ಆಹಾರ ಅರಸಿ ನಾಡಿಗೆ ಬಂದ ಕಾಡಾನೆ ಕಂದಕಕ್ಕೆ ಬಿದ್ದು ಸಾವು

ಮೈಸೂರು: ನಾಡ ಹಬ್ಬ ದಸರಾ ಸಂದರ್ಭದಲ್ಲೇ ಕಾಡಾನೆಯೊಂದು ಕಂದಕಕ್ಕೆ ಬಿದ್ದು ಸಾವಿಗೀಡಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೆಲ್ಲುಪುರ ಗ್ರಾಮದ ಮಲ್ಲಹಳ್ಳಿ ಬಳಿ ನಡೆದಿದೆ ಎಂದು ವರದಿಯಾಗಿದೆ.
ಮೃತಪಟ್ಟ ಆನೆಗೆ ಸುಮಾರು 40-೪೫ ವರ್ಷ ಆಗಿರಬಹುದು ಎಂದು ಹೇಳಲಾಗಿದೆ. ಆಹಾರ ಅರಸುತ್ತ ಬಂದ ಕಾಡಾನೆ ಗೊತ್ತಾಗದೆ ಕಂದಕಕ್ಕೆ ಬಿದ್ದಿದ್ದು, ಪರಿಣಾಮ ದಾರುಣವಾಗಿ ಮೃತಪಟ್ಟಿದೆ.
ಮಲ್ಲಹಳ್ಳಿ ಗ್ರಾಮದ ಬಳಿ ಆನೆಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಕಂದಕಗಳನ್ನು ನಿರ್ಮಿಸಲಾಗಿತ್ತು ಎಂದು ಹೇಳಲಾಗಿದೆ. ಆಹಾರ ಅರಸಿ ಬಂದ ಆನೆ ಈ ಕಂದಕಕ್ಕೆ ಬಿದ್ದು ಮೃತಪಟ್ಟಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಸಾವಿನ ನಂತರವೂ ಮಕ್ಕಳು, ಮೊಮ್ಮಕ್ಕಳೊಡನೆ ಮಾತಾಡಬಹುದು...! ಭವಿಷ್ಯ ನುಡಿದ ಗೂಗಲ್ ಎಕ್ಸ್ ಸಂಸ್ಥಾಪಕ ಸೆಬಾಸ್ಟಿಯನ್ ಥ್ರೂನ್

ನಿಮ್ಮ ಕಾಮೆಂಟ್ ಬರೆಯಿರಿ

advertisement