಪಾಗಿ ಮೃತಪಟ್ಟಿದ್ದಾನೆ ಎಂದು ತಪ್ಪಾಗಿ ಭಾವಿಸಿದ್ದರು. ಈಗ ಈ ಸಂಬಂಧ ತನಿಖೆ ನಡೆಯುತ್ತಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement