ವೀಡಿಯೊ| ಹಿಂದಿನ ರಾಜ್ಯಪಾಲರ ಕ್ರಮ ಸಮರ್ಥಿಸಿಕೊಂಡಿದ್ದ ಸಿದ್ದರಾಮಯ್ಯನವರ ಹಳೆ ವೀಡಿಯೊ ಹಂಚಿಕೊಂಡು ಟಾಂಗ್‌ ನೀಡಿದ ಸ್ನೇಹಮಯಿ ಕೃಷ್ಣ…!

ಬೆಂಗಳೂರು : ರಾಜ್ಯಪಾಲ ಥಾವರಚಂದ ಗೆಹ್ಲೋಟ್‌ ಕಾರ್ಯ ವೈಖರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌‍ ನಾಯಕರು ಟೀಕಿಸುತ್ತಿರುವ ಬೆನ್ನಲ್ಲೇ ಈಗ, ಸಿದ್ದರಾಮಯ್ಯ ಈ ಹಿಂದೆ ರಾಜ್ಯಪಾಲರ ಪಾತ್ರದ ಕುರಿತು ಆಡಿರುವ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.
ದೂರುದಾರ ಸ್ನೇಹಮಯಿ‌ ಕೃಷ್ಣ (Snehamayi Krishna) ಅವರು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಸಿದ್ದರಾಮಯ್ಯ ಅವರ 2011ರ ವೀಡಿಯೊ ಹಂಚಿಕೊಳ್ಳುವ ಮೂಲಕ ಹಾಕಿ ಟಾಂಗ್ ಕೊಟ್ಟಿದ್ದಾರೆ.

2011ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿದ್ದ ಹಂಸರಾಜ ಭಾರದ್ವಾಜ್‌ ಅವರು ಅಂದಿನ ಬಿಜೆಪಿ ಸರ್ಕಾರಕ್ಕೆ ಒಂದಿಲ್ಲೊಂದು ರೀತಿ ಚಾಟಿ ಬೀಸುತ್ತಿದ್ದರು. ಆಗ ಬಿಜೆಪಿ ನಾಯಕರು ಹಂಸರಾಜ ಭಾರದ್ವಾಜ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು ಹಾಗೂ ಅವರನ್ನು ವಾಪಸ್‌‍ ಕರೆಸಿಕೊಳ್ಳಬೇಕೆಂದು ರಾಷ್ಟ್ರಪತಿಗೆ ದೂರು ನೀಡಿದ್ದರು.
ಆಗ ವಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಬಿಜೆಪಿಯ ಆರೋಪಕ್ಕೆ ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ ಭಾರದ್ವಾಜ ಅವರನ್ನು ಸಮರ್ಥಿಸಿಕೊಂಡು ಆಡಿರುವ ಮಾತುಗಳುಳ್ಳ ವೀಡಿಯೊವನ್ನು ಸ್ನೇಹಮಯಿ ಕೃಷ್ಣ ಅವರು ಹಂಚಿಕೊಂಡಿದ್ದಾರೆ.

ನನ್ನ ಪ್ರಕಾರ ರಾಷ್ಟ್ರಪತಿಗಳು ಸಂವಿಧಾನದ ಮುಖ್ಯಸ್ಥರು. ರಾಷ್ಟ್ರಪತಿಗಳ ಪ್ರತಿನಿಧಿಗಳಾಗಿ ರಾಜ್ಯಪಾಲರುಗಳು ಪ್ರತಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಾರೆ. ಒಂದು ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂದು ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿರುತ್ತದೆ. ಹಾಗೆಯೇ ಸರ್ಕಾರ ತಪ್ಪು ಮಾಡಿದಾಗ, ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಹಾಗೂ ಬುದ್ಧಿ ಹೇಳುವ ಅಧಿಕಾರ ರಾಜ್ಯಪಾಲರಿಗೆ ಇದೆ. ಹೀಗಿರುವಾಗ ಅವರು ಅಧಿಕಾರವನ್ನು ಚಲಾಯಿಸಿದಾಗ, ಅದನ್ನು ರಾಜಕೀಯ ಪ್ರೇರಿತ, ವಿರೋಧ ಪಕ್ಷದವರು ಮಾಡಿಸುತ್ತಿದ್ದಾರೆ ಎಂದು ಹೇಳಿದರೆ, ಜನ ಅದನ್ನು ನಂಬುವುದಿಲ್ಲ ಎಂದು ಸಿದ್ದರಾಮಯ್ಯ ಆಗ ರಾಜ್ಯಪಾಲರಾಗಿದ್ದ ಹಂಸರಾಜ ಭಾರದ್ವಾಜ ಅವರನ್ನು ಸಮರ್ಥಿಸಿಕೊಂಡಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ಪ್ರಮುಖ ಸುದ್ದಿ :-   ಕೆನಡಾದಿಂದ ದೊಡ್ಡ ರಾಜತಾಂತ್ರಿಕ ವಿವಾದ ; ಕೆನಡಾದ ಭಾರತೀಯ ಹೈಕಮಿಷನರ್ ನನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದ ಸರ್ಕಾರ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement