ವೀಡಿಯೊ..| ಅಸ್ಸಾಂನಲ್ಲಿ ಬೈಕ್ ಸವಾರನನ್ನು ಅಟ್ಟಾಡಿಸಿಕೊಂಡು ಹೋಗಿ ಕೊಂದುಹಾಕಿದ ಘೇಂಡಾಮೃಗ…

ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಪೊಬಿತೋರಾ ವನ್ಯಜೀವಿ ಅಭಯಾರಣ್ಯದ ಬಳಿ ಘೇಂಡಾಮೃಗವೊಂದು ಅಟ್ಟಿಸಿಕೊಂಡು ಹೋಗಿ ದಾಳಿ ಮಾಡಿದ ನಂತರ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಸದ್ದಾಂ ಹುಸೇನ್ (37 ವರ್ಷ) ಘಟನೆಯ ಸ್ಥಳದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕಾಮ್ರೂಪ್ ಮೆಟ್ರೋಪಾಲಿಟನ್ ಜಿಲ್ಲೆಯ ನಿವಾಸಿ ಎಂದು ಗುರುತಿಸಲಾಗಿದೆ.
ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ವನ್ಯಜೀವಿ ಅಭಯಾರಣ್ಯದಿಂದ ಹೊರಬಂದ ಘೇಂಡಾಮೃಗವು ಅವರ ಬಳಿಗೆ ಬಂದಿತು.
ವೈರಲ್ ಆಗಿರುವ ವೀಡಿಯೊದಲ್ಲಿ, ಗಂಟೆಗೆ 55 ಕಿಲೋಮೀಟರ್‌ಗಳವರೆಗೆ ಓಡಬಲ್ಲ ಘೇಂಡಾಮೃಗವು ಆತನನ್ನು ಬೆನ್ನಟ್ಟುತ್ತಿದ್ದಂತೆ ತನ್ನ ಬೈಕ್‌ನಿಂದ ಬೇಗನೆ ಇಳಿದು ತೆರೆದ ಮೈದಾನಕ್ಕೆ ವೈಕ್ತಿ ಓಡುತ್ತಿರುವುದನ್ನು ಕಾಣಬಹುದು.
ವರದಿಗಳ ಪ್ರಕಾರ, ಘೇಂಡಾಮೃಗವು ವನ್ಯಜೀವಿ ಅಭಯಾರಣ್ಯದಿಂದ ಹೊರಬಂದು ತನ್ನ ಮೋಟಾರ್‌ಸೈಕಲ್‌ನಲ್ಲಿ ಮಯೋಂಗ್‌ನಿಂದ ಚಮಟಾ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ ಬೈಕ್‌ ಸವಾರನ ಮೇಲೆ ಅಭಯಾರಣ್ಯದ ಬಳಿಯ ಹಾಡುಕ್ ಸೇತುವೆಯ ಬಳಿ ದಾಳಿ ಮಾಡಿದೆ.

ಸುಮಾರು 2800 ಕಿಲೋಗ್ರಾಂಗಳಷ್ಟು ತೂಕವಿರುವ ಘೇಂಡಾಮೃಗವನ್ನು ಹೆದರಿಸಲು ಸ್ಥಳೀಯರು ಬೊಬ್ಬೆ ಹೊಡೆಯುವುದನ್ನು ಸಹ ವೀಡಿಯದಲ್ಲಿ ಕೇಳಬಹುದು. ನಂತರ ಹೊಲದಲ್ಲಿ ತಲೆ ಒಡೆದ ಸ್ಥಿತಿಯಲ್ಲಿ ಹುಸೇನ್ ಪತ್ತೆಯಾಗಿದ್ದಾರೆ. “ಘೇಂಡಾಮೃಗವು ವನ್ಯಜೀವಿ ಅಭಯಾರಣ್ಯದಿಂದ ಹೊರಬಂದಿದೆ. ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಸ್ಸಾಂನ ರಾಜಧಾನಿ ಗುವಾಹತಿಯ ಉಪನಗರಗಳಲ್ಲಿ ನೆಲೆಗೊಂಡಿರುವ ಪೊಬಿಟೋರಾ ವನ್ಯಜೀವಿ ಅಭಯಾರಣ್ಯವು ದೇಶದಲ್ಲಿ ಒಂದು ಕೊಂಬಿನ ಘೇಂಡಾಮೃಗಗಳ ಹೆಚ್ಚಿನ ಸಂಖ್ಯೆಯನ್ನು ಹೊಂದಿದೆ.

ವಿಶ್ವ ಘೇಂಡಾಮೃಗ ದಿನದಂದು ಈ ತಿಂಗಳು ಬಿಡುಗಡೆಯಾದ ದತ್ತಾಂಶವು ಕಳೆದ ನಾಲ್ಕು ದಶಕಗಳಲ್ಲಿ ಭಾರತದ ಒಂದು ಕೊಂಬಿನ ಏಷ್ಯನ್ ಘೇಂಡಾಮೃಗಗಳ ಸಂಖ್ಯೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ. ನಾಲ್ಕು ದಶಕಗಳ ಹಿಂದೆ 1,500 ಇದ್ದ ಪ್ರಾಣಿಗಳ ಘೇಂಡಾಮೃಗಗಳ ಸಂಖ್ಯೆ ಈಗ 4,000 ಕ್ಕೂ ಹೆಚ್ಚಿದೆ. ಮೂರು ಏಷ್ಯನ್ ಜಾತಿಗಳಲ್ಲಿ ದೊಡ್ಡದಾದ ವಯಸ್ಕ ಭಾರತೀಯ ಘೇಂಡಾಮೃಗವು ಸುಮಾರು 50 ವರ್ಷಗಳವರೆಗೆ ಬದುಕಬಲ್ಲದು. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಅಂದಾಜು 80%ರಷ್ಟು ಪ್ರಪಂಚದ ಒಂದು ಕೊಂಬಿನ ಘೇಂಡಾಮೃಗಗಳ ನೆಲೆಯಾಗಿದೆ.

ಪ್ರಮುಖ ಸುದ್ದಿ :-   ಬೆಟ್ಟಿಂಗ್ ಆ್ಯಪ್‌ ಪ್ರಚಾರ : ನಟರಾದ ರಾಣಾ ದಗ್ಗುಬಾಟಿ, ವಿಜಯ ದೇವರಕೊಂಡ, ಪ್ರಕಾಶರಾಜ ಸೇರಿ 25 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement