ಮುಂಬೈ: ಪ್ರಮುಖ ನಿರ್ಧಾರದಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನವೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ರಾಜ್ಯ ಸರ್ಕಾರವು ದೇಸಿ ಹಸುಗಳನ್ನು ‘ರಾಜ್ಯ ಮಾತಾ-ಗೋಮಾತೆ’ ಎಂದು ಘೋಷಣೆ ಮಾಡಿದೆ.
ವೇದಗಳ ಕಾಲದಿಂದಲೂ ಹಸುಗಳು ಹೊಂದಿರುವ ಪ್ರಾಮುಖ್ಯತೆಯನ್ನು ಪರಿಗಣಿಸಿ ಅವುಗಳನ್ನು ‘ರಾಜ್ಯ ಮಾತಾ-ಗೋಮಾತೆ’ ಎಂದು ಘೋಷಣೆ ಮಾಡಿರುವುದಾಗಿ ಸರ್ಕಾರದ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಮಾನವನ ಪೋಷಣೆಯಲ್ಲಿ ದೇಸಿ ಹಸುಗಳ ಹಾಲಿನ ಪ್ರಾಮುಖ್ಯತೆ, ಆಯುರ್ವೇದ ಮತ್ತು ಪಂಚಗವ್ಯ ಚಿಕಿತ್ಸೆ ಮತ್ತು ಸಾವಯವ ಕೃಷಿಯಲ್ಲಿ ಹಸುವಿನ ಗೊಬ್ಬರದ ಬಳಕೆ ಇತರ ಅಂಶಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಗೋ ಮಾತೆ ಭಾರತೀಯ ಪ್ರಾಚೀನ ಇತಿಹಾಸದಲ್ಲಿಯೂ ಸಾಂಸ್ಕೃತಿಕವಾಗಿ, ವೈಜ್ಞಾನಿಕಾವಾಗಿ, ಆಧ್ಯಾತ್ಮಿಕವಾಗಿ ಹಾಗೂ ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿದೆ. ವೇದಗಳ ಕಾಲದಿಂದಲ್ಲೂ ಗೋವಿನ ಪೂಜೆ ನಡೆಯುತ್ತಿತ್ತು. ಪವಿತ್ರ ಗೋಮಾತೆಯನ್ನು ರಾಜ್ಯದ ಅಧಿಕೃತ ರಾಜ್ಯಮಾತಾ ಎಂದು ಏಕನಾಥ ಶಿಂಧೆ ಘೋಷಿಸಿದ್ದಾರೆ.
ಭಾರತದ ಅಮೂಲ್ಯ ಗೋವಿನ ತಳಿಯನ್ನು ನಾವು ಪೂಜಿಸುತ್ತೇವೆ. ಗೋವು ನಮಗೆ ತಾಯಿ. ಗೋವಿನ ಹಾಲು ಪ್ರತಿಯೊಬ್ಬರ ಆರೋಗ್ಯಕ್ಕೆ ಅತೀ ಮುಖ್ಯ. ಗೋವಿನ ಸೆಗಣಿ ಹಾಗೂ ಗಂಜಲ ಆಯುರ್ವೇದದಲ್ಲಿ ಮಹತ್ವ ಪಡೆದುಕೊಂಡಿದೆ. ಹಲವು ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಪೂಜ್ಯನೀಯ ಗೋಮಾತೆಯನ್ನು ರಾಜ್ಯದ ಅಧಿಕೃತ ರಾಜ್ಯಮಾತೆಯಾಗಿ ಘೋಷಿಸಿದ್ದೇವೆ ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ.
ಭಾರತದಲ್ಲಿ ದೇಶಿಯ ತಳಿಗಳು ಸಂಖ್ಯೆ ಕುಸಿಯುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಶಿಂಧೆ ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಅಧಿಕೃತ ಆದೇಶಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಭಾರತೀಯ ಗೋವುಗಳ ತಳಿಗಳನ್ನು ಸಂರಕ್ಷಿಸುವ, ಬೆಳೆಸುವ ಕೆಲಸವಾಗಬೇಕು. ರೈತರಿಗ ದೇಶಿ ತಳಿಗಳ ಸಾಕಣೆಗೆ ಪ್ರೋತ್ಸಾಹ ಸಿಗಬೇಕು ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ