ಬೆಂಗಳೂರು : 29ರ ಹರೆಯದ ಮಹಾಲಕ್ಷ್ಮಿ ಹತ್ಯೆ ಪ್ರಕರಣದ ಪ್ರಮುಖ ಟ್ವಿಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಆಕೆಯ ಸಹೋದ್ಯೋಗಿಯಾಗಿದ್ದ ಪ್ರಧಾನ ಆರೋಪಿ ಮುಕ್ತಿ ರಂಜನ್ ರಾಯ್ ಎಂಬಾತ ಬುಧವಾರ ಒಡಿಶಾದ ಭದ್ರಕ್ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಮಹಾಲಕ್ಷ್ಮಿ ಅವರ ದೇಹವನ್ನು 59 ತುಂಡುಗಳಾಗಿ ಕತ್ತರಿಸಿ ನಗರದ ವೈಯಾಲಿಕಾವಲ್‌ನಲ್ಲಿರುವ ಅವರ ನಿವಾಸದಲ್ಲಿ ರೆಫ್ರಿಜರೇಟರ್‌ನಲ್ಲಿ ತುಂಬಿಸಿ ಈತ ಪರಾರಿಯಾಗಿದ್ದ ಎಂಬ ಆರೋಪವಿತ್ತು. ಸೆಪ್ಟೆಂಬರ್ 21 ರಂದು ರೆಫ್ರಿಜರೇಟರ್‌ನಲ್ಲಿ ಮಹಾಲಕ್ಷ್ಮಿ ದೇಹದ ಭಾಗಗಳು ಪತ್ತೆಯಾಗಿವೆ.
ಭದ್ರಕ್ ಜಿಲ್ಲೆಯ ಸ್ಮಶಾನದ ಬಳಿಯ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರಾಯ್ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಕೊಲೆಯಾದ ಬಳಿಕ ಆತ ತನ್ನ ಗ್ರಾಮಕ್ಕೆ ಪರಾರಿಯಾಗಿದ್ದ. ಮಂಗಳವಾರ ರಾತ್ರಿ ಸ್ಕೂಟರ್‌ನಲ್ಲಿ ಆತ ತೆರಳಿದ್ದ. ಮೃತದೇಹದ ಬಳಿ ಸ್ಕೂಟರ್ ಪತ್ತೆಯಾಗಿದೆ. ಸ್ಕೂಟರ್‌ನಲ್ಲಿ ಲ್ಯಾಪ್‌ಟಾಪ್ ಪತ್ತೆಯಾಗಿದೆ. ಹೆಚ್ಚಿನ ವಿವರಗಳಿಗಾಗಿ ಪೊಲೀಸರು ಲ್ಯಾಪ್‌ಟಾಪ್ ಅನ್ನು ವಿಶ್ಲೇಷಿಸುತ್ತಿದ್ದಾರೆ.
ವಿಷಯ ತಿಳಿದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎನ್ನಲಾಗಿದೆ.
ಗೃಹ ಸಚಿವ ಜಿ ಪರಮೇಶ್ವರ ಅವರು ಪ್ರಮುಖ ಶಂಕಿತ ಒಡಿಶಾ ಮೂಲದವರಾಗಿದ್ದಾನೆ ಎಂದು ಖಚಿತಪಡಿಸಿದ್ದರು. ಬೆಂಗಳೂರು ಪೊಲೀಸರ ಐವರು ಸದಸ್ಯರ ತಂಡ ಮಂಗಳವಾರ ಒಡಿಶಾಗೆ ತೆರಳಿತ್ತು, ಕೊಲೆಯಲ್ಲಿ ಪ್ರಮುಖ ಶಂಕಿತನ ಕೈವಾಡದ ಬಗ್ಗೆ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಬೆಳಿಗ್ಗೆ ಧುಸುರಿ ಪೊಲೀಸರು ಅವರು ತಮ್ಮ ಮನೆಯ ಸಮೀಪವಿರುವ ಮರಕ್ಕೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದ್ದು, ಈ ಸಂಬಂಧ ಅಸಹಜ ಸಾವು (ಯುಡಿ) ಪ್ರಕರಣ ದಾಖಲಿಸಲಾಗಿದೆ.
ರಾಯ್ ಮತ್ತು ಮಹಾಲಕ್ಷ್ಮಿ ಮಲ್ಲೇಶ್ವರಂನ ಬಟ್ಟೆ ಶೋರೂಮ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಮಹಾಲಕ್ಷ್ಮಿಯು ಇತರ ಪುರುಷರೊಂದಿಗೆ ನಿಕಟ ಸಂಬಂಧ ಹೊಂದಿದ್ದು ಈ ಭೀಕರ ಹತ್ಯೆಯ ಹಿಂದಿನ ಕಾರಣ ಎಂದು ಹೇಳಲಾಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ