ಉತ್ತರ ಪ್ರದೇಶದ ಝಾನ್ಸಿಯಲ್ಲಿ ವಿಷಪೂರಿತ ಕಾಳಿಂಗ ಸರ್ಪದ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಪಿಟ್ ಬುಲ್ ನಾಯಿ ಒಂದು ಮಗುವಿನ ಜೀವ ಉಳಿಸಿದೆ. ಸೆ.23ರಂದು ಉತ್ತರ ಪ್ರದೇಶದ ಝಾನ್ಸಿಯ ಶಿವಗಣೇಶ ಕಾಲೋನಿಯಲ್ಲಿರುವ ಮನೆಯ ಕೆಲಸದಾಕೆಯ ಮಕ್ಕಳು ಆಟವಾಡುತ್ತಿದ್ದ ಮನೆಯ ತೋಟಕ್ಕೆ ಹಾವು ನುಗ್ಗಿದಾಗ ಈ ಘಟನೆ ನಡೆದಿದೆ.
ಕಾಳಿಂಗ ಸರ್ಪವನ್ನು ನೋಡಿದ ಮಕ್ಕಳು ಕಿರುಚುವುದು ಮತ್ತು ಸಹಾಯಕ್ಕಾಗಿ ಜೋರಾಗಿ ಅಳುವುದನ್ನು ಕೇಳಿದಾಗ ಮನೆಯ ತೋಟದ ಇನ್ನೊಂದು ತುದಿಯಲ್ಲಿ ಕಟ್ಟಲಾಗಿದ್ದ ಪಿಟ್ ಬುಲ್ ಜೆನ್ನಿ (ಹೆಣ್ಣು ನಾಯಿ), ಕಟ್ಟಿದ್ದ ಹಗ್ಗ ಹರಿದುಕೊಂಡು ಮಕ್ಕಳ ರಕ್ಷಣೆಗೆ ಧಾವಿಸಿದೆ.
ವೀಡಿಯೊವೊಂದರಲ್ಲಿ, ಪಿಟ್ ಬುಲ್ ತನ್ನ ದವಡೆಗಳ ನಡುವೆ ಕಾಳಿಂಗ ಸರ್ಪವನ್ನು ಕಚ್ಚಿ ಹಿಡಿದು ಆಕ್ರಮಣಕಾರಿಯಾಗಿ ಅದನ್ನು ಬಾಯಲ್ಲಿ ಆಕಡೆ ಈಕಡೆ ಮಾಡುವುದನ್ನು ನೋಡಬಹುದು. ನಾಯಿ ಸುಮಾರು ಐದು ನಿಮಿಷಗಳ ಕಾಲ ಕಾದಾಟವನ್ನು ಮುಂದುವರೆಸಿತು ಮತ್ತು ನಂತರದ ಕಾಳಿಂಗ ಸರ್ಪವನ್ನು ಸಾಯಿಸಿದೆ.
ಜೆನ್ನಿಯ (ಸಾಕು ನಾಯಿ) ಮಾಲೀಕ ಪಂಜಾಬ್ ಸಿಂಗ್ ಪ್ರಕಾರ, ಜೆನ್ನಿ ಹಾವನ್ನು ಕೊಂದು ಜೀವ ಉಳಿಸಿದ್ದು ಇದೇ ಮೊದಲಲ್ಲ. ಇಲ್ಲಿಯವರೆಗೆ, ಜೆನ್ನಿ ಸುಮಾರು ಎಂಟರಿಂದ ಹತ್ತು ಹಾವುಗಳನ್ನು ಕೊಂದಿದೆ ಎಂದು ಅವರು ಹೇಳಿದ್ದಾರೆ.
ಘಟನೆಯ ದಿನ, ಇತರ ನಾಯಿಗಳನ್ನೂ ಪಂಜಾಬ್ ಸಾಕಿರುವ ಸಿಂಗ್ ಮನೆಯಲ್ಲಿ ಇರಲಿಲ್ಲ. ಹಾವು ಮನೆಗೆ ನುಗ್ಗಿದ್ದರೆ ಏನು ಬೇಕಾದರೂ ಆಗಬಹುದಿತ್ತು ಎಂದು ಹೇಳಿದರು.
“ನಾನು ಈ ವೇಳೆ ಮನೆಯಲ್ಲಿ ಇರಲಿಲ್ಲ, ಆದರೆ ನನ್ನ ಮಗ ಮತ್ತು ಮಕ್ಕಳು ಇಲ್ಲಿದ್ದರು. ಇದು ನಾವು ಎದುರಿಸಿದ ಮೊದಲ ಹಾವು ಅಲ್ಲ, ಏಕೆಂದರೆ ನಮ್ಮ ಮನೆ ಹೊಲಗಳ ಸಮೀಪದಲ್ಲಿದೆ ಮತ್ತು ಮಳೆಗಾಲದಲ್ಲಿ ಹಲವಾರು ಹಾವುಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿಯವರೆಗೆ, ಜೆನ್ನಿ ಸುಮಾರು 8 ರಿಂದ 10 ಹಾವುಗಳನ್ನು ಕೊಂದಿದೆ” ಎಂದು ಅವರು ಹೇಳಿದರು.
ಕಪ್ಪು ಹಾವು ಕಾಣಿಸಿಕೊಂಡಾಗ ಮನೆಯ ಸಹಾಯಕಿಯ ಮಕ್ಕಳು ಆಟವಾಡುತ್ತಿದ್ದರು, ಮಕ್ಕಳು ಕಿರುಚಿದಾಗ ಹಾವು ಓಡಿಹೋಗಲು ತಿರುಗಿತು, ಆಗ ನಮ್ಮ ಪಿಟ್ ಬುಲ್ ಅದನ್ನು ಗಮನಿಸಿ, ಅದರ ಹಗ್ಗ ಹರಿದುಕೊಂಡು ಹೋಗಿ ಕಾಳಿಂಗ ಸರ್ಪದ ಮೇಲೆ ದಾಳಿ ಮಾಡಿ ಅದನ್ನು ಕೊಂದಿದೆ ಎಂದು ಪಂಜಾಬ್ ಸಿಂಗ್ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ