ವೀಡಿಯೊ..| ಆಘಾತಕಾರಿ ಕಾರಣಕ್ಕೆ ಪಾಕಿಸ್ತಾನದಲ್ಲಿ ಅನಾಥ ಹುಡುಗಿಯರ ಜತೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿ ಹೊರನಡೆದ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್

ನವದೆಹಲಿ: ತೀವ್ರಗಾಮಿ ಇಸ್ಲಾಮಿಕ್ ಪ್ರಚಾರಕ ಝಾಕಿರ್ ನಾಯ್ಕ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅನಾಥಾಶ್ರಮದಲ್ಲಿ ನಡೆದ ಅವರ ಆಘಾತಕಾರಿ ವರ್ತನೆಯ ವೀಡಿಯೊ ವೈರಲ್ ಆಗಿದೆ.
ವಿವಾದಿತ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಪಾಕಿಸ್ತಾನದ ಯುವ ಅನಾಥ ಬಾಲಕಿಯರಿಗೆ ಪ್ರಶಸ್ತಿ ನೀಡಲು ನಿರಾಕರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಾಕಿಸ್ತಾನ್ ಸ್ವೀಟ್ ಹೋಮ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾಕಿರ್ ನಾಯ್ಕ್ ಥಟ್ಟನೆ ವೇದಿಕೆಯಿಂದ ನಿರ್ಗಮಿಸುತ್ತಿರುವುದನ್ನು ವೀಡಿಯೊ ತೋರಿಸಿದೆ.
ಯುವ ಅನಾಥ ಬಾಲಕಿಯರಿಗೆ ಪ್ರಶಸ್ತಿಗಳನ್ನು ನೀಡಲು ಝಾಕೀರ್‌ ನಾಯ್ಕ್‌ ಅವರನ್ನು ಆಹ್ವಾನಿಸಲಾಯಿತು ಆದರೆ ಆತಿಥೇಯರು ಅವರನ್ನು ಸನ್ಮಾನಿಸಲು ಕರೆದಾಗ ಅವರು ವೇದಿಕೆಯಿಂದ ಹೊರನಡೆದರು.

ಅನಾಥಾಶ್ರಮದ ಅಧಿಕಾರಿಗಳು ಹುಡುಗಿಯರನ್ನು “ಹೆಣ್ಣುಮಕ್ಕಳು” ಎಂದು ಪರಿಚಯಿಸಿದ್ದರಿಂದ ಝಾಕಿರ್ ನಾಯ್ಕ್ ಕೋಪದಿಂದ ವೇದಿಕೆಯನ್ನು ತೊರೆದರು ಎಂದು ಬ್ರಿಟನ್‌ ಮೂಲದ ಪ್ರಭಾವಿ ಸಾಮಾಜಿಕ ಮಾಧ್ಯಮ ಬಳಕೆದಾರರ ಇಮ್ತಿಯಾಜ್ ಮಹಮೂದ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. “ಮದುವೆಗೆ ಅರ್ಹರಾಗಿರುವುದರಿಂದ ಈ ಹುಡುಗಿಯರನ್ನು ‘ಹೆಣ್ಣುಮಕ್ಕಳು’ ಎಂದು ಕರೆಯಲಾಗುವುದಿಲ್ಲ ಎಂದು ಝಾಕಿರ್ ನಾಯ್ಕ್ ಹೇಳಿದರು, “ನೀವು ಅವರನ್ನು ಮುಟ್ಟಲು ಅಥವಾ ಅವರನ್ನು ನಿಮ್ಮ ಹೆಣ್ಣುಮಕ್ಕಳು ಎಂದು ಕರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು ಎಂದು ಇಮ್ತಿಯಾಜ್ ಮಹಮೂದ್ ತಿಳಿಸಿದ್ದಾರೆ.

ಝಾಕಿರ್ ನಾಯ್ಕ್ ಅವರ ಪ್ರತಿಕ್ರಿಯೆಯನ್ನು ವಿವರಿಸಿದ ಇಮ್ತಿಯಾಜ್ ಮಹಮೂದ್, ಈ ಹುಡುಗಿಯರು ಮದುವೆಯ ವಯಸ್ಸಿನವರಾಗಿದ್ದಾರೆ”, ಆದ್ದರಿಂದ ಅವರನ್ನು ಅವರ ಹೆಣ್ಣುಮಕ್ಕಳೆಂದು ಪರಿಚಯಿಸುವಂತಿಲ್ಲ ಎಂಬುದು “ಜಾಕಿರ್ ನಾಯ್ಕ್ ವಾದವಾಗಿದೆ ಎಂದು  ಉಲ್ಲೇಖಿಸಿದ್ದಾರೆ.
ಝಾಕಿರ್ ನಾಯ್ಕ್ ಅವರು ಜನರನ್ನು ಪ್ರಚೋದಿಸುವ ತಮ್ಮ ಪ್ರಚೋದಕ ಭಾಷಣಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಪೀಸ್ ಟಿವಿ ಎಂಬ ಚಾನೆಲ್ ಅನ್ನು ನಡೆಸುತ್ತಿದ್ದಾರೆ, ಅದರ ವಿವಾದಾತ್ಮಕ ವಿಷಯದಿಂದಾಗಿ ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ನಿಷೇಧಿಸಲಾಗಿದೆ. ಕೆನಡಾ ಮತ್ತು ಯುಕೆ ಅವರಿಗೆ ಪ್ರವೇಶವನ್ನು ನಿರಾಕರಿಸಿವೆ.

ಪ್ರಮುಖ ಸುದ್ದಿ :-   ವೀಡಿಯೊ...| ಹಾಸಿಗೆ, ಶೌಚಾಲಯ, ಮೈಕ್ರೋವೇವ್ ಒಲೆ, ಆಹಾರ ತಯಾರಿಕೆ...: ಅಮೆರಿಕದ ಬಿ-2 ಬಾಂಬರ್ ಯುದ್ಧ ವಿಮಾನ ಹಾರುವ ಹೋಟೆಲ್ ಕೂಡ ಹೌದು..!

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement